ಕೀರ್ತನ ಮೂವಿ ಮೇಕರ್ಸ್ ಅವರಿಂದ ‘ಸಾಕ್ಷಿ‘ – ಕಿರುಚಿತ್ರ ಚಿತ್ರೀಕರಣ ಮುಕ್ತಾಯ.

ಬೆಂಗಳೂರು ಸೆ.07

ಕಲಾ ಪೋಷಕರ ಮಠ ಸುಕ್ಷೇತ್ರ ಸಿದ್ಧನಕೊಳ್ಳದ ಪೂಜ್ಯ ಶ್ರೀ ಡಾ, ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ದೊಂದಿಗೆ ಕೀರ್ತನ ಮೂವಿ ಮೇಕರ್ಸ್ ಅವರಿಂದ ನಿರ್ಮಾಣವಾಗುತ್ತಿರುವ ‘ಸಾಕ್ಷಿ ‘ ಕಿರು ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಸಂಕಲನ ಕಾರ್ಯ ಆರಂಭವಾಗಿದೆ.

ಕೊಲೆ ರಹಸ್ಯ ಭೇದಿಸುವ ರೋಚಕ ಕಥೆಯುಳ್ಳ ಕಿರು ಚಿತ್ರ ಐದು ದಿನಗಳ ಕಾಲ ಬೆಂಗಳೂರಿನ ವಿವಿಧ ಕಡೆ ಚಿತ್ರೀಕರಣ ನಡೆಸಲಾಯಿತು. ಈ ಮೊದಲು ‘ಒಬ್ಬಟ್ಟು’ ಸಸ್ಪೆನ್ಸ್, ಥ್ರಿಲ್ಲರ್ ಹಾಸ್ಯ ಕಥೆಯ ಚಿತ್ರ ನಿರ್ದೇಶಿಸಿ, ನಿರ್ಮಿಸಿ ಬಿಡುಗಡೆ ಮಾಡಿದ್ದೆ.

ಸಧ್ಯದಲ್ಲೇ ನನ್ನ ನಿರ್ದೇಶನದ ಎರಡನೇ ಸಿನೇಮಾ ‘ಹೂಗಾರ’ ಚಲನಚಿತ್ರ ಸೆನ್ಸಾರ್‌ಗೆ ಹೋಗಲು ಅಂತಿಮ ಸಿದ್ಧತೆ ನಡೆಸಿದ್ದೇನೆ. ಮತ್ತು ಈಗಾಗಲೇ ಮೂರನೆಯ ಹೊಸ ಸಸ್ಪೆನ್ಸ್, ಥ್ರಿಲ್ಲರ್ ಹಿನ್ನೆಲೆಯ ಸಿನೇಮಾದ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ. ಕಲಾವಿದರ ಆಯ್ಕೆ ಕೂಡ ನಡೆಸಿದ್ದೇನೆ. ಬಿಡುವಿನ ನಡುವೆ ತಂಡ ಸಕ್ರಿಯವಾಗಿರಲು ಕಿರುಚಿತ್ರ ನಿರ್ಮಿಸೋಣ ಎಂದು ತಂಡದ ಸದಸ್ಯರೆಲ್ಲರೂ ನಿರ್ಧರಿಸಿ ‘ಸಾಕ್ಷಿ’ ನಿರ್ಮಿಸಿದ್ದೇವೆ.

ಮುಂದಿನ ತಿಂಗಳು ಓ.ಟಿ.ಟಿ ಹಾಗೂ ಯೂಟ್ಯೂಬ್ ಗೆ ರಿಲೀಸ್ ಮಾಡಲಾಗುತ್ತದೆ. ಚಿತ್ರ ಪ್ರೇಮಿಗಳು ತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದು ನಿರ್ದೇಶಕ ಲೋಕೇಶ್ ವಿದ್ಯಾಧರ್ ತಿಳಿಸಿದರು.

ಮುಖ್ಯ ಪಾತ್ರದಲ್ಲಿ ಲೋಕೇಶ್ ವಿದ್ಯಾಧರ, ವಿದ್ಯಾಶ್ರೀ, ಹುನಗುಂದದ ಮಹಾಂತೇಶ್ ಹಳ್ಳೂರ, ಸತೀಶ್ ಶೆಟ್ಟಿ ಮುತ್ತುರಾಜ್ ಬುದ್ನಿ, ಜೀವನ ಗೌಡ, ಗೀತಾ ರೋಹಿತ್, ಸುರೇಶ್ ಗ್ಲೋರಿ ಮೊದಲಾದವರು ಅಭಿನಯಿಸಿದ್ದಾರೆ.

ಕ್ಯಾಮೆರಾ ಬೆಟ್ಟೆಗೌಡ ಕಿಲಾರ, ಗೋವರ್ಧನ್ ಮೇಕಪ್, ಶಿವು ಹೇರ್ ಸ್ಟೈಲ್, ಪಲ್ಲವಿ, ಸಂಕಲನ ಶಿವರಾಜ್, ಡಿಐ ಜೀವನ್, ನೃತ್ಯ ರಾಜು ಮಾಸ್ಟರ್, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಗಿ ಪತ್ರಿಕಾ ಸಂಪರ್ಕ, ಕಥೆ-ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನ ಹೊಣೆ ಲೋಕೇಶ್ ವಿದ್ಯಾಧರ ವಹಿಸಿಕೊಂಡಿದ್ದಾರೆ. ನಿರ್ಮಾಣ ಕೀರ್ತನ ಮೂವಿ ಮೇಕರ್ಸ್ ಹಾಗೂ ಚಿತ್ರ ತಂಡದ ಬಳಗ ಹೊತ್ತು ಕೊಂಡಿದೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button