ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ ಮಾಡಿದ – ಆನಂದಗೌಡ ಪಾಟೀಲ.
ಯಲಗೋಡ ನ.19

ವರ್ಷದಲ್ಲಿ ನಾಲ್ಕು ಐದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾಕೂಟಗಳಿಗೆ ಹೆಸರು ವಾಸಿಯಾದ ಯಲಗೋಡ ಗ್ರಾಮ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಹಜರತ್ ಲಾಡ್ಲೇಮಶ್ಯಾಕ ದೇವರ ಜಾತ್ರೆ ಅಂಗವಾಗಿ ಟೆನ್ನಿಸ್ ಬಾಲ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಯನ್ನು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ದೇವರ ಹಿಪ್ಪರಗಿ ವಿಧಾನ ಸಭಾ ಮತ ಕ್ಷೇತ್ರದ ಉಸ್ತುವಾರಿಗಳಾದ ಪ್ರಭುಗೌಡ ಲಿಂಗದಳ್ಳಿ ಅವರ ಅಳಿಯನಾದ ಆನಂದಗೌಡ ಪಾಟೀಲ ಅವರು ಉದ್ಘಾಟನೆ ಮಾಡುವ ಮುಖಾಂತರ ಚಾಲನೆ ನೀಡಿದರು.
ಹಾಗೂ ತಾಲ್ಲೂಕ ಜೆಡಿಎಸ್ ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ ಯವರು ಜ್ಯೋತಿ ಬೆಳಗಿಸಿದರು ನಂತರ ಎಲ್ಲಾ ಆಟಗಾರರು ಯಾವುದೇ ಜಗಳ ಆಗಲಿ ವಯಿಮನಸ್ಸುಆಗಲಿ ಯಾವುದು ಮಾಡದೇ ಚನ್ನಾಗಿ ಆಟ ಆಡಬೇಕು ಎಂದು ಕಿವಿಮಾತು ಹೇಳಿದರು.

ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ರಾಜೇಪಟೇಲ್ ಕಣಮೇಶ್ವರ ಇವರು ಕೂಡಾ ಮಾತನಾಡಿದರು, ಮುಖ್ಯ ಅಥಿತಿಗಳಾದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಮಹಮದ್ ರಫೀಕ್ ಕಣಮೇಶ್ವರ ಉಮೇಶ್ ಇಂಗಳಗಿ ಸಂಗನೌಡ ಪಾಟೀಲ ನಬಿ ಬಾಗೇವಾಡಿ ಬಾಬು ಬಾಗೇವಾಡಿ ನಿತ್ಯಾನಂದ ಕತ್ತಿ ಭೀಮಪ್ಪ ಹಚ್ಯಾಳ ಮಾಂತೇಶ ತಳ್ಳೋಳ್ಳಿ ಆಕಾಶ ಬೂದಿಹಾಳ ಸಂತೋಷ ನಾಟಿಕಾರ ಹಾಗೂ ಅಂಪ್ಯೆರಗಳಾದ ಶರಣಬಸು ದೊಡ್ಡಮನಿ ಅಮ್ಮೋಗಿ ತಳ್ಳೋಳ್ಳಿ ಹಾಗೂ ಮುತು ನಾಟಿಕಾರ ಚಂದ್ರ ನಾಟಿಕಾರ ರಫೀಕ್ ಕುರಿಕಾಯಿ ಅರ್ಜುನ ಬುಳ್ಳಾ ಹಾಗೂ ಎಲ್ಲಾ ಆಟಗಾರರು ಈ ಟೂರ್ನಮೆಂಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

