‌ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ ಸಮಸ್ಯೆ – ಪರಿಹರಿಸದ ವೈದ್ಯಾಧಿಕಾರಿಗಳು.

ತರೀಕೆರೆ ಜು.27

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ತುಂಬಿ ತುಳುಕುತ್ತಿರುವ ರೋಗಿಗಳ ಪರದಾಟ ಆಸ್ಪತ್ರೆ ಅವ್ಯವಸ್ಥೆ ಕೇಳದ ಅಧಿಕಾರಿಗಳು. ಚೀಟಿ ಬರೆಸಲು ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲ ಬೇಕಾಗಿದೆ, ಮಾತ್ರೆ ಔಷಧಿ ಪಡೆಯಲು ಸಹ ಉದ್ದದ ಸಾಲು ನಿಂತು ಪಡೆಯ ಬೇಕಾಗಿದೆ.

ಸಾರ್ವಜನಿಕರ ರೋಗಿಗಳ ಗೋಳು ಪರದಾಟ ಕೇಳುವವರಿಲ್ಲ ಔಷಧಿ ಕೊಡುವ ಫಾರ್ಮಸಿಸ್ಟ್ ಎರಡು ಜನ ಇದ್ದು ಇನ್ನೂ ಎರಡು ಜನರ ಅವಶ್ಯಕತೆ ಇದೆ ಕನಿಷ್ಠ ಮೂರು ಕೌಂಟರ್ ಮಾಡ ಬೇಕಾಗಿದೆ.

ಚೀಟಿ ಬರೆಯುವ ಸಿಬ್ಬಂದಿ ಎರಡು ಜನ ಇದ್ದು ಇನ್ನೂ ಎರಡು ಜನ ಸಿಬ್ಬಂದಿಗಳ ಕೊರತೆ ಇದೆ. ಇಲ್ಲಿಯೂ ಸಹ ಇನ್ನು ಎರಡು ಜನ ಸಿಬ್ಬಂದಿ ಎರಡು ಕೌಂಟರ್ ತೆರಿಯ ಬೇಕಾಗಿದೆ ಲ್ಯಾಬ್ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ.

ಈ ಎಲ್ಲಾ ಕೊರತೆಗಳನ್ನು ತಾಲೂಕು ವೈದ್ಯಧಿಕಾರಿಗಳು ಜಿಲ್ಲಾ ವೈದಧಿಕಾರಿ ಡಿ.ಎಚ್.ಓ ಹಾಗೂ ತರೀಕೆರೆ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಪರದಾಟ ಸಮಸ್ಯೆ ಪರಿಹರಿಸ ಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ ಶಾಸಕರು ಈ ಎಲ್ಲಾ ಕೊರತೆಗಳನ್ನು ಬಗೆಹರಿಸುವರೆ.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button