ಬದುಕಿನ ಸಕಲ ಸಮಸ್ಯೆಗಳಿಗೆ ದಿವ್ಯೌಷಧಿ ಶ್ರೀಮದ್ ಭಗವದ್ಗೀತೆ – ಪೂಜ್ಯ ವೈ ರಾಜಾರಾಮ್ ಗುರುಗಳು.
ಚಳ್ಳಕೆರೆ ಡಿ.09

ಬದುಕಿನ ಸಕಲ ಸಮಸ್ಯೆಗಳಿಗೂ ದಿವ್ಯೌಷಧಿ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ಶ್ರೀಮದ್ ಭಗವದ್ಗೀತೆ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ, ವೈ.ರಾಜಾರಾಮ್ ಗುರುಗಳು ತಿಳಿಸಿದರು.

ನರಹರಿ ನಗರದ ಶ್ರೀನರಹರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀನರಹರಿ ಸೇವಾ ಪ್ರತಿಷ್ಠಾನ ಮತ್ತು ನಾಗ ಸಿಂಹಾದ್ರಿ ಚಾರಿಟೀಸ್ ನ ಸಹಯೋಗದಲ್ಲಿ “ಗೀತಾ ಜಯಂತಿ”ಯ ಪ್ರಯುಕ್ತ 1 ರಿಂದ 10 ನೇ. ತರಗತಿ ವರೆಗಿನ ಮಕ್ಕಳಿಗಾಗಿ ಆಯೋಜಿಸಿದ್ದ “ಗೀತಾ ಕಂಠ ಪಾಠ” ಸ್ಪರ್ಧೆಯಲ್ಲಿ ವಿಜೇತರಾದ ಹತ್ತು ವಿದ್ಯಾರ್ಥಿಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ವಿತರಿಸಿ ಅವರು ಆಶೀರ್ವಚನ ನೀಡಿದರು.

ಜೀವನದ ಸುಖ ದುಖ ಗೊಂದಲಗಳು ಯಾವುದೂ ಸ್ಥಿರವಾಗಿರುವುದಿಲ್ಲ. ಇವುಗಳನ್ನು ಸುಲಭವಾಗಿ ಎದುರಿಸಲು ಮನುಷ್ಯ ಪ್ರತಿ ನಿತ್ಯ ಶ್ರೀಮದ್ ಭಗವದ್ಗೀತೆಯನ್ನು ಅಧ್ಯಯನ ಮತ್ತು ಪಾರಾಯಣ ಮಾಡುವುದನ್ನು ರೂಢಿಸಿ ಕೊಳ್ಳಬೇಕು ಎಂದರು.

ಮುಂದಿನ ವರ್ಷ ಮಕ್ಕಳು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಗೀತಾ ಕಂಠ ಪಾಠ ಸ್ಪರ್ಧೆ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಡಿ.ಕಾವೇರಿ ಸುರೇಶ್ ಅವರು ದೈನಂದಿನ ಬದುಕಿನ ಸಕಲ ಸಂಕಷ್ಟಗಳಿಗೆ ಶ್ರೀಮದ್ ಭಗವದ್ಗೀತೆಯು ತಾಯಿಯಂತೆ ಮಾರ್ಗದರ್ಶನ ನೀಡುತ್ತದೆ.

ಈ ಸದ್ಗ್ರಂಥವು ಇಂದಿಗೂ ತನ್ನತನವನ್ನು ಉಳಿಸಿ ಕೊಂಡು ನಿತ್ಯ ಪಾರಾಯಣ ಗ್ರಂಥವಾಗಿ ಉಪಯೋಗಿಸಲ್ಪಡುತ್ತಿದೆ.ಪ್ರತಿಯೊಂದು ಕೆಲಸವನ್ನು ಫಲಾಪೇಕ್ಷೆಯಿಲ್ಲದೆ ಭಗವಂತನಿಗೆ ಅರ್ಪಿಸಿ ಮಾಡ ಬೇಕೆಂದು ಗೀತೆ ತಿಳಿಸುತ್ತದೆ ಎಂದು ಅವರು ತಿಳಿಸಿದರು.
ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿದ ಈಶ್ವರಗೆರೆಯ ರಂಗನಾಥ್ ಅವರು ಶ್ರೀಮದ್ ಭಗವದ್ಗೀತೆಯು ಭಗವಂತನ ವಾಣಿ ಯಾಗಿದ್ದು ಇದರ ಹದಿನೆಂಟು ಅಧ್ಯಾಯಗಳನ್ನು ಪ್ರತಿ ನಿತ್ಯ ಪಾರಾಯಣ ಮಾಡುವುದರಿಂದ ನಮಗೆ ಆಧ್ಯಾತ್ಮಿಕ ಜ್ಞಾನ ಮತ್ತು ಮೋಕ್ಷ ಪ್ರಾಪ್ತಿ ಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನಿರ್ದೇಶಕರಾದ ಮನೋಹರ್ ಭಾಗವಹಿಸಿ ಮಾತನಾಡಿದರು.
ಗೀತಾ ಕಂಠ ಪಾಠ ಸ್ಪರ್ಧೆಯ ತೀರ್ಪುಗಾರರಾಗಿ ಚೇತನ್, ರಾಮಜೋಗಿಹಳ್ಳಿಯ ರಾಮಕೃಷ್ಣರೆಡ್ಡಿ, ಮಂಜುಳಾ, ಲಂಕೇಶಪ್ಪ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪೋಷಕರು ಮತ್ತು ಭಕ್ತರಿಂದ ಶ್ರೀಮದ್ ಭಗವದ್ಗೀತೆಯ ಆರು ಅಧ್ಯಾಯಗಳ ಸಾಮೂಹಿಕ ಪಾರಾಯಣ ನಡೆಯಿತು.
ಕುಮಾರಿ ಕೀರ್ತನ ಆರ್ ಅವರಿಂದ ವಿಶೇಷ ಯೋಗ ನೃತ್ಯ ಪ್ರದರ್ಶನ ಮತ್ತು ಕಂಠ ಪಾಠ ಸ್ಪರ್ಧೆಯ ಬಗ್ಗೆ ಜಿ.ಯಶೋಧಾ ಪ್ರಕಾಶ್ ಸೇರಿದಂತೆ ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು. ಕೊನೆಯಲ್ಲಿ ಅನ್ನಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ಬಿ.ಸಿ ವೆಂಕಟೇಶಮೂರ್ತಿ, ರಾಮಚಂದ್ರಪ್ಪ, ಮಲ್ಲಿಕಾರ್ಜುನ, ರಾಜೇಶ್ವರಿ ರಾಜಾರಾಮ್, ಗೀತಾ ನಾಗರಾಜ್, ರೇವಣಸಿದ್ದಪ್ಪ, ಏಳುಕೋಟಿ ರಾವ್, ಪ್ರಮೋದಾ, ಶ್ರೀಪಾದ್, ಸುಹಾಸ್, ಶೋಭಾ, ಯತೀಶ್ ಎಂ ಸಿದ್ದಾಪುರ, ಐಶ್ವರ್ಯ, ವಿಜಯಲಕ್ಷ್ಮೀ, ಸಂಗೀತ, ರಶ್ಮಿ, ಶೈಲಜ, ಕೃಷ್ಣವೇಣಿ, ಸರಸ್ವತಿ ಗೋವಿಂದರಾಜು, ರಾಘವೇಂದ್ರ, ಪ್ರೇಮಲೀಲಾ, ಮಾರುತಿ ಸೇರಿದಂತೆ ಮಕ್ಕಳು, ಪೋಷಕರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

