ಕೊರವರ ಓಣಿ ಸದ್ಯ ಹುಬ್ಬಳ್ಳಿಯ ಕಮರಿಪೇಟೆ ಆಗಿ ಮಾರ್ಪಡು ಆಗುವುದರಲ್ಲಿ ಸಂಶಯವಿಲ್ಲ – ಲಂಗು ಲಗಾಮು ಇಲ್ಲದ ಪೋಲಿಸ್ ಇಲಾಖೆ?..
ಇಲಕಲ್ಲ ಜು.06
ಇದು ಒಂದು ದಿನದ ಮಾತಲ್ಲ ನಿತ್ಯ ನಿರಂತರ ಅವ್ಯಾಹತವಾಗಿ ನಡೆಯುತ್ತಿರುವ ಪ್ರಕ್ರಿಯೆ ಆಗಿದ್ದರು ನಮಗೇನು ಗೊತ್ತಿಲ್ಲ ದಂತೆ ನಟಿಸುವ ನಟನಾಕಾರರಗೆ ಒಂದು ದಿನ ಗೊತ್ತು ಆಗಲೇ ಬೇಕು ಆ ಇವತ್ತು ಯಾಕೇ ಆಗಿರಬಾರದು.
ಅಲಂಪೂರಪೇಟೆಯ ಕೊರವರ ಓಣಿ ಸದ್ಯ ಈಗ ಸಾಮಾಜಿಕವಾಗಿ ರೋಗಗ್ರಸ್ಥ ದಿಂದ ಕೂಡಿದ್ದು ಅತ್ಯಂತ ಆಘಾತಕಾರಿ ಯಾಗಿರುವುದು ಗುಟ್ಟಾಗಿ ಉಳಿದಿಲ್ಲ ಅನ್ನುವುದು ಡೇ & ನೈಟ್ ಸಾಕ್ಷೀಕರಿಸುತ್ತಿವೆ.
ಪ್ರಸ್ತುತ ಜನರೇಷನ್ ನಾ ಮುಂದು ತಾ ಮುಂದು ಅಂತಾ ತೀವ್ರ ಪೈಪೋಟಿಗಳ ಜಗತ್ತಿನ ಮದ್ಯೆ ಸಾಮಾಜಿಕ ಅಸ್ತವ್ಯಸ್ತತೆ ತಾಂಡಾ ವಾಡುತ್ತಿದ್ದರು ತಮಗೆ ಅರಿವು ಇಲ್ಲದಂತೆ ಸೈಡ್ ಲೈನ್ ಆಗುವುದು ಎಷ್ಟು ಸಮಂಜಸ ಅಂತ ನಾಗರಿಕ ಸಮಾಜಕ್ಕೆ ಸವಾಲಾಗಿದೆ ಅಂದ್ರೆ ಅತಿಶಯೋಕ್ತಿ ಆಗಲಾರದು.

ತಿದ್ದಿಕೊಳ್ಳಲು ಸಮಯ ಅವಕಾಶಗಳಿದ್ದು ತಿದ್ದಿ ಕೊಳ್ಳಿರಿ ಸಮಯ ಏನಾದರೂ ಕೈಕೊಟ್ಟರೆ ನೀವು ಪೋಲಿಸ್ ಅತಿಥಿಗಳು ಗ್ಯಾರಂಟಿ ಯೋಜನೆಯಲ್ಲಿ ಯಥಾವತ್ತಾಗಿ ಜಾರಿ ಆದರೂ ಅಚ್ಚರಿ ಪಡಬೇಕಾಗಿಲ್ಲಾ ಸಮಸ್ತ ವಾರ್ಡಿನ ನಾಗರಿಕರ ಪರ ಎಚ್ಚರಿಕೆ ಆಗಿದೆ.
ನಮ್ಮ ಮುಂದಿರುವ ದೃಢ ಸಂಕಲ್ಪ ಒಂದೇ ಆಗಿದೆ ಅದು ಏನೆಂದರೆ ಸ್ವಾಸ್ಥ್ಯ ನಾಗರಿಕ ಸಮಾಜ ನಿರ್ಮಾಣದ ಗುರಿ ಆಗಬೇಕು.
ಈ ಕೆಟ್ಟ ಸಂಸ್ಕಾರ ಈಗಲೇ ಕೈಬೀಡ ಬೇಕೆಂದು ಆ ವಾರ್ಡಿನ ಸಮಸ್ತ ನಾಗರಿಕರು ಒಕ್ಕೊರಲಿನಿಂದ ಆಗ್ರಹ ಆಗಿದೆ. ಇದು ಅಲ್ಲಿರುವ ನಾಗರಿಕರ ಸಮಾಜದ ಸ್ವಾಸ್ಥ್ಯ ಹಾಗೂ ಆರೋಗ್ಯದ ಮೇಲೆ ಏನಾದರೂ ವ್ಯತಿರಿಕ್ತವಾದ ನಡೆ ಪ್ರದರ್ಶನವಾದರೆ ಇದಕ್ಕೆ ನೇರ ಹೊಣೆ ತಾವೇ ಕಾರಣರೆಂದು ಈ ಮೂಲಕ ಸಮಸ್ತ ನಾಗರಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
