ಪ್ರೇಕ್ಷಕರ ಕಣ್ಣಲ್ಲಿ ಭಾವನಾತ್ಮಕ ಕಣ್ಣೀರು – ತರಿಸಿದ “ಕಾಲಘಟ್ಟ”.

ಬೆಂಗಳೂರು ಜು.03

ಕನ್ನಡ ಚಿತ್ರ ರಂಗದಲ್ಲಿ ಭಾವನಾತ್ಮಕ ಕಥೆಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಿರ್ದೇಶಕರ ಸಾಲಿನಲ್ಲಿ ಎಸ್. ಮಹೇಂದರ್ ಮತ್ತು ಜೋಗಿ ಪ್ರೇಮ್ ಹೆಸರುಗಳು ಸದಾ ಮುಂಚೂಣಿಯಲ್ಲಿವೆ. ಇದೀಗ ಅದೇ ಸಾಲಿಗೆ ಹೊಸದಾಗಿ ಸೇರ್ಪಡೆ ಯಾಗಿರುವ ಹೆಸರು ನಿರ್ದೇಶಕ ಕೆ. ಪ್ರಕಾಶ್ ಅಂಬಳೆ.

ನಿರ್ಮಾಪಕ ಲಯನ್ ಚಿಕ್ಕೇಗೌಡ ಟಿ.ಸಿ. ತಳಗವಾಡಿ ಅವರ ನಿರ್ಮಾಣದಲ್ಲಿ “ಕಾಲಘಟ್ಟ” ಚಿತ್ರ ಇತ್ತೀಚಿಗೆ ರಾಜ್ಯಾದ್ಯಂತ ಬಿಡುಗಡೆ ಯಾಗಿ ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುತ್ತಿದೆ. ಚಿತ್ರ ಮಂದಿರಗಳಲ್ಲಿ ಹಲವರ ಕಣ್ಣಲ್ಲಿ ಅರಿಯದಂತೆ ಕಣ್ಣೀರು ತರಿಸುತ್ತಿದೆ.

ಜನಪದ ಸೊಗಡು, ಮಣ್ಣಿನ ಪರಿಮಳ, ಕುಟುಂಬದ ಬಾಂಧವ್ಯ ಮತ್ತು ಮಾನವೀಯ ಮೌಲ್ಯಗಳನ್ನು ಮನ ಮುಟ್ಟುವಲ್ಲಿ ಚಿತ್ರದ ಕಥೆ ಮತ್ತು ನಿರೂಪಣೆ ಪ್ರೇಕ್ಷಕರನ್ನು ಆರಂಭದಿಂದ ಅಂತ್ಯದ ವರೆಗೂ ಹಿಡಿದಿಟ್ಟು ಕೊಳ್ಳುವಲ್ಲಿ ಯಶಸ್ವಿ ಯಾಗಿದೆ.

ನಿರ್ದೇಶಕ ಕೆ.ಪ್ರಕಾಶ ಅಂಬಲೆ

ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಪ್ರಭಾವ ಮೂಡಿಸುತ್ತಿವೆ. ಅನೇಕ ಪ್ರೇಕ್ಷಕರು ಚಿತ್ರ ವೀಕ್ಷಣೆಯ ವೇಳೆ ನಂತರ ಹೊರಬಂದ ಮೇಲೂ ಭಾವುಕರಾಗಿರುವುದು “ಕಾಲಘಟ್ಟ” ಚಿತ್ರದ ದೊಡ್ಡ ಗೆಲುವಾಗಿದೆ.

ಈ ಚಿತ್ರದ ಯಶಸ್ಸಿನ ಹಿಂದೆ ನಿರ್ಮಾಪಕ ಲಯನ್ ಚಿಕ್ಕೇಗೌಡ ಟಿ.ಸಿ. ತಳದವಾದಿ ಅವರ ಬೆಂಬಲವೂ ಪ್ರಮುಖವಾಗಿದೆ. ಕನ್ನಡದ ಮಣ್ಣಿನ ಕಥೆಯನ್ನು ದೊಡ್ಡ ಪರದೆಯ ಮೇಲೆ ತರಬೇಕೆಂಬ ಉದ್ದೇಶದಿಂದ ಅವರು ಚಿತ್ರತಂಡಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಚಿತ್ರದ ಗುಣಮಟ್ಟಕ್ಕೆ ಯಾವುದೇ ರಾಜಿ ಮಾಡಿಕೊಳ್ಳದೆ ನಿರ್ಮಾಣ ಮಾಡಿದ್ದಾರೆ.

ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಪ್ರತಿಭೆ ಕೆ. ಪ್ರಕಾಶ್ ಅಂಬಳೆ ಅವರು ಕನ್ನಡದ ನೆಲದ ಕಥೆಯನ್ನು ಕನ್ನಡಿಗರ ಮುಂದಿಟ್ಟಿರುವ ರೀತಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ನಿರ್ಮಾಪಕ ಟಿ.ಸಿ ತಳಗವಾಡಿ

ವಾಣಿಜ್ಯ ಅಂಶಗಳ ಜೊತೆಗೆ ಸಂಸ್ಕೃತಿ, ಪರಂಪರೆ ಮತ್ತು ಕುಟುಂಬದ ಮೌಲ್ಯಗಳನ್ನು ಸಮತೋಲನವಾಗಿ ಕಟ್ಟಿ ಕೊಟ್ಟಿರುವುದು ಚಿತ್ರದ ಮತ್ತೊಂದು ವಿಶೇಷತೆ. ಕಲಾವಿದರೂ, ತಂತ್ರಜ್ಞರೂ ಅಷ್ಟೇ ಅಚ್ಚು ಕಟ್ಟಾಗಿ ಕಾರ್ಯನಿರ್ವಹಿಸಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ “ಕಾಲಘಟ್ಟ” ಚಿತ್ರ ಕುಟುಂಬ ಸಮೇತ ನೋಡಬಹುದಾದ ಉತ್ತಮ ಮನರಂಜನಾ ಚಿತ್ರವಾಗಿ ಹೊರ ಹೊಮ್ಮಿದ್ದು.

ಮಾಧ್ಯಮದವರಿಂದಲೂ ಉತ್ತಮ ಪ್ರಶಂಸೆಗಳು ವ್ಯಕ್ತವಾಗಿವೆ. ನಿರ್ಮಾಪಕ ಲಯನ್ ಚಿಕ್ಕೇಗೌಡ ಟಿ.ಸಿ ತಳಗವಾಡಿ ಹಾಗೂ ನಿರ್ದೇಶಕ ಕೆ. ಪ್ರಕಾಶ್ ಅಂಬಳೆ ಅವರ ಜೋಡಿ ಕನ್ನಡ ಚಿತ್ರ ರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದು ಇನ್ನೂ ಹೆಚ್ಚು ಚಿತ್ರಗಳು ಇವರಿಂದ ನಿರ್ಮಾಣವಾಗಲಿ ಎಂದು ಶುಭ ಹಾರೈಸೋಣ.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button