ರಾಜ್ಯ ಮಟ್ಟದ ಪಂಜಾ ಕುಸ್ತಿಯಲ್ಲಿ ಬ್ರಹ್ಮಾವರದ ಸುರೇಶ್ ಪೂಜಾರಿ ದಾಖಲೆ – ಸತತ ನಾಲ್ಕನೇ ವರ್ಷಕ್ಕೆ ಚಿನ್ನದ ಪದಕ….!
ಮೈಸೂರು/ಬ್ರಹ್ಮಾವರ ಅ.05





ಮೈಸೂರಿನಲ್ಲಿ 27-09-2025 ರಂದು ದಸರಾ ಮಹೋತ್ಸವದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಪಂಜಾ ಕುಸ್ತಿ ಸ್ಪರ್ಧೆ (ಆರ್ಮ್ ರೆಸ್ಲಿಂಗ್) ಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಕ್ರೀಡಾಪಟು ಸುರೇಶ್ ಬಿ. ಪೂಜಾರಿ ಯವರು ಇತಿಹಾಸ ನಿರ್ಮಿಸಿದ್ದಾರೆ.
ಸುರೇಶ್ ಪೂಜಾರಿ ಅವರು 90 ಕೆ.ಜಿ ಬಲಗೈ ವಿಭಾಗದಲ್ಲಿ ಪ್ರತಿಸ್ಪರ್ಧಿಗಳನ್ನು ಸುಲಭವಾಗಿ ಮಣಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ, ಅವರು ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಸತತ ನಾಲ್ಕು ವರ್ಷಗಳ ಕಾಲ ಚಿನ್ನದ ಪದಕ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ರಾಜ್ಯ ಮಟ್ಟದ ಪಂಜಾ ಕುಸ್ತಿ ಇತಿಹಾಸದಲ್ಲಿ ಒಂದು ಅಪರೂಪದ ಸಾಧನೆಯಾಗಿದೆ.
ಬ್ರಹ್ಮಾವರದ ಪುಟ್ಟ ಗ್ರಾಮದಿಂದ ಬಂದ ಸುರೇಶ್ ಪೂಜಾರಿ ಅವರ ಈ ಸತತ ಗೆಲುವು ಕ್ರೀಡಾ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಅವರ ಕಠಿಣ ಪರಿಶ್ರಮ ಮತ್ತು ಸ್ಥಿರ ಪ್ರದರ್ಶನವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅವರ ಮುಂದಿನ ಗುರಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ವರದಿ:ಆರತಿ.ಗಿಳಿಯಾರು.ಉಡುಪಿ