ಶ್ರೀ ಪವಾಡ ಬಸವೇಶ್ವರ ₹1.20 ಅಧಿಕ ಮೌಲ್ಯದ – ಮೂರ್ತಿ ಕಳ್ಳತನ.
ಬಸರಕೋಡ ಜು.06

ಮುದ್ದೇಬಿಹಾಳ ತಾಲೂಕಿನ ಪ್ರಸಿದ್ಧ ಸೂಕ್ಷೇತ್ರ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ (ಜುಲೈ 6) ಮುಂಜಾನೆ ಬಾರಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ದೇವರ ಅಂದಾಜು 35 ಕೆ.ಜಿ ತೂಕದ ಬೆಳ್ಳಿಯ ಮೂರ್ತಿ ಕವಚ,ನಿತ್ಯ ಪೂಜೆಗೆ ಬಳಸುತ್ತಿದ್ದ 10 ಕೆ.ಜಿ ತೂಕದ ಬೆಳ್ಳಿ ಮೂರ್ತಿ ಸೇರಿದಂತೆ ಒಟ್ಟು 60 ಕೆ.ಜಿಗೂ ಅಧಿಕ ತೂಕದ ಪೂಜಾ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ.

ಕಳುವುವಾದ ಶ್ರೀ ಪವಾಡ ಬಸವೇಶ್ವರ ಮೂರ್ತಿ.
ದೋಚಲಾದ ಈ ಬೆಳ್ಳಿ ಆಭರಣಗಳ ಮಾರುಕಟ್ಟೆ ಮೌಲ್ಯ ಅಂದಾಜು 1.20 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗಿದೆ.
ಮಾಜಿ ಶಾಸಕ ನಡಹಳ್ಳಿ ಕಾಣಿಕೆ ನೀಡಿದ್ದ ಮುಖ ಕವಚ! ಕಳುವುವಾಗಿರುವ 35 ಕೆ.ಜಿ ತೂಕದ ಭವ್ಯ ಬೆಳ್ಳಿಯ ಮುಖ ಕವಚವನ್ನು ಮಾಜಿ ಶಾಸಕರು ಹಾಗೂ ಬಿಜೆಪಿ ರೈತ ಮೋರ್ಚ ರಾಜ್ಯಾಧ್ಯಕ್ಷರಾದ ಎ.ಎಸ್ ಪಾಟೀಲ್ ಅವರು ದೇವಸ್ಥಾನಕ್ಕೆ ಭಕ್ತಿಯಿಂದ ದಾನವಾಗಿ ನೀಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

