ಜುಲೈ 29,30 ರಂದು ಭಾಗವತದಲ್ಲಿ – ಕಪಿಲ ಉಪದೇಶ ಪ್ರವಚನ.
ಚಳ್ಳಕೆರೆ ಜು.24





ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಜುಲೈ 29,30 ರ ಮಂಗಳವಾರ ಮತ್ತು ಬುಧವಾರ ಸಂಜೆ 5.30 ರಿಂದ 7.30ರ ವರೆಗೆ ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ಪೂಜ್ಯ ಮಾತಾಜೀ ಅಮೂಲ್ಯಮಯೀ ಅವರಿಂದ “ವಿಶೇಷ ಭಜನೆ” ಮತ್ತು “ಶ್ರೀಮದ್ ಭಾಗವತದಲ್ಲಿ ಕಪಿಲ ಉಪದೇಶ” ಎಂಬ ವಿಷಯವಾಗಿ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.