ಜಾನಪದ ಕಲಾವಿದ ಶ್ರೀ ಉಮೇಶ ನಾಯ್ಕ್ ರವರಿಗೆ – ಡಾ, ಜಿ ಪರಮೇಶ್ವರ ಅವರಿಂದ ಸನ್ಮಾನ.
ತುಮಕೂರು ಡಿ.15

ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಬಂಜಾರ ಭವನದ ಉದ್ಘಾಟನಾ ಸಮಾರಂಭದಲ್ಲಿ ಹೆಮ್ಮೆಯ ಬಂಜಾರ ಜಾನಪದ ಕಲಾವಿದ ಶ್ರೀ ಸಿ.ಎಚ್ ಉಮೇಶನಾಯ್ಕ ಚಿನ್ನಸಮುದ್ರ ಇವರಿಗೆ ಡಾ, ಜಿ ಪರಮೇಶ್ವರ ನಾಡಿನ ಹೆಮ್ಮೆಯ ಗೃಹ ಸಚಿವರು ಕರ್ನಾಟಕ ಸರ್ಕಾರ ಅವರು ಸನ್ಮಾನಿಸಿದರು.

ಅದ್ದೂರಿಯಾಗಿ ಆಯೋಜಿಸಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಸಿ.ಎಚ್ ಉಮೇಶ ನಾಯ್ಕ್ ರವರು ಕ್ರಾಂತಿ ಗೀತೆ ಹಾಗೂ ನಾಡ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಇವರು ಹಾಡಿರುವ ಕ್ರಾಂತಿ ಗೀತೆಯನ್ನು ಕೇಳಿದ ಡಾ, ಜಿ.ಪರಮೇಶ್ವರ ಗೃಹ ಸಚಿವರು ವೇದಿಕೆಯ ಮೇಲೆ ಶ್ರೀ ಸಿ.ಎಚ್ ಉಮೇಶ ನಾಯ್ಕ್ ರವರನ್ನು ಅಭಿನಂದಿಸಿ ಸನ್ಮಾನ ಮಾಡಿದರು.

