🚨 ರಾಜ್ಯ ಮಟ್ಟದ ಮಹಾ ಸ್ಫೋಟಕ ವರದಿ 🚨 💥 ಉಡುಪಿ ಕಂದಾಯ ಇಲಾಖೆಯಲ್ಲಿ ‘ಬೆರಳು ಸನ್ನೆ’ ದರ್ಬಾರ್, ತಹಶೀಲ್ದಾರ್‌ಗಳ – ಕೃಪಾಕಟಾಕ್ಷ ದಿಂದಲೇ ನಡೆಯುತ್ತಿದೆಯೇ ಲೂಟಿ? 💥

ಉಡುಪಿ ಡಿ.24

ಜಿಲ್ಲೆಯ ಕಂದಾಯ ಇಲಾಖೆಯು ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ! ದರ್ಖಾಸ್ತು ಭೂಮಿ ಮಂಜೂರಾತಿ, ಪಹಣಿ ತಿದ್ದುಪಡಿ ಹಾಗೂ ಭೂ ಪರಿವರ್ತನೆ (NOC) ಪಡೆಯಲು ಬರುವ ಬಡ ಸಾರ್ವಜನಿಕರನ್ನು ಇಲ್ಲಿನ ಅಧಿಕಾರಿಗಳು ಅಕ್ಷರಶಃ ಸುಲಿಗೆ ಮಾಡುತ್ತಿದ್ದಾರೆ. ಕೇಸ್ ವರ್ಕರ್ ಹಾಗೂ ಕೆಳಹಂತದ ಅಧಿಕಾರಿಗಳು ಲಕ್ಷ ಲಕ್ಷ ಲಂಚ ಕೇಳಲು ತಹಶೀಲ್ದಾರ್‌ಗಳ ಪೂರ್ಣ ಸಾತ್ ಮತ್ತು ಮೌನ ಸಮ್ಮತಿ ಇದೆ ಎಂಬ ಆತಂಕಕಾರಿ ಗುಸುಗುಸು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

⚠️ ತನಿಖಾ ವರದಿಯ ಬೆಚ್ಚಿಬೀಳಿಸುವ ಅಂಶಗಳು: 👆 ಬೆರಳು ಸನ್ನೆಯೇ ಇಲ್ಲಿನ ಭಾಷೆ:-

ತಾಲೂಕು ಕಚೇರಿಗಳಲ್ಲಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಹೊಸ ಸಂಕೇತ ಬಳಸುತ್ತಿದ್ದಾರೆ. ಒಂದು ಬೆರಳು ತೋರಿಸಿದರೆ 1 ಲಕ್ಷ, ಅರ್ಧ ಮಡಿಚಿದರೆ 1.5 ಲಕ್ಷ, ಎರಡು ಬೆರಳು ತೋರಿಸಿದರೆ 2 ಲಕ್ಷ. ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರಿಗೂ ಇದೇ ‘ಡಿಜಿಟಲ್’ ರೇಟ್ ಕಾರ್ಡ್!

🤝 ತಹಶೀಲ್ದಾರ್ ಹಾಗೂ ಬ್ರೋಕರ್ ಗಳ ಅಪವಿತ್ರ ಮೈತ್ರಿ:-

ಕಚೇರಿಯ ಕೇಸ್ ವರ್ಕರ್‌ಗಳು ಹಣದ ಬೇಡಿಕೆ ಇಡುತ್ತಿರುವುದು ಮೇಲಧಿಕಾರಿಗಳ ಬೆಂಬಲವಿಲ್ಲದೆ ಅಸಾಧ್ಯ ಎಂಬುದು ಜನರ ವಾದ. ಈ ಹಿಂದೆ ಆರ್.ಟಿ.ಒ (RTO) ಕಚೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆದ ಮಾದರಿಯಲ್ಲೇ, ಕಂದಾಯ ಇಲಾಖೆಯಲ್ಲೂ ಬ್ರೋಕರ್‌ಗಳ ಮೂಲಕ ಬೇನಾಮಿ ಆಸ್ತಿ ಮಾಡುವ ಜಾಲ ಸಕ್ರಿಯವಾಗಿದೆ.

📂 ಕೆಲಸ ತಡೆಹಿಡಿಯುವ ಬೆದರಿಕೆ:-

“ಮಾಧ್ಯಮಗಳಿಗೆ ಅಥವಾ ಲೋಕಾಯುಕ್ತಕ್ಕೆ ದೂರು ನೀಡಿದರೆ ನಿಮ್ಮ ಕೆಲಸ ಜೀವನ ಪರ್ಯಂತ ಆಗದಂತೆ ಮಾಡುತ್ತೇವೆ” ಎಂದು ಅಧಿಕಾರಿಗಳು ಸಾರ್ವಜನಿಕರನ್ನು ಬೆದರಿಸುತ್ತಿದ್ದಾರೆ. ಈ ಭಯದಿಂದಾಗಿ ಅನೇಕರು ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಿದ್ದಾರೆ.

🏠 ಬೇನಾಮಿ ಆಸ್ತಿಯ ಸಾಮ್ರಾಜ್ಯ:-

ತಹಶೀಲ್ದಾರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ತಮ್ಮ ಹೆಸರಿನಲ್ಲಿ ಆಸ್ತಿ ಮಾಡದೆ, ತಂದೆ-ತಾಯಿ, ಹೆಂಡತಿ, ಮಕ್ಕಳು ಹಾಗೂ ದೂರದ ಸಂಬಂಧಿಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಗಳನ್ನು ಸಂಪಾದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

📍 ನಿಯೋಜಿತ ಸ್ಥಳ ಬಿಟ್ಟು ದಂಧೆ:-

ಸರ್ಕಾರ ನೇಮಿಸಿದ ಸ್ಥಳಗಳಲ್ಲಿ ಕುಳಿತು ಕೆಲಸ ಮಾಡಬೇಕಾದ ಅಧಿಕಾರಿಗಳು, ತಮಗೆ ‘ಫಲವತ್ತಾದ’ ಆದಾಯ ಬರುವ ಕಡೆಗಳಲ್ಲಿ ಕುಳಿತು ಕೆಲಸ ಮಾಡುತ್ತಾ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗುತ್ತಿದ್ದಾರೆ.

🛑 ಕಂದಾಯ ಸಚಿವರಿಗೆ ಸಾರ್ವಜನಿಕರ ನೇರ ಸವಾಲು..!

ಬಡವರಿಗೆ ಭೂಮಿ ನೀಡಬೇಕಾದ ಇಲಾಖೆ ಬ್ರೋಕರ್‌ಗಳ ಅಡ್ಡೆಯಾಗುತ್ತಿರುವುದನ್ನು ಸರ್ಕಾರ ನೋಡಿಯೂ ನೋಡದಂತೆ ಇದೆಯೇ? ಸಾರ್ವಜನಿಕರು ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟಿದ್ದಾರೆ.

🔍 ತಹಶೀಲ್ದಾರ್‌ಗಳ ಆಸ್ತಿ ತನಿಖೆಯಾಗಲಿ:-

ಉಡುಪಿ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ಹಾಗೂ ಅವರ ಕುಟುಂಬಸ್ಥರ ಆಸ್ತಿ ವಿವರವನ್ನು ಲೋಕಾಯುಕ್ತದ ಮೂಲಕ ತನಿಖೆ ನಡೆಸಬೇಕು.

📜 ಸ್ಥಳ ನಿಯುಕ್ತಿ ಆದೇಶ:-

ಅಧಿಕಾರಿಗಳು ತಮಗೆ ನೇಮಕವಾದ ಸ್ಥಳಗಳಲ್ಲೇ ಕರ್ತವ್ಯ ನಿರ್ವಹಿಸುವಂತೆ ತಕ್ಷಣವೇ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.

🏢 ಬ್ರೋಕರ್ ಮುಕ್ತ ಕಚೇರಿ:-

ಕಂದಾಯ ಕಚೇರಿಗಳಲ್ಲಿ ಬ್ರೋಕರ್‌ಗಳ ಹಾವಳಿ ತಪ್ಪಿಸಿ, ಸಿಸಿಟಿವಿ ಕಣ್ಗಾವಲಿನಲ್ಲಿ ಪಾರದರ್ಶಕ ಕೆಲಸ ನಡೆಯಬೇಕು.

“ಸರ್ಕಾರ ಉಚಿತವಾಗಿ ಭೂಮಿ ನೀಡುತ್ತಿದ್ದರೂ, ಆ ಭೂಮಿ ನಮ್ಮ ಹೆಸರಿಗೆ ಬರಲು ಅಧಿಕಾರಿಗಳಿಗೆ ಲಕ್ಷ ಲಕ್ಷ ರೂಪಾಯಿ ಸುರಿಯ ಬೇಕಾದ ದೌರ್ಭಾಗ್ಯ ನಮ್ಮದು. ಈ ಅನ್ಯಾಯಕ್ಕೆ ಕೊನೆಯೆಂದು?” – ಜಿಲ್ಲೆಯ ನೊಂದ ಸಾರ್ವಜನಿಕರು.

📢 ರಾಜ್ಯ ಸರ್ಕಾರದ ಗಮನಕ್ಕೆ:-

ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಈ ಭ್ರಷ್ಟಾಚಾರದ ಜಾಲವನ್ನು ಬೇರುಸಹಿತ ಕಿತ್ತುಹಾಕದಿದ್ದರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುವುದರಲ್ಲಿ ಸಂಶಯವಿಲ್ಲ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button