ಸೌಜನ್ಯ ಹಡಪದ ವಿದ್ಯಾರ್ಥಿನಿಯನ್ನು ಅನುಮಾನಸ್ಪದ ಕೊಲೆ ಮಾಡಿರುವ – ವ್ಯಕ್ತಿಯನ್ನು ಗಲ್ಲಿಗೇರಿಸಲು ಒತ್ತಾಯ.
ಕೋಡೆಕಲ್ ಅ.28


ಯಾದಗಿರ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಮೃತಳ ದೇಹವು ನಿನ್ನೆ ಶಹಾಪೂರ ತಾಲೂಕಿನ ಗೋಗಿ ಕಾಲುವೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಳಿ ಸೌಜನ್ಯ ಮೃತ ದೇಹವು ಪತ್ತೆಯಾಗಿದೆ. ಸೌಜನ್ಯ ಕೋಡೆಕಲ್ ಅವರು ಗಂಗಾವತಿ ತಾಲೂಕಿನಲ್ಲಿ ವಾಸ್ತವ್ಯವಿದ್ದು, ಪಿ.ಯು.ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು ತನ್ನ ಊರಿಗೆ ಹೊರಟವಳನ್ನು ನರ ರಾಕ್ಷಸರು ಕೊಲೆ ಮಾಡಿ ಕಾಲುವೆಯಲ್ಲಿ ಹಾಕಿದ್ದಾರೆ. ಸರಕಾರ ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನಿನ ಅಡಿಯಲ್ಲಿ ಗಲ್ಲಿಗೇರಿಸುವ ವ್ಯವಸ್ಥೆ ಮಾಡಬೇಕು ಎಂದು ಶೋಷಿತ ಸಣ್ಣ ಹಿಂದುಳಿದ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ನಾಳೆ ಮಂಗಳವಾರ ದಿನಾಂಕ 28 ರಂದು ಬೆಳಿಗ್ಗೆ 10:30 ನಿಮಿಷಕ್ಕೆ ಜಿಲ್ಲಾಧಿಕಾರಿ ಆಫೀಸ್ ಎದುರುಗಡೆ ಪ್ರತಿಭಟನೆ ನಡೆಸಲಾಗುತ್ತದೆ. ಈ ರಾಕ್ಷಸ ಪ್ರವೃತ್ತಿಯ ವ್ಯಕ್ತಿಗಳು ಯಾವುದೇ ರಾಜಕೀಯ ಪಕ್ಷಕ್ಕೆ, ಯಾವುದೇ ಧರ್ಮಕ್ಕೆ ಸೇರಿದರು ಎಷ್ಟೇ ಪ್ರಭಾವಿತ ನಾಗಿದ್ದರು ಕೂಡಲೇ ಬಂಧಿಸಿ ಕಾನೂನಿನಲ್ಲಿ ಗಲ್ಲಿಗೇರಿಸ ಬೇಕು. ಮೃತಳ ಕುಟುಂಬಕ್ಕೆ ₹1 ಕೋಟಿ ರೂ. ಪರಿಹಾರ ಘೋಷಿಸಬೇಕು. ಕೊಲೆ ಮಾಡಿದ ವ್ಯಕ್ತಿಗಳು ಆಸ್ತಿಯನ್ನು ಮುಟ್ಟುಗೋಲು ಹಾಕಿ, ಕುಟುಂಬಸ್ಥರಿಗೆ ಹಸ್ತಾಂತರಿಸ ಬೇಕು 5 ಎಕರೆ ಜಮೀನು ಮತ್ತು ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಮತ್ತು ಈ ಘಟನೆಯನ್ನು ಎಲ್ಲಾ ಪ್ರಜ್ಞಾವಂತರು ಎಲ್ಲಾ ವರ್ಗದ ಜನರು ಖಂಡಿಸಿದ್ದಾರೆ ಈ ಹೋರಾಟಕ್ಕೆ ಅನೇಕ ಕನ್ನಡ ಪರ ಸಂಘಟನೆಗಳು, ಮತ್ತು ಸಂಘ ಸಂಸ್ಥೆಗಳು, ಈ ಸಣ್ಣ ಸಮುದಾಯಕ್ಕೆ ಬೆಂಬಲವನ್ನು ನೀಡುವುದರ ಮೂಲಕ ಹೆಚ್ಚಿನ ಜನ ಸಂಖ್ಯೆ ಸೇರಬೇಕು ಎಂದು ಯಾದಗಿರ ಜಿಲ್ಲೆಯ ಅಧ್ಯಕ್ಷರು ಡಾ, ಮಲ್ಲಿಕಾರ್ಜುನ ಹಡಪದ ಕುಳಗೇರಿ ತಿಳಿಸಿದರು. ಈ ಹೋರಾಟವು ಇವರ ನೇತೃತ್ವದಲ್ಲಿ ನಡೆಯಲಿದೆ. ಇದೇ ಸಂಧರ್ಭದಲ್ಲಿ ಕಲಬುರಗಿ ಜಿಲ್ಲೆಯ ಅಧ್ಯಕ್ಷರು ಈರಣ್ಣ.ಸಿ ಹಡಪದ ಸಣ್ಣೂರ, ಮತ್ತು ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ.ಎನ್, ಹಾಗೂ ಸಮಾಜದ ಹಿರಿಯ ಮುಖಂಡರು ಅಯ್ಯಣ ಹಡಪದ, ಹಾಗೂ ಮಲ್ಲಣ್ಣ ಹಡಪದ ಕನ್ನೆಳ್ಳಿ. ಮತ್ತು ಹುಣಸಗಿ ತಾಲೂಕಾಧ್ಯಕ್ಷ ಹಣಮಂತ್ರಾಯ ಹಡಪದ, ಬಸವರಾಜ ಹಡಪದ ಮುದ್ದನೂರ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಎಂದು ಸಮಾಜದ ಸೇವಕ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಅವರು ಅವರು ಪತ್ರಿಕೆಯ ಪ್ರಕಟಣೆಗೆ ತಿಳಿಸಿದರು ಎಂದು ವರದಿಯಾಗಿದೆ.

