ಬ್ರೇಕಿಂಗ್ ನ್ಯೂಸ್🚨: ಕೋಟ ಗ್ರಾಮ ಪಂಚಾಯಿತಿಯಲ್ಲಿ ಮಾದರಿ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯಗಳ ಸುರಿಮಳೆ, ಪಿಡಿಓ ಉಮೇಶ್ ಕಾರ್ಯಕ್ಕೆ – ಸಾರ್ವಜನಿಕರಿಂದ ಭಾರಿ ಮೆಚ್ಚುಗೆ..!

ಉಡುಪಿ ಸೆ.11

ಜಿಲ್ಲೆಯಾದ್ಯಂತ ಗಮನ ಸೆಳೆಯುತ್ತಿರುವ ಕೋಟ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ಮುಂದುವರಿದಿದ್ದು, ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸ್ನೇಹಿ ಆಡಳಿತ ಮತ್ತು ಅಭಿವೃದ್ಧಿ ಪರ್ವ ಮೂಡಿ ಬಂದಿದೆ.

ಪ್ರಮುಖ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಗಳ ವಿವರ:-

ರಸ್ತೆ ಮತ್ತು ಸಂಚಾರ ಸುಧಾರಣೆ:-

ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಹುಲ್ಲು ಕಟಿಂಗ್ ಮಾಡುವುದರ ಜೊತೆಗೆ ಸ್ವಚ್ಛತಾ ಕಾರ್ಯಕ್ರಮಗಳನ್ನು ತುರ್ತಾಗಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಮೂಡುಗಿಳಿಯಾರು ವಾರ್ಡ್ ಕಾರ್ಯ:-

ಮೂಡುಗಿಳಿಯಾರು ಗ್ರಾಮ ಪಂಚಾಯಿತಿಯ ಮೂರನೇ ವಾರ್ಡ್‌ನಲ್ಲಿ ಸಕ್ರಿಯವಾಗಿ ಅಭಿವೃದ್ಧಿ ಹಾಗೂ ನಿರ್ವಹಣಾ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.

ಸ್ಥಳೀಯ ಪ್ರತಿನಿಧಿಗಳ ಸಹಕಾರ:-

ಕೋಟ ಗ್ರಾಮ ಪಂಚಾಯತ್ 3 ನೇ. ವಾರ್ಡ್ ಸದಸ್ಯರಾದ ಶೇಖರ್. ಜಿ ಗಿಳಿಯಾರು ಹಾಗೂ ಇತರ ಗ್ರಾಮ ಪಂಚಾಯತ್ ಸದಸ್ಯರ ಸಕ್ರಿಯ ಸಹಕಾರದಿಂದ ಅತ್ಯುತ್ತಮ ಹಾಗೂ ಮಾದರಿ ಕಾರ್ಯ ವೈಖರಿ ಸಾಕಾರ ಗೊಂಡಿದೆ.

ವೈಜ್ಞಾನಿಕ ಕಸ ವಿಲೇವಾರಿ:-

ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳು ಹಾಗೂ ಎಲ್ಲಾ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ಅತ್ಯುತ್ತಮ ರೀತಿಯಲ್ಲಿ ಕಸ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡಲಾಗಿದೆ.

ಪಿ.ಡಿ.ಓ ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿ:-

ಕೋಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ್ ಅವರು ಸಿಬ್ಬಂದಿಗಳೊಂದಿಗೆ ಉತ್ತಮ ಸಹಬಾಳ್ವೆ ಹಾಗೂ ಸಮನ್ವಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಸ್ವಚ್ಛತಾ ಕಾರ್ಯಗಳ ಜೊತೆಗೆ ಕಚೇರಿಯ ಕೆಲಸ ಕಾರ್ಯಗಳಿಗೂ ಬರುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ.

ಕಡತಗಳ ವಿಲೇವಾರಿ:-

ಕಚೇರಿಯ ಬಾಕಿ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕೂಡಲೇ ಅನುಮೋದನೆ ಹಾಗೂ ಇತ್ಯರ್ಥ ಪಡಿಸುವಲ್ಲಿ ಪಂಚಾಯತ್ ಆಡಳಿತ ಸಂಪೂರ್ಣ ಯಶಸ್ಸು ಕಂಡಿದೆ.

ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ:-

ಪಿ.ಡಿ.ಓ ಉಮೇಶ್ ಹಾಗೂ ಪಂಚಾಯತ್ ಸಿಬ್ಬಂದಿಗಳ ಜನಪರ ಸೇವಾ ಮನೋಭಾವಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ಹಾಗೂ ಅಭಿನಂದನೆಗಳು ವ್ಯಕ್ತವಾಗಿವೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button