ಭಾರತೀಯ ದಿವ್ಯಾಂಗ್ ಕ್ರಿಕೆಟ್ ಮಂಡಳಿ ವತಿಯಿಂದ – ಇಂಡಿಯಾ v/s ನೇಪಾಳ ಪಂದ್ಯಾವಳಿಗೆ ಉಪನಾಯಕ ಆಗಿ ಮಹಾಂತೇಶ ಆಯ್ಕೆ.
ಮುದ್ದೇಬಿಹಾಳ ಡಿ.09

ಭಾರತೀಯ ದಿವ್ಯಾಂಗ್ ಕ್ರಿಕೆಟ್ ನಿಯಂತ್ರಣ ಮಂಡಳಿಯ ವತಿಯಿಂದ ಡಿಸೆಂಬರ್ 13, 14, ಮತ್ತು 15 ನೇ. ತಾರೀಖಿನಂದು ಜಾರ್ಖಂಡ್ ನ ರಾಂಚಿಯಲ್ಲಿ ನಡೆಯುವ ಭಾರತ ಮತ್ತು ನೇಪಾಳ ದೇಶದ ನಡುವೆ ನಡೆಯುವ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಸರಣಿಗೆ ಕರ್ನಾಟಕ ರಾಜ್ಯದಿಂದ ಒಟ್ಟು 4 ಜನ ದಿವ್ಯಾಂಗ್ ಆಟಗಾರರು ಆಯ್ಕೆ ಆಗಿದ್ದಾರೆ.

ಅದರಲ್ಲಿ ಉಪ ನಾಯಕನಾಗಿ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ವಿ.ಡಿ.ಸಿ.ಸಿ ಬ್ಯಾಂಕ್ ಸಿಪಾಯಿ (ದಿವ್ಯಾಂಗ್) ಆದ ಬಸವನ ಬಾಗೇವಾಡಿ ತಾಲ್ಲೂಕಿನ ಅಂಬಳನೂರ ಗ್ರಾಮದ ಮಾಂತೇಶ ವೀರಬಪ್ಪ ಚಲವಾದಿ ಅವರನ್ನು ಆಯ್ಕೆ ಮಾಡಿ ದಿವ್ಯಾಂಗ್ ಕ್ರಿಕೆಟ್ ನಿಯಂತ್ರಣ ಮಂಡಳಿ ಆಫ್ ಇಂಡಿಯಾ ಸಂಸ್ಥೆಯ ಅಧ್ಯಕ್ಷರಾದ ಮೋಕೇಶ್ ರಚ್ಚನ್ ಅವರು ಆದೇಶ ಹೋರಡಿಸಿದ್ದಾರೆ.

ಇನ್ನೂಳಿದ ಕರ್ನಾಟಕ ರಾಜ್ಯದ ದಿವ್ಯಾಂಗ್ ಆಟಗಾರರಾದ ಮಹೇಶಕುಮಾರ ಈಗಳಿ, ಮುತ್ತು ಕೋಲಕಾರ, ವಿಷ್ಣು ರಾಠೋಡ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಉಪ ನಾಯಕ ದಿವ್ಯಾಂಗ್ ಮಾಂತೇಶ ವೀರಬಪ್ಪ ಚಲವಾದಿ ಅವರು ತಿಳಿಸಿದ್ದಾರೆ.
ವರದಿ:ಜಿ.ಎನ್ ಬೀರಗೊಂಡ (ಮುತ್ತು)
ಮುದ್ದೇಬಿಹಾಳ.

