ಬಾಲ ಭಾರತಿ ಶಾಲೆಯಲ್ಲಿ ಸಂಭ್ರಮದ – ಶಾಲಾ ಪ್ರಾರಂಭೊತ್ಸವ.
ಆಲಮೇಲ ಜೂ.02

ಪಟ್ಟಣದ ಶ್ರೀ ವಿಶ್ವೇಶ್ವರ ಬಾಲ ಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೊತ್ಸವವನ್ನು ಮಕ್ಕಳಿಗೆ ತಿಲಕ ಇಟ್ಟು ಆರತಿ ಬೆಳಗಿ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಪಠ್ಯ ಪುಸ್ತಕ ವಿತರಣೆ ಮಾಡಿ ಸ್ವಾಗತಿಸ ಲಾಯಿತು.ಸಂಸ್ಥೆಯ ಅಧ್ಯಕ್ಷರು ಶ್ರೀಶೈಲಪ್ಪ ಆಯ್ ಜೋಗೂರ ಮಾತನಾಡಿ ಮಕ್ಕಳು ದೇವರು ಸಮಾನ ಅಂತಹ ಮಕ್ಕಳಿಗೆ ವಿನೂತನವಾಗಿ ತಿಲಕವಿಟ್ಟು, ಆರತಿ ಮಾಡುವುದರ ಮುಖಾಂತರ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿರುವುದು ಸಂತೋಷ ತಂದಿದೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಬೇಕು ಸರಕಾರದ ಸೌಲಭ್ಯಗಳನ್ನು ಪಡೆದು ಉನ್ನತ ವ್ಯಾಸಂಗ ಪಡೆದು ಶಾಲೆಗೆ ಕೀರ್ತಿ ತರಬೇಕು ಎಂದರು.

ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ ಇಲಾಖೆಯ ಸುತ್ತೋಲೆಯಂತೆ ಶಾಲಾ ಸ್ವಚ್ಚತಾ ಮಾಡಿಕೊಂಡು ತಳಿರು ತೋರಣಗಳಿಂದ ಅಲಂಕರಿಸಿ ಮೊದಲ ದಿನವೇ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಿ ಬಿಸಿಯೂಟದ ಜೊತೆಗೆ ಸಿಹಿಯನ್ನು ಬಡಸಿ ಮಕ್ಕಳನ್ನು ಶಾಲಾ ಪ್ರಾರಂಭ ದಂದು ಸ್ವಾಗತಿಸಲಾಯಿತು. ಈ ವೇಳೆ ಸದಸ್ಯರಾದ ಅಲೋಕ ಬಡದಾಳ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ,ಸುವರ್ಣ ಸಾರಂಗಮಠ, ಲಕ್ಷ್ಮೀಬಾಯಿ ಹಳೇಮನಿ, ಸೀತಾ ಆರೇಶಂಕರ, ಸರುಬಾಯಿ ಬಂಡಗಾರ, ವೀಣಾ ಗುಡಿಮಠ ಮುಂತಾದವರು ಉಪಸ್ಥಿತರಿದ್ದರು.

