ಬ್ರಹ್ಮಚರ್ಯ- ವಾನಪ್ರಸ್ಥಾ- ಸಂನ್ಯಾಸಾಶ್ರಮಗಳಿಗೆ ಗೃಹಸ್ಥಾಶ್ರಮವೇ – ಆಧಾರ ಪೂಜ್ಯ ವೈ.ರಾಜಾರಾಮ್ ಗುರುಗಳು.

ಚಳ್ಳಕೆರೆ ಜು.02

ಪೂಜ್ಯ ರಾಜೇಶ್ವರಿ ಅಮ್ಮನವರಿಗೆ ಗೌರವ ಸಮರ್ಪಣೆ 💐

ಗೃಹಸ್ಥ ಆದರ್ಶ ಜೀವನ ನಡೆಸಲು ಆಧ್ಯಾತ್ಮ ವಿದ್ಯೆ ಅತ್ಯಂತ ಅವಶ್ಯಕ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ಹೇಳಿದರು.

ಶಾಂತಿ ನಗರದ ಶ್ರೀಗಣಪತಿ ದೇವಸ್ಥಾನದಲ್ಲಿ ಶ್ರೀಗಣೇಶ ಮಹಿಳಾ ಭಜನಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಗೃಹಸ್ಥ ಜೀವನದಲ್ಲಿ ಆಧ್ಯಾತ್ಮ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡಿದರು.

ಗೃಹಸ್ಥರಾದವರು ದಿನ ನಿತ್ಯದ ಕರ್ಮಗಳನ್ನು ನಿಷ್ಕಾಮ ಭಾವದಿಂದ-ಭಗವದ್ ಸಮರ್ಪಿತವಾಗಿ ಮಾಡಬೇಕು, ಮನೆಗೆ ಬಂದ ಅತಿಥಿಗಳನ್ನು ದೇವರರಂತೆ ಕಂಡು ಅವರನ್ನು ಯೋಗ್ಯ ರೀತಿಯಲ್ಲಿ ಉಪಚರಿಸಿ ಆದರಿಸ ಬೇಕು. ಪ್ರತಿ ನಿತ್ಯ ಮನೆಯಲ್ಲಿ ಭಜನೆ ಮಾಡಬೇಕು‌. ದಾನ ಮಾಡುವ ಅಭ್ಯಾಸವನ್ನು ಬೆಳೆಸಿ ಕೊಳ್ಳಬೇಕು. ಇವೆಲ್ಲವುಗಳ ಸರಿಯಾದ ಅನುಷ್ಠಾನದಿಂದ ಗೃಹಸ್ಥ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದ ಅವರು ಕೌಂಡಿನ್ಯ ಮತ್ತು ಭಕ್ತ ಸುಧಾಮನ ಕಥೆಯ ಮೂಲಕ ವಿವರಿಸಿದರು.

ಕಾರ್ಯಕ್ರಮದ ಪ್ರಯುಕ್ತ ಶ್ರೀಮತಿ ಸುನೀತಾ ಗೋಪಾಲಕೃಷ್ಣ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್, ಗೀತಾ ಪ್ರಕಾಶ್, ಪ್ರಮೀಳಾ ಜಗದೀಶ್ ಅವರ ವಿಶೇಷ ಭಜನೆಗೆ ಗೋವಿಂದರಾಜು ತಬಲಾ ಸಾಥ್ ನೀಡಿದರೆ ಸತ್ಸಂಗವನ್ನು ಯತೀಶ್ ಎಂ ಸಿದ್ದಾಪುರ ಸುಂದರವಾಗಿ ನಿರೂಪಿಸಿದರು. ಕೊನೆಯಲ್ಲಿ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು‌.

ಗಣೇಶ ದೇವರಿಗೆ ಮಂಗಳಾರತಿ

ವಿಶೇಷ ಸತ್ಸಂಗದಲ್ಲಿ ರಾಜೇಶ್ವರಿ ರಾಜಾರಾಮ್, ಎಚ್ ಲಕ್ಷ್ಮೀದೇವಮ್ಮ, ಪ್ರೇಮಾ, ಲತಾ, ಈಶ್ವರಮ್ಮ, ಪದ್ಮ, ಗಜಮ್ಮ, ವಿಸ್ಮಿತ, ಜ್ಯೋತಿ, ಮೋಹಿನಿ, ಭಾವನಾ, ಸುಮ, ಮೀನಾಕ್ಷಿ, ರಾಜೇಶ್ವರಿ, ಭಾರತಿ, ಸರಸ್ವತಿ ಗೋವಿಂದರಾಜು, ಕವಿತಾ, ಅಂಬುಜಾ, ಗೀತಾ ಭಕ್ತವತ್ಸಲ, ಪ್ರೇಮಲೀಲಾ, ಪದ್ಮ, ಜಿ.ಯಶೋಧಾ ಪ್ರಕಾಶ್, ಪುಷ್ಪಲತಾ, ಶಾಂತಮ್ಮ, ಗೀತಾ ವೆಂಕಟೇಶ್, ರಾಘವೇಂದ್ರ, ಪ್ರಹ್ಲಾದ್, ಶೋಭಾ, ಗೀತಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button