ರೈತರ ಹಿತ ಕಾಪಾಡಲು ಸರಕಾರ ಬದ್ಧ – ಜಿ.ಹಂಪಯ್ಯ ನಾಯಕ್ ಸಾಹುಕಾರ್.
ಮಾನ್ವಿ ಅ.28


ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದಲ್ಲಿ ಈ ದಿನ ಭಾರತೀಯ ಹತ್ತಿ ನಿಗಮ ನಿಯಮಿತ ಹುಬ್ಬಳ್ಳಿ ಶಾಖೆ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮ ಹತ್ತಿ ಖರೀದಿ ಕೇಂದ್ರವನ್ನು ಉದ್ಘಾಟಿಸಿದ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ್ ಸಾಹುಕಾರ್ ಇವರು.
ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು ರೈತರಿಂದ ಖರೀದಿ ಮಾಡಿರುವ ಹತ್ತಿಗೆ ಎರಡು ಅಥವಾ ಮೂರು ದಿನಗಳಲ್ಲಿ ಅವರ ಖಾತೆಗೆ ಹಣವನ್ನು ಜಮಾ ಮಾಡಲೇಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.
ಈಗಾಗಲೇ ರೈತರು ತುಂಬಾ ಸಂಕಷ್ಟ ಪರಿಸ್ಥಿತಿಯಲ್ಲಿದ್ದು ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರವಾದ ಬೆಳೆಗಳು ನಷ್ಟ ಸಂಭವಿಸಿದ್ದು ಬೆಳೆ ಹಾನಿ ಸರ್ವೇ ಕಾರ್ಯವು ಸಹ ಸಂಪೂರ್ಣವಾಗಿ ಮುಗಿದಿದ್ದು ಕೆಲವು ತಾಂತ್ರಿಕ ಅಡಚಣೆಗಳಿಂದ ಪರಿಹಾರ ಹಾಕುವಲ್ಲಿ ತಡವಾಗುತ್ತ ಇದ್ದು ಆದಷ್ಟು ಬೇಗನೆ ಸರ್ಕಾರದ ಪರಿಹಾರದ ಮೊತ್ತ ಸಹ ಬರಲಿದೆ. ಕಾರಣ ರೈತರು ಯಾವುದೇ ತರಹದ ತಪ್ಪುಗಳು ಕಂಡು ಬಂದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇಡೀ ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ 30000 ಹೆಕ್ಟರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ಇಲ್ಲಿಯ ವರೆಗೆ ಸುಮಾರು 3140 ರೈತರ ನೋಂದಣಿ ಕಾರ್ಯ ಆಗಿದ್ದು ಇನ್ನುಳಿದ ರೈತರ ನೋಂದಣಿ ಕಾರ್ಯ ನಿಗಧಿತ ದಿನಗಳ ಒಳಗೆ ಪೂರ್ಣ ಗೊಳಿಸಲು ಸೂಚನೆಯನ್ನು ನೀಡಿದರು.

ಈ ಹತ್ತಿ ಕೇಂದ್ರಕ್ಕೆ ಪ್ರಾರಂಭಕ್ಕೆ ಮಾನ್ಯ ಸಚಿವರಾದ ಎನ್.ಎಸ್ ಭೂಸರಾಜು ಹಾಗೂ ನಾನು ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿದ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಸರ್ಕಾರ ಮಟ್ಟದಲ್ಲಿ ಮಾತನಾಡಿ ರಾಜ್ಯದಲ್ಲಿಯೇ ಪ್ರಪ್ರಥಮ ಕೇಂದ್ರವನ್ನು ನಮ್ಮ ಮಾನ್ವಿ ವಿಧಾನ ಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ನಮ್ಮ ರಾಜ್ಯ ಸರ್ಕಾರವು ರೈತ ಪರ ಎನ್ನುವುದಕ್ಕೆ ಎರಡು ಮಾತಿಲ್ಲ ಮಾತನಾಡಿದ ಎರಡು ದಿನಗಳಲ್ಲಿ ಕೇಂದ್ರ ಮಂಜೂರು ಮಾಡಿರುವುದಕ್ಕೆ ಉದಾರಣೆ ರಾಜ್ಯ ಸರ್ಕಾರಕ್ಕೆ ಮತ್ತು ಸಚಿವರಿಗೆ ಜಿಲ್ಲಾಡಳಿತಕ್ಕೆ ರೈತರ ಪರವಾಗಿ ಮಾನ್ಯ ಶಾಸಕರು ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ಭೀಮರಾಯ ರಾಮಸಮುದ್ರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯಾದ ರಂಗನಾಥ್ ಹುಬ್ಬಳ್ಳಿ ಶಾಖೆಯ ಸಿಬ್ಬಂದಿಗಳಾದ ಎ.ಕೆ ಶರ್ಮ ಹಾಗೂ ಅಜಯ್ ಶೈಲಜಾ ಇಂಡಸ್ಟ್ರೀಸ್ ಕಾಟನ್ ಮಾಲೀಕರಾದ ಸಿದ್ದಪ್ಪಗೌಡ ಆಲ್ದಾಳ ರಜಾಕ್ ಸಾಬ್ ರಾಜ ಸುಭಾಷ್ ಚಂದ್ರ ನಾಯಕ್ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

