ನಾಯಿಯು ಜಿಂಕೆಯನ್ನು ಅಟ್ಟಾಡಿಸಿಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ – ಬಾವಿಗೆ ಬಿದ್ದ ಜಿಂಕೆ ರಕ್ಷಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಯವರು.
ಗಾಂಡ್ಲಾಹೊಸಹಳ್ಳಿ ಅ.25


ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಗಾಂಡ್ಲಾಹೊಸಹಳ್ಳಿ ಗ್ರಾಮದಲ್ಲಿ ಜಿ.ಕೆ ಕ್ಯಾತಪ್ಪ ಎಂಬುವವರ ಹೊಲದಲ್ಲಿ ನಾಯಿಯು ಜಿಂಕೆಯನ್ನು ಅಟ್ಟಾಡಿಸಿ ಕೊಂಡು ಜಿಂಕೆಯನ್ನು ಹಿಡಿಯಲು ಓಡಿ ಬರುತ್ತಿರುವಾಗ ರಬಸವಾಗಿ ಓಡಿ ಗಾಬರಿಗೊಂಡು ಜಿಂಕೆಯು ಅಂದಾಜು 30×30 ಅಡಿ ವಿಸ್ತಾರವಾದ 30 ಅಡಿ ಆಳದ ತೇರೆದ ನೀರಿಲ್ಲದ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು, ಸದರಿ ಸ್ಥಳೀಯ ನಿವಾಸಿಗಳು ನಿನ್ನೆ ಸಾಯಂಕಾಲ ಜರುಗಿದ ಘಟನೆಯ ವಿಷಯವನ್ನು ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ನಿಯಂತ್ರಣ ಕೊಠಡಿಗೆ ದೂರವಾಣಿಗೆ ಕರೆ ಮಾಡಿ ತಿಳಿಸಿದರು. ಕರೆ ಬಂದ ತಕ್ಷಣ ಜಲ ವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 30 ಅಡಿ ಆಳದ ಬಾವಿಯಲ್ಲಿ ಹಗ್ಗಗಳ ಸಹಾಯದಿಂದ ಕೆಳಗಿಳಿದು ಸುಮಾರು 01:25 ಒಂದು ಘಂಟೆ ಇಪ್ಪತೈದು ನಿಮಿಷಗಳ ಕಾಲ ಶ್ರಮ ವಹಿಸಿ ಸಿಬ್ಬಂದಿ ಯವರುಗಳು ಹಗ್ಗಗಳ ಸಹಾಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ಜಿಂಕೆಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ.

ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಗಾಂಡ್ಲಾಹೊಸಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಘವ ಮಾಡಿ ಜಿಂಕೆಯ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.ಪ್ರಮುಖ ಅಗ್ನಿಶಾಮಕರವರಾದ ರವೀಂದ್ರ ಸಂಗಮರವರ ನೇತ್ರತ್ವದಲ್ಲಿ, ಹುಲ್ಲಪ್ಪಗೌಡ ಗದ್ದಿಗೌಡರ, ಸಿದ್ದಪ್ಪ ಜರಳಿ, ರಾಜು ಮುರಕುಟ್ಟಿ, ಹಾಗೂ ಮಲ್ಲಿಕಾರ್ಜುನ ಕಾಡಪ್ಪನವರ ಭಾಗವಹಿಸಿದ್ದರು ಎಂದು ವರದಿಯಾಗಿದೆ.

