🚨BREAKING NEWS, ಗಿಳಿಯಾರಿನ ಕಾಯಕ ಯೋಗಿ – ‘ಗಾಡಿ ಕೂಸಣ್ಣ’ ಇನ್ನಿಲ್ಲ!🚨
ಕೋಟ ಏ.05

ಉಡುಪಿ ಜಿಲ್ಲೆಯ ಕೋಟ ಸಮೀಪದ ಗಿಳಿಯಾರು ಗ್ರಾಮದ ಹಿರಿಯ ಶ್ರಮಜೀವಿ, ಪ್ರೀತಿಯ ‘ಗಾಡಿ ಕೂಸಣ್ಣ’ ಎಂದೇ ಚಿರ ಪರಿಚಿತರಾಗಿದ್ದ ಕೂಸ ಪೂಜಾರಿ (94) ಅವರು ಇಂದು ವಿಧಿ ವಶರಾಗಿದ್ದಾರೆ. ದಶಕಗಳ ಕಾಲ ತನ್ನ ಎತ್ತಿನ ಗಾಡಿಯ ಮೂಲಕವೇ ಬದುಕು ಕಟ್ಟಿ ಕೊಂಡಿದ್ದ ಇವರು, ಬದಲಾದ ಆಧುನಿಕ ಜಗತ್ತಿನ ನಡುವೆಯೂ ತನ್ನ ಕಾಯಕ ನಿಷ್ಠೆಯಿಂದ ನಾಡಿಗೆ ಮಾದರಿ ಯಾಗಿದ್ದರು.
📌 ವರದಿಯ ಮುಖ್ಯಾಂಶಗಳು:-
🔴 ಒಂದು ಸುದೀರ್ಘ ಕಾಯಕದ ಅಂತ್ಯ:-
ಗಿಳಿಯಾರು ಪರಿಸರದಲ್ಲಿ ‘ಗಾಡಿ ಕೂಸಣ್ಣ’ ಅಂದರೆ ತಿಳಿಯದವರಿಲ್ಲ. ಆಧುನಿಕ ಸರಕು ಸಾಗಣೆ ವಾಹನಗಳು ಬರುವ ಮುನ್ನವೇ, ತಮ್ಮ ಎತ್ತಿನ ಗಾಡಿಯ ಮೂಲಕ ಮನೆ-ಮನೆಗೆ ಸಾಮಗ್ರಿ ತಲುಪಿಸುತ್ತಿದ್ದ ಇವರು, ಆ ಭಾಗದ ಜನ ಜೀವನದ ಅವಿಭಾಜ್ಯ ಅಂಗವಾಗಿದ್ದರು.
🔴 ಅವಿರತ ಶ್ರಮ ಜೀವಿ:-
ವಯಸ್ಸು 90 ದಾಟಿದರೂ ಸದಾ ಕೆಲಸದಲ್ಲಿ ಚಟುವಟಿಕೆಯಿಂದ ಇರುತ್ತಿದ್ದ ಇವರು, ಕೊನೆಯ ವರೆಗೂ ಸೋಮಾರಿತನವನ್ನು ದೂರುವಿಟ್ಟವರು. ಇವರ ಎತ್ತಿನ ಗಾಡಿಯ ಸದ್ದು ಗಿಳಿಯಾರಿನ ರಸ್ತೆಗಳಲ್ಲಿ ದಶಕಗಳ ಕಾಲ ಅನುರಣಿಸಿತ್ತು.
🔴 ಸರಳ ವ್ಯಕ್ತಿತ್ವದ ಮಾಣಿಕ್ಯ:-
ಯಾರ ಮನಸ್ಸನ್ನೂ ನೋಯಿಸದ, ಸದಾ ಮುಗುಳ್ನಗೆಯಿಂದಲೇ ಎಲ್ಲರನ್ನೂ ಮಾತನಾಡಿಸುತ್ತಿದ್ದ ಕೂಸ ಪೂಜಾರಿಯವರು ಸ್ಥಳೀಯವಾಗಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಇವರi ನಿಧನದಿಂದಾಗಿ ಗಿಳಿಯಾರು ಗ್ರಾಮ ಒಬ್ಬ ಹಿರಿಯ ಮಾರ್ಗ ದರ್ಶಕನನ್ನು ಹಾಗೂ ಶ್ರಮ ಸಂಸ್ಕೃತಿಯ ಕೊಂಡಿಯನ್ನು ಕಳೆದು ಕೊಂಡಂತಾಗಿದೆ.
🙏 ಗಣ್ಯರ ಸಂತಾಪ:-
ಕೂಸ ಪೂಜಾರಿಯವರ ನಿಧನಕ್ಕೆ ಗಿಳಿಯಾರು ಹಾಗೂ ಕೋಟ ಭಾಗದ ವಿವಿಧ ಸಂಘ-ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ. “ಒಬ್ಬ ಪ್ರಾಮಾಣಿಕ ಕಾಯಕ ಯೋಗಿಯನ್ನು ನಾವು ಕಳೆದು ಕೊಂಡಿದ್ದೇವೆ” ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ.
🗞️ ವರದಿ:ಆರತಿ.ಗಿಳಿಯಾರು.ಉಡುಪಿ

