“ಗ್ಯಾಂಗ್ಸ್ ಆಪ್ ಯುಕೆ’ ಪ್ರೇಕ್ಷಕರು ಖಂಡಿತ ಗೆಲ್ಲಿಸ್ತಾರೆ – ರವಿ ಶ್ರೀವತ್ಸ.

ಬೆಂಗಳೂರ ಏ.06

ಡೆಡ್ಲಿಸೋಮ, ಮಾದೇಶ ಖ್ಯಾತಿಯ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ಅವರ ಡೆಡ್ಲಿ ಆರ್ಟ್ಸ್ ಬ್ಯಾನರ್ ನಿರ್ಮಾಣದ ‘ಗಾಂಗ್ಸ್ ಆಪ್ ಯುಕೆ’ ಚಿತ್ರವು ಏ.೧೦ ರಂದು ರಾಜ್ಯಾದ್ಯಂತ ಬಿಡುಗಡೆ ಯಾಗಲಿದೆ.

‘ಗ್ಯಾಂಗ್ಸ್ ಆಫ್ ಯುಕೆ’ (ಉತ್ತರ ಕರ್ನಾಟಕ) ಚಿತ್ರವು ‘ಭೀಮೆಯ ಮಡಿಲಲ್ಲಿ’ ಎಂಬ ಉಪ ಶಿರ್ಷಿಕೆ ಒಳ ಗೊಂಡಿದ್ದು, ಉತ್ತರ ಕರ್ನಾಟಕದ ಕಪ್ಪು ಮಣ್ಣಿನಲ್ಲಿ ನಡೆದ ಹೆಣ್ಣು ಮಕ್ಕಳ ರಕ್ತ ಕಣ್ಣೀರಿನ ಹಾಗೂ ಮಾನವೀಯ ಬಾಂಧವ್ಯಗಳ ನಡುವಿನ ನೈಜ ಘಟನೆ ಆಧರಿಸಿದ ಚಿತ್ರವಿದು.

ಬಾಗಲಕೋಟೆ ಜಿಲ್ಲೆಯಲ್ಲೇ ಸಂಪೂರ್ಣ ಚಿತ್ರೀಕರಣವಾಗಿದ್ದು, ಹೆರಕಲ್, ಶಿರೂರು, ಹುನಗುಂದ, ಅಮರಾವತಿ, ಇಳಕಲ್, ಅಮೀನಗಡ ಅಲ್ಲದೆ ಬೆಂಗಳೂರಿನಲ್ಲೂ ಚಿತ್ರೀಕರಿಸಲಾಗಿದೆ. ಉತ್ತರ ಕರ್ನಾಟಕದ ಐವತ್ತಕ್ಕೂ ಹೆಚ್ಚು ರಂಗಭೂಮಿ ಕಲಾವಿದರು, ಹೊಸ ಕಲಾವಿದರು ಅಭಿನಯಿಸಿರುವುದು ಅದರಲ್ಲೂ ಸ್ಥಳೀಯ ಕಲಾವಿದರೇ ಅಭಿನಯಿಸಿರುವುದು ವಿಶೇಷವಾಗಿದೆ.

ಸಂತ ಶಿಶುನಾಳ ಶರೀಫರ ನಾಲ್ಕು ಗೀತೆಗಳನ್ನು ಚಿತ್ರದಲ್ಲಿ ಬಳಸಿ ಕೊಳ್ಳಲಾಗಿದೆ. ರಕ್ತಕ್ಕೆ ರಕ್ತವೇ ಮಜ್ಜನ, ಜಿದ್ದು, ಒಬ್ಬರಿಂದ ಒಬ್ಬರಿಗೆ ಹೇಗೆ ವರ್ಗಾಯಿಸಿ ಕೊಂಡು ಹೋಗುತ್ತದೆ ಎಂಬುದೇ ಈ ಚಿತ್ರದ ವಿಷಯ. ಇದೀಗ ಇದರ ಚಿತ್ರಗಳು, ವಿಡಿಯೋ ತುಣುಕುಗಳು ಎಲ್ಲೆಡೆ ವೈರಲ್ ಆಗುತ್ತಿವೆ.

ಕನ್ನಡ ಚಿತ್ರರಂಗದಲ್ಲಿ ಇದೊಂದು ಧೂಳೆಬ್ಬಿಸುವ ಚಿತ್ರ ಆಗಲಿದೆ. ನನ್ನ ಹಿಂದಿನ ಚಿತ್ರಗಳಿಗಿಂತ ಇದು ವಿಭಿನ್ನವಾಗಿದೆ ಎಂದು ನಿರ್ದೇಶಕ ರವಿ ಶ್ರೀವತ್ಸ ಹೆಳುತ್ತಾರೆ. ಈ ಹಿಂದಿನ ತಮ್ಮ ಚಿತ್ರಗಳನ್ನು ಕನ್ನಡಿಗರು ಗೆಲ್ಲಿಸಿದ್ದಾರೆ ಈ ಚಿತ್ರವನ್ನೂ ಗೆದ್ದೇ ಗೆಲ್ಲಿಸುತ್ತಾರೆ ಎಂಬ ಭರವಸೆಯಲ್ಲಿ ಚಿತ್ರತಂಡದೊಂದಿಗೆ ಜನರ ಬಳಿಗೆ ಸಾಗಿ ಮೊದಲ ಹಂತದ ಪ್ರಚಾರಕಾರ್ಯ ಮುಗಿಸಿ ಎರಡನೆ ಹಂತದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ತಾರಾಗಣದಲ್ಲಿ ಒರಟ ಪ್ರಶಾಂತ್, ಕಿಂಗ್ ಮುನಿ, ಸೋನು ಉಪಾಧ್ಯ, ಪೃಥ್ವಿ ಸುಬ್ಬಯ್ಯ, ಕೆ.ಆರ್ ಅಮೋಘ, ಸತ್ಯ, ಕೋಟೆ ಪ್ರಭಾಕರ, ಬಿ.ನವೀನ ಕಷ್ಣ. ಜೋತಿಷ್ ಶೆಟ್ಟಿ, ಪದ್ಮವಾಸಂತಿ, ಉಗ್ರಂ ರೆಡ್ಡಿ, ವಿಕಾಸ ಮದಕರಿ, ಕಿರಣ, ದಿಲ್ಲನ್ ಚೆಂಗಪ್ಪ, ಮಹಾಂತೇಶ ಗಜೇಂದ್ರಗಡ, ಮಹಾಂತೇಶ ಹಳ್ಳೂರ, ಅಮತ್ ಹಿರಣ್ಯ, ಗುರುರಾಜ ಗೌಡ, ನಂಜು ಸಿದ್ದಪ್ಪ, ರಮೇಶ ಮದಗುಂದ, ಸಕ್ಕರೆನಾಡು ಉಮೇಶ್ ಠಂಕಸಾಲಿ ಅಲ್ಲದೆ ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರನ್ನೂ ಇದರಲ್ಲಿ ಬಳಸಿ ಕೊಳ್ಳಲಾಗಿದೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಆರ್.ಗಿರಿ ಸಂಭಾಷಣೆ ಎಂ.ಎಸ್ ರಮೇಶ, ಸಂಗೀತ ಸುಕುಮಾರ, ಸಂಕಲನ ಲಕ್ಷ್ಮಿನಾರಾಯಣ ರೆಡ್ಡಿ, ಸಾಹಸ ಥ್ರಿಲ್ಲರ್ ಮಂಜು, ಪ್ರಸಾಧನ ರಾಜೇಶ್, ವಸ್ತ್ರ ವಿನ್ಯಾಸ ಪುಟ್ಟರಾಜು, ಡಬ್ಬಿಂಗ್ ಆನಂದ, ಎಪೆಕ್ಸ್ ಸೇತು, ಪಿ.ಆರ್‌.ಓ ನಾಗೇಂದ್ರ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಿಗಿ ಸಹಾಯಕ ನಿರ್ದೇಶನ ರಾವಣ ಅವರದ್ದು ಇದೆ.

ಚಿತ್ರದ ಕಥೆ ಕ್ಷಣ ಕ್ಷಣಕ್ಕೂ ರೋಚಕವಾಗಿದ್ದು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ ಯಶಸ್ವಿ ಗೊಳಿಸ ಬೇಕೆಂದು ತಿಳಿಸಿದರು.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button