🚨ಬ್ರೇಕಿಂಗ್ ನ್ಯೂಸ್! ಬ್ರೇಕಿಂಗ್ ನ್ಯೂಸ್! ಬ್ರೇಕಿಂಗ್ ನ್ಯೂಸ್!🚨💥ರೋಟರಿ ಡಿಸ್ಟ್ರಿಕ್ಟ್ 3182, ಕೋಟ ಸಾಲಿಗ್ರಾಮದ ಆರ್.ಟಿ.ಎನ್. ತಿಮ್ಮ ಪೂಜಾರಿ ವಲಯ-2 ರ – ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕ..!💥
ಉಡುಪಿ ಸೆ.03


ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182 ರ 2027-28 ನೇ. ಸಾಲಿನ ಅವಧಿಗೆ ಕೋಟ ಸಾಲಿಗ್ರಾಮ ರೋಟರಿ ಕ್ಲಬ್‌ನ ಸದಸ್ಯರಾದ ಆರ್.ಟಿ.ಎನ್. ತಿಮ್ಮ ಪೂಜಾರಿ ಅವರು ವಲಯ-2 ರ ಅಸಿಸ್ಟೆಂಟ್ ಗವರ್ನರ್ ಆಗಿ ಅಧಿಕೃತವಾಗಿ ನೇಮಕ ಗೊಂಡಿದ್ದಾರೆ.
ಡಿಸ್ಟ್ರಿಕ್ಟ್ ಗವರ್ನರ್ ಪಿ.ಎಚ್.ಎಸ್.ಎಂ. ಆರ್.ಟಿ.ಎನ್. ವಸಂತ್ ಹೊಬಳಿದಾರ್ ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ.
ತಿಮ್ಮ ಪೂಜಾರಿ ಅವರ ನಾಯಕತ್ವ, ರೋಟರಿ ಮೇಲಿನ ಸಮರ್ಪಣಾ ಭಾವ ಹಾಗೂ ಸಮುದಾಯಕ್ಕೆ ಅವರು ಸಲ್ಲಿಸಿರುವ ಮಾದರಿ ಸೇವೆಯನ್ನು ಗುರುತಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ.
ಮುಖ್ಯಾಂಶಗಳು:-
ಪ್ರಮುಖ ಹುದ್ದೆ:-
ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182 ರ ವಲಯ-2 ರ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆ.
ಅವಧಿ:-
ರೋಟರಿ ವರ್ಷ 2027-28.
ಪ್ರಮುಖ ಜವಾಬ್ದಾರಿಗಳು:-
ಜಿಲ್ಲಾ ನಾಯಕತ್ವ ಮತ್ತು ವಲಯದ ನಿಯೋಜಿತ ಕ್ಲಬ್‌ಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವುದು, ಕ್ಲಬ್‌ಗಳ ಸದಸ್ಯತ್ವ ವೃದ್ಧಿ, ವಾರ್ಷಿಕ ಗುರಿಗಳ ಸಾಧನೆ ಹಾಗೂ ಜಿಲ್ಲಾ ಮಟ್ಟದ ತರಬೇತಿ ಮತ್ತು ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದು.
ಅಭಿನಂದನೆಗಳು:-
ನೂತನ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕ ಗೊಂಡಿರುವ ಆರ್.ಟಿ.ಎನ್. ತಿಮ್ಮ ಪೂಜಾರಿ ಅವರಿಗೆ ಗಣ್ಯರು ಹಾಗೂ ರೋಟರಿ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

