“ಮರೆತೇನೆಂದರೆ ಮರೆಯಲಿ ಹ್ಯಾಂಗ”…..

ತಂದೆ ತಾಯಿ ಮಮತೆ ಜವಾಬ್ದಾರಿಯಿಂದ
ರಾಜನಂತೆ ಬೆಳಸಿದವರನ್ನು
ಸಹೋದರ ಸಹೋದರಿಯರ ಜೋತೆ
ಹರುಷದಿ ಆಡಿ ನಲಿದ ಕ್ಷಣಗಳನ್ನು
ಗುರು ಹಿರಿಯರು ಜೀವನ ಏಳ್ಗೆಗೆ ತೋರಿದ
ಉತ್ತಮತನವನ್ನು
ಬಂಧು ಬಳಗದವರು ನೋವಿನಲಿ ಸಾಂತ್ವನದ
ನುಡಿಗಳು
ನೆರೆಹೊರೆಯವರು ಘಳಿಗೆಯಲಿ ಹಾರೈಕೆಗಳು
ಸ್ನೇಹಿತರು ಸಮಯಕ್ಕನುಸಾರ ಸಹಾಯ
ಸಹಕಾರವನ್ನು
ಜಗದಲಿ ಜನಸಿದ ಬಳಿಕ ಅನಕೂಲಕಾದವರ
ನೆನೆಯುವ ಮನ ಪಾವನವು
“ಮರೆತೇನೆಂದರೆ ಮರೆಯಲಿ ಹ್ಯಾಂಗ”
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

