ಶರಣ ಸಾಹಿತ್ಯ ಪರಿಷತ್ತಿನಿಂದ ದತ್ತಿ ಉಪನ್ಯಾಸ – ಕಾರ್ಯಕ್ರಮ ಜರಗಿತು.
ಕೆ.ಹೊಸಹಳ್ಳಿ ಸೆ.03


ಕೂಡ್ಲಿಗಿ ತಾಲೂಕಿನ ಪಂಡಿತ ಪರಂಪರೆಯಲ್ಲಿ ಶ್ರೇಷ್ಠವಾದ ವಿದ್ವಾನ್ ಬಿಎಮ್ ಗುರುಸಿದ್ಧಯ್ಯನವರು ವಾರ್ದಿಕ ಷಟ್ಪಪದಿಯಲ್ಲಿ ಶ್ರೀ ಶರಣಬಸವೇಶ್ವರ ಚರಿತಂ ಕಾವ್ಯವನ್ನು ರಚಿಸುವ ಮೂಲಕ ಶರಣ ಸಾಹಿತ್ಯಕ್ಕೆ ಅಮೋಘ ಸೇವೆ ಸಲ್ಲಿಸಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ ರವೀಂದ್ರನಾಥ ತಿಳಿಸಿದರು.
ಕಾನಾ ಹೊಸಹಳ್ಳಿ ಸೋಫಿಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲೂಕು ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಹಾಗೂ ಯುವ ಘಟಕ ಕೂಡ್ಲಿಗಿ ಬಾಪೂಜಿ ಸಮೂಹ ಸಂಸ್ಥೆ ಚಿತ್ರದುರ್ಗ ಆಯೋಜಿಸಿದ್ದ ಷ.ಬ್ರ ಶ್ರೀ ಕೊಂಕಲ್ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸ್ಮರಣಾರ್ಥ ದತ್ತಿ ಮತ್ತು ವಿದ್ವಾನ್ ಶ್ರೀ ಬಿಎಮ್ ಗುರು ಸಿದ್ದಯ್ಯ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ 111 ನೇ. ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಜರಗಿತು.
ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು ಆಧ್ಯಾತ್ಮ ಚಿಂತನೆ ಆಗರವಾಗಿದ್ದ ಬಿಎಂ ಗುರುಸಿದ್ದಯ್ಯನವರು ಕನ್ನಡ ಸಾಹಿತ್ಯದಲ್ಲಿ ಉತ್ತಮ ಹಿಡಿತ ಸಾಧಿಸಿದ್ದರು ಹತ್ತಾರು ಕೃತಿ ಬರೆದಿದ್ದರು. ಜೊತೆಗೆ ಶರಣರ ಪoಕ್ತಿಯಲ್ಲಿ ಜೀವನ ಸಾಗಿಸಿದ್ದ ವಿದ್ವಾನ್ ಆಗಿದ್ದರು.
ಹೀಗಾಗಿ ಕೂಡ್ಲಿಗಿಯಲ್ಲಿ ನಡೆದ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದು ಎಂದು ಸ್ಮರಿಸಿದರು ಅವರು ಸಾಹಿತ್ಯದ ಕೃಷಿಗೆ ಕಾನಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠ ಪ್ರೇರಣೆಯಾಗಿತ್ತು ಎಂದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ, ಎ ವೃಷಭೇಂದಚಾರ್, ಭೀಮಣ್ಣ ಗಜಾಪುರ, ಬಿಎಮ್ ಪ್ರಭುದೇವ ಹೊಸಪೇಟೆ, ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ಎಂ ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ 12 ನೇ. ಶತಮಾನದ ದಯವೇ ಧರ್ಮದ ಮೂಲವಯ್ಯ ಎಂದು ಶರಣರು ಸಾರಿದ್ದಾರೆ.
ಇತ್ತೀಚಿಗೆ ವಾತಾವರಣ ನೋಡುತ್ತಿದ್ದರೆ ಭಯವೇ ಧರ್ಮದ ಮೂಲ ಎನ್ನುವಂತಾಗಿರುವುದು ನೋವಿನ ಸಂಗತಿಯಾಗಿದೆ ಎಂದು ನುಡಿದರು.
ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಿತ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 111 ನೇ. ಜನ್ಮದಿನದ ನಿಮಿತ್ತ ಎಲ್ಲೆಡೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಕೆ.ಎಮ್ ವೀರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾ ಮ ಸಂಗಮೇಶ್ವರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೋಶಾಧ್ಯಕ್ಷರಾದ ಕುಮಾರ ಗೌಡ, ಕದಳಿ ವೇದಿಕೆ ತಾಲೂಕ ಅಧ್ಯಕ್ಷ ತಿಪ್ಪೀರಮ್ಮ ಸಕಲಾಪುರದಹಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಎನ್ ಎಸ್ ತಿಪ್ಪೇಸ್ವಾಮಿ, ವೆಂಕಟೇಶ್ವರ ರಾವ್, ಹುಡೇo ಕೃಷ್ಣಮೂರ್ತಿ, ದಯಾನಂದ ಸಜ್ಜನ, ಕೆ.ಎಸ್ ವೀರೇಶ್ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ ಯುವ ಘಟಕ, ಶರಣನಗೌಡ, ಸಫಾರಿ ರಾಮಕೃಷ್ಣ, ಸುನೀಲ್, ಶ್ಯಾಮ್ ಸುಂದರ ಸಪಾರೇ, ಟಿ ವೀರೇಶ್,ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಎಚ್ ಎಮ್ ಬಿ ಗುರುಮೂರ್ತಿ ಸ್ವಾಗತಿಸಿದರು.
ಸೀತಾರಾಮ ರೆಡ್ಡಿ ವಂದಿಸಿದರು. ಎಸ್.ಪಿ.ಆರ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ನಿರ್ವಹಿಸಿದರು. ಸೋಫಿಯಾ ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
