2025-26 ನೇ. ಸಾಲಿನ ಎನ್.ಎಸ್.ಎಸ್ – ವಿಶೇಷ ವಾರ್ಷಿಕ ಶಿಬಿರ ಜರುಗಿತು.
ಕಮಲದಿನ್ನಿ ಅ.26


ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ದತ್ತು ಗ್ರಾಮ ಕಮಲದಿನ್ನಿಯಲ್ಲಿ 2025-26 ನೇ. ಸಾಲಿನ ಎನ್.ಎಸ್.ಎಸ್ ವಿಶೇಷ ವಾರ್ಷಿಕ ಶಿಬಿರ ಉದ್ಘಾಟನೆಯಾಯಿತು. ಶ್ರೀ ಬಸಪ್ಪ.ಲ ಸಂಕನ್ನವರ ಅಧ್ಯಕ್ಷತೆ ವಹಿಸಿದ್ದರು. ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಆರ್.ಪಿ ಸೋನವಾಲ್ಕರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮುಸಿದ ಎಂ.ಇ.ಎಸ್ ಮಹಾವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರಾದ ಶ್ರೀ ಎಸ್.ಜಿ ನಾಯಿಕರವರು ಎನ್.ಎಸ್.ಎಸ್ ಮಾಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ ಕಾರ್ಯಕ್ರಮ ಆಗಿದ್ದು ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿ ಕೊಳ್ಳಬೇಕೆಂದು ಸೂಚಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಕಾಲೇಜಿನ ಪ್ರಾಚಾರ್ಯರಾದ ಎಂ.ಎಸ್ ಪಾಟೀಲ. ಉಪನ್ಯಾಸಕರಾದ ಬಿ.ಜಿ ಗಡಾದ, ಎಚ್.ಡಿ ಚಂದರಗಿ, ಎಲ್.ಆರ್ ಧರ್ಮಟ್ಟಿ, ಎಂ.ಜಿ ಹೆಬ್ಬಳ್ಳಿ, ಎಸ್.ಪಿ ಸಣ್ಣಮೇತ್ರಿ, ಉಪನ್ಯಾಸಕಿಯರಾದ ಡಾ, ಆರ್.ಪಿ ಬಿರಾದರ, ಎಸ್.ಎಸ್ ಹಿರೇಮಠ, ಎಸ್.ಡಿ.ಎಂ.ಎಸ್ ವಾಯ್.ಖಾನಪ್ಪಗೊಳ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು. ಎಚ್.ಎಂ ಹತ್ತರಕಿ ಸ್ವಾಗತಿಸಿದರು, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಎಸ್.ಕೆ ಹಿರೇಮಠ ನಿರೂಪಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಸಂತೋಷ.ಕೆಳಗಡೆ.ಮೂಡಲಗಿ

