🚨ಬ್ರೇಕಿಂಗ್ ನ್ಯೂಸ್🚨 💥ಮೂಡುಗಿಳಿಯಾರು, ಎನ್.ಎಂ.ಎಂ.ಎಸ್. (NMMS) ಪರೀಕ್ಷೆಯಲ್ಲಿ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ – ವಿದ್ಯಾರ್ಥಿಗಳ ಅದ್ಭುತ ಸಾಧನೆ..!💥
ಉಡುಪಿ ಸೆ.07


ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮೂಡು ಗಿಳಿಯಾರು ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಎನ್.ಎಂ.ಎಂ.ಎಸ್. (National Means-cum-Merit Scholarship) ಪ್ರತಿಭಾ ಶೋಧನೆ ಪರೀಕ್ಷೆಯಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸಿ ಶಾಲೆಯ ಹಾಗೂ ಊರಿನ ಕೀರ್ತಿಯ ಪತಾಕೆ ಹಾರಿಸಿದ್ದಾರೆ.
ಈ ಪ್ರತಿಷ್ಠಿತ ವೇತನ ಸಹಿತ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರತೀಕ್ಷಾ ಹಾಗೂ ಮೊಹಮ್ಮದ್ ಸಫಾನ್ ಆರ್. ಅವರು ತೇರ್ಗಡೆ ಗೊಂಡು ಹೆಮ್ಮೆಯ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಗಮನಾರ್ಹ ಹಾಗೂ ಸ್ಫೂರ್ತಿದಾಯಕ ಸಾಧನೆಗೆ ಶಾಲೆಯ ಶಿಕ್ಷಕ ವೃಂದದವರಾದ ಜೂಲಿಯೆಟ್ ಕ್ರಾಸ್ಟಾ ಟೀಚರ್ ಸೇರಿದಂತೆ ಎಲ್ಲಾ ಗುರುಗಳು, ಪೋಷಕರು ಹಾಗೂ ಊರಿನ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಇಂತಹ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ತೋರುತ್ತಿರುವುದು ಇಲಾಖೆಗೆ ಮತ್ತು ಇತರ ವಿದ್ಯಾರ್ಥಿಗಳಿಗೆ ಮಾದರಿ ಯಾಗಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ
