ಕರುಣಾಮಯಿ ವಾತ್ಸಲ್ಯದಾತೆ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.

ಚಳ್ಳಕೆರೆ ಜು.02

ಶ್ರೀಮತಿ ಜಿ.ಯಶೋಧಾ ಪ್ರಕಾಶ್ ನೇತೃತ್ವದಲ್ಲಿ ಶ್ರೀಮದ್ ಭಗವದ್ಗೀತೆಯ ಕರ್ಮ ಯೋಗದ ಶ್ಲೋಕಗಳ ಕಲಿಕಾ ತರಗತಿ

ಶ್ರೀಮಾತೆ ಶಾರದಾದೇವಿಯವರು ಭಕ್ತರ ಪಾಲಿಗೆ ಕರುಣಾಮಯೀ-ವಾತ್ಸಲ್ಯದಾತೆಯಾಗಿದ್ದರು ಎಂದು ಚಳ್ಳಕೆರೆಯ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.

ಶ್ರೀರಾಮಕೃಷ್ಣರ ನಾಮಸ್ಮರಣೆ

ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಮುನ್ನಡೆಸುವ ಮಹಾಶಕ್ತಿ” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಸತ್ಸಂಗದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಸದ್ಭಕ್ತರಿಂದ ಸಾಮೂಹಿಕ ಭಜನೆ, ಶ್ರೀಮದ್ ಭಗವದ್ಗೀತೆಯ ಕರ್ಮಯೋಗದ ಶ್ಲೋಕಗಳ ಕಲಿಕಾ ತರಗತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಶಾಂತಮ್ಮ, ಗೀತಾಲಕ್ಷ್ಮೀ, ಶಾರದಮ್ಮ, ವಿಜಯಲಕ್ಷ್ಮೀ, ರಶ್ಮಿ, ಸಂಗೀತ, ಶೈಲಜಾ,ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಜಯಮ್ಮ, ಜಯಶೀಲಮ್ಮ ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button