ಚಿನ್ನದ ಹಗರಿ ನದಿಗೆ ಬಾಗಿನ ಅರ್ಪಣೆ.
ಖಾನಾ ಹೊಸಹಳ್ಳಿ ಅ.13

ಈ ವರ್ಷ ತಾಲೂಕಿನಲ್ಲಿ ಉತ್ತಮ ಮಳೆ ಹಿನ್ನೆಲೆ ಸತತ ಮೂರು-ನಾಲ್ಕು ಬಾರಿ ತುಂಬಿ ಹರಿದ ಚಿನ್ನದ ಹಗರಿ ನದಿಗೆ ಗ್ರಾ.ಪಂ ಅಧ್ಯಕ್ಷ ರಾಮಚಂದ್ರಪ್ಪ ನೇತೃತ್ವದಲ್ಲಿ ಕುಟುಂಬಸ್ಥರು ಹಾಗೂ ಊರಿನ ಮುಖಂಡರು, ಗ್ರಾಮಸ್ಥರು ಬಾಗಿನ ಅರ್ಪಿಸಿದರು. ತಾಲ್ಲೂಕಿನ ಹೂಡೇಂ ಗ್ರಾಮದಲ್ಲಿ ಹರಿಯುತ್ತಿರುವ ಗಡಿ ಗ್ರಾಮಗಳ ಜೀವನಾಡಿ ಯಾಗಿರುವ ಚಿನ್ನದ ಹಗರಿ ಉಪನದಿ ಮಳೆಯಿಲ್ಲದೆ ಸುಮಾರು ವರ್ಷಗಳಿಂದ ಬತ್ತಿ ಹೋಗಿತು. ಈ ವರ್ಷವೂ ಉತ್ತಮ ಮಳೆಯಿಂದ ಮೂರ್ನಾಲ್ಕು ಬಾರಿ ಚಿನ್ನದ ಹಗರಿ ನಂದಿ ತುಂಬಿದೇ. ಚಿತ್ರದುರ್ಗ, ದಾವಣಗೆರೆ, ಜಗಲೂರು, ಚಳ್ಳಕೆರೆ, ಕೂಡ್ಲಿಗಿ ತಾಲೂಕಿನ ಮೂಲಕ ಹರಿಯುವ ಚಿನ್ನದ ಹಗರಿ (ಜಿನಗಿಹಳ್ಳವು) ಸಾಂಸ್ಕೃತಿಕವಾಗಿ ಮಹತ್ವ ಪಡೆದಿದೆ. ಇದನ್ನು ಚಿನ್ನದಹಗರಿ, ಚಿಕ್ಕಹಗರಿ, ಸಣ್ಣ ಹಗರಿ, ಜಿನಗಿಹಳ್ಳ ಎಂದು ನಾನಾ ರೀತಿಯಲ್ಲಿ ಕರೆಯುವುದುಂಟು. ಸುಮಾರು 300 ಕಿ.ಮೀ ದೂರ ಹರಿಯುವ ನದಿಯಾಗಿದೆ. ಈ ನದಿಯು ಆಂಧ್ರ ಪ್ರದೇಶಕ್ಕೆ ಹರಿದು ಹೋಗುತ್ತದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಮಚಂದ್ರಪ್ಪ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಗಡಿ ಗ್ರಾಮಗಳ ಜೀವನಾಡಿ ಯಾಗಿರುವ ಚಿನ್ನದ ಹಗರಿ ಹಳ್ಳವು ಸತತ ಮೂರು ನಾಲ್ಕು ಬಾರಿ ಭರ್ತಿಯಾಗಿ ಹರಿಯುತ್ತಿರುವುದು ಗ್ರಾಮದ ರೈತರು ಸೇರಿದಂತೆ ಎಲ್ಲಾ ಜನರಿಗೂ ಸಂತಸ ತಂದಿದೆ. ಜಲ ಸಮೃದ್ಧಿ ಗ್ರಾಮದ ಜನರ ಹಲವು ರೀತಿಯ ಭವನೆಗಳನ್ನು ದೂರ ಮಾಡಿದೆ. ಈ ಹಿನ್ನೆಲೆಯಲ್ಲಿ ನದಿಗೆ ಬಾಗಿನ ಅರ್ಪಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಜರಗು ಬೋರಯ್ಯ, ಪರುವಯ್ಯ, ಬಗಲರ್ ಪಾಪಣ್ಣ, ಜಿ ಬೋಸಯ್ಯ, ಗ್ರಾ.ಪಂ ಸದಸ್ಯರಾದ ಸುಂದರಮ್ಮ ಮಲ್ಲಿಕಾರ್ಜುನ, ಶಶಿಕಲಾ ಜಯಣ್ಣ, ಹಾಗೂ ಮಲ್ಲಿಕಾರ್ಜುನ ರೆಡ್ಡಿ, ಬಂಗಾರಯ್ಯ, ಸಣ್ಣ ಈರಣ್ಣ, ಹೂಡೇಂ ಶ್ರೀ ಸಿದ್ದೇಶ್ವರ ಮಠದ ಹಿರಿಯ ಅರ್ಚಕರಾದ ಸಿದ್ದಲಿಂಗ ಸ್ವಾಮಿ, ಸುರೇಶ್ ಸೇರಿದಂತೆ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ