ಆರಾಧ್ಯ ದೇವ ಭಂಡಾರ ದೊಡೆಯ ಶ್ರೀ ರಾವುತರಾಯ ಮಲ್ಲಯ್ಯ ಜಾತ್ರಾ – ಮಹೋತ್ಸವ ಸಂಭ್ರಮ ಪ್ರಾರಂಭ.
ದೇವರ ಹಿಪ್ಪರಗಿ ಅ.13

ನಾಡ ಜನರ ಕ್ಷಣೆಗೆ ದೈತ್ಯೆರ ಮರ್ಧನಕ್ಕಾಗಿ ಸೃಷ್ಠಕರ್ತ ಶಿವನು ಅವತರಿಸಿ ಭೂಮಿಗೆ ಬಂದ ಭಾಗ್ಯದ ಭಗವಂತ ಭಂಡಾರದೊಡೆಯ ಶ್ರೀರಾವತರಾಯ ಜಾತ್ರಾ ಮಹೋತ್ಸವ ನಾಡ ಹಬ್ಬ ಮೈಸೂರು ದಸರಾ ಸರಿಸಮ ಗ್ರಾಮದ ಸುತ್ತಮುತ್ತ ಸದ್ಭಕ್ತ ಆಕರ್ಷಿಣೀಯ ಸಂಭ್ರಮ ಮನೋಭಿಲಾಶೆಯ ಈಡೇರಿಕೆಯ ಸರ್ವ ಜನಾಂಗದವರು ಏಳಕೋಟಿ ಏಳುಕೋಟೆ ಯುಗೇ ಯುಗೇ ಶ್ರೀ ರಾವತರಾಯ ಮಲ್ಲಯ್ಯ ಭಂಡಾರದಲ್ಲಿ ಮಿಂದು ಹರುಷದಿ ನಲಿಯುವರು ಮಹಾ ಮಹಿಮ ಅಶ್ವರೂಢ ಮಾರ್ತಂಡ ಭೈರವನ ಅತ್ಯಾಕರ್ಷಕ ಬಂಡಿ ಉತ್ಸವ ನೋಡುವದೇ ಜೀವನದ ಸೌಭಾಗ್ಯ ದೇವರ ಹಿಪ್ಪರಗಿಯ ಸಾಮ್ರಾಟ ಶ್ರೀರಾವತರಾಯ ಬಂಡಿ ವೀರಾಜ ಮಾನನಾಗಿರುವನು ಸಕಲ ಸದ್ಭಕ್ತರು ಘಂಟಾನಾದ ಸಕಲ ವಾದ್ಯ ಡೊಳ್ಳು ಗೆಜ್ಜೆನಾದ ದೀವಟಿಗೆ ಏಳುಕೋಟಿ ಏಳುಕೋಟಿ ಯುಗೇ ಯುಗೇ ಶ್ರೀರಾವತರಾಯ ಮಲ್ಲಯ್ಯನ ನಾಮ ಸ್ಮರಣೆ ಯೊಂದಿಗೆ ಪ್ರಮುಖ ದಾರಿಯುದ್ದಕ್ಕೂ ಸಕಲರಿಗೆ ನಗುಮೊಗದಿ ದರ್ಶನ ಭಾಗ್ಯ ಕಲ್ಪಿಸುತ್ತಾ ಕಾಯಿ ಬಾಳೆ ಹಣ್ಣು ಹೂವು ಉತ್ತತ್ತಿ ಭಂಡಾರ ದೇವ ಮಹಾದೇವ ಶ್ರೀರಾವತರಾಯನಿಗೆ ಅರ್ಪಿಸಿ ಪುನೀತರಾಗುವರು 13/10/2024 ರಂದು ಬಂಡಿ ತುಂಬುವದು, 14/10/2024 ರಂದು ಭಂಡಾರದೊಡೆಯ ಅಶ್ವರೋಹಿಯಾಗಿ ತೆರೆದ ಬಂಡಿಯ ಮೇಲೆ ವೀರಾಜ ಮಾನನಾಗಿ ಸ್ವರ್ಗದ ಸಿರಿಯೊಂದಿಗೆ ಸಿಡಿಕಟ್ಟಿಯಲ್ಲಿ ಜಗದ ದೇಶದ ನಾಡಿನ ಆಗು ಹೋಗುವ ಮಳೆ ಬೆಳೆ ರಾಜಕೀಯ ಕಾರುಣಿಕ ದೇವ ನುಡಿ ಹೇಳಿಕೆಗಳು ಜರುಗುವುದು.

ಬನ್ನಿ ಮಂಟಪದಿ ಬನ್ನಿ ಮೂಡಿದು ಶ್ರೀಮಲ್ಲಯ್ಯ ದೇವಸ್ಥಾನ ಪ್ರವೇಶಿಸಿ ಸ್ವರ್ಗವೇ ಧರೆಗಿಳಿದು ಬಂದ ಅನುಭವ ಭಂಡಾರದಲ್ಲಿ ಮಿಂದು ಜನ ಹರುಷದಿ ಏಳುಕೋಟಿ ಏಳುಕೋಟೆ ಯುಗೇ ಯುಗೇ ಘೋಷ ನಿಜಕ್ಕೂ ಪವಾಡವೇ ಸರಿ ಶಾಶಿ ಕಟ್ಟೆಯ ಮೇಲೆ ವೀರಾಜಮಾನಾಗಿ ಕುಳುತು ಗಂಗಮಾಳಮ್ಮನ ಮದುವೆ ಸಂಭ್ರಮ ಹೇಳತೀರದು ಸಾಕ್ಷಾತ ಶಿವನ ಕಲ್ಯಾಣ ಮಹೋತ್ಸವ ಜರುಗುವ ಸನ್ನಿವೇಶ ಏಳುಕೋಟಿ ದೀವಟಿಗೆ ಏಳುಕೋಟಿ ಆರತಿ ಏಳುಕೋಟಿ ಜನ ಕೂಡಿದರೆ ಮದುವೆ ಆಗುವ ಭಾಷೆ ಇದ್ದ ಕಾರಣ ಶ್ರೀಕೃಷ್ಣನು ಚಕ್ರ ಹಿಡಿದ ಕಾರಣ ಮದುವೆ ಪೂರ್ಣವಾಗದೆ ವರುಷ ವರುಷ ಪವಾಡ ಜರಗುವ ಐತಿಹ್ಯವಿದೆ. ದಿನಾಂಕ 15/10/2024, 16/10/2024, ರಂದು ವಿವಿಧ ಪೂಜಾ ಕಾರ್ಯ ವಿವಿಧ ಸಾಂಸ್ಕ್ರೃತಿಕ ಡೊಳ್ಳುಪದ ಭಜನಾಪದ ನಾಮಸ್ಮರಣೆ ಸದ್ಭಕ್ತರಿಂದ ಹರಕೆ ಬೇಡಿಕೆ ಕಾರ್ಯಗಳು ಜರುಗುವುದು 17/102024 ರಂದು ಸೀಗಿ ಹುಣ್ಣಿಮೆ ದಿನ ಸಕ್ಕರೆ ಲಾಬಾನ (ಮಹಾ ನೈವೇದ್ಯ) ಇರುತ್ತದೆ. 18/10/2024 ರಂದು ದೇವರು ಮೂಲ ದೇವಸ್ಥಾನಕ್ಕೆ ಬರುವನು ಮಹಾ ಮಹಿಮ ಜಗದ ರಕ್ಷಕ ಭಕ್ತಿಭಂಡಾರ ದೊಡೆಯನ ಜಾತ್ರಾ ಮಹೋತ್ಸವ ಕಣ್ಮನ ತುಂಬಿ ಕೊಳ್ಳುವುದು ಸಿರಿಭಾಗ್ಯ ಅಶ್ವರೋಹಿ ಶ್ರೀರಾವುತರಾಯನ ಜಾತ್ರೆಗೆ ಬಂದು ದೇವರ ದರ್ಶನ ಪಡೆದು ಪಾವನರಾಗಿ ನೋಡ ಬನ್ನಿ ಸುಕ್ಷೇತ್ರ ದೇವರ ಹಿಪ್ಪರಗಿ ಸಾಮ್ರಾಟ ಮಾರ್ತಾಂಡ ಭೈರವ ಭಕ್ತಿ ಭಂಡಾರ ಶ್ರೀರಾವತರಾಯ ಮಲ್ಲಯ್ಯ ಜಾತ್ರಾ ಮಹೋತ್ಸವ.
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ