ಸಮಾಜ ಪ್ರಗತಿಯಲ್ಲಿ ಪತ್ರಿಕೆಗಳ – ಪಾತ್ರ ಅಪಾರ.

ಹುಬ್ಬಳ್ಳಿ ಸೆ.09

ಪತ್ರಿಕೆಗಳು ಸಮಾಜದ ಪ್ರಗತಿಗೆ ಪೂರಕ ಕಾರ್ಯ ಮಾಡುತ್ತಿವೆ. ಪತ್ರಿಕೆಗಳು ಸಮಾಜದ ಮೇಲೆ ಬೀರುವ ಪರಿಣಾಮ ಹಾಗೂ ಸಾಮಾಜಿಕ ಜಾಲ ತಾಣಗಳಿಂದ ಆಗುವ ನಕಾರಾತ್ಮಕ ಅಂಶಗಳಿಗೆ ಕಡಿವಾಣ ಹಾಕ ಬೇಕಾಗಿದೆ ಎಂದು ಸಂಸದ ಹಾಗೂ ಮಾಜಿ ಸಿ.ಎಂ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯ ಕಾಡ ಸಿದ್ದೇಶ್ವರ ಕಾಲೇಜು, ಎಚ್.ಎಸ್ ಕೊತಂಬ್ರಿ ವಿಜ್ಞಾನ ಮಹಾ ವಿದ್ಯಾಲಯದ ಪತ್ರಿಕೋದ್ಯಮದ ವಿಭಾಗ, ಡಾ, ಸಂಗಮೇಶ್ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಕನ್ನಡ ಧ್ವನಿ ಟ್ರಸ್ಟ್ ಆಶ್ರಯದಲ್ಲಿ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರ “ಮಾಧ್ಯಮ ಮತ್ತು ಕಾನೂನು” ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಪತ್ರಿಕೆಗಳು ಸಮಾಜದ ಬೆಳವಣಿಗೆಗೆ ಪೂರಕ ವಾಗಬಲ್ಲ ವರದಿ, ವಿಮರ್ಶೆಗಳನ್ನು ಪ್ರಕಟಿಸಿ ಜವಾಬ್ದಾರಿಯುತವಾಗಿ ನಡೆದು ಕೊಳ್ಳುತ್ತವೆ.

ಆದರೆ, ಸಾಮಾಜಿಕ ಜಾಲ ತಾಣಗಳು ಮಾತ್ರ ಲೈಕ್, ಕಾಮೆಂಟ್ಸ್‌ಗಾಗಿ ಭ್ರಮೆ ಹುಟ್ಟಿಸುತ್ತವೆ.ಮಾಧ್ಯಮ ಮತ್ತು ಕಾನೂನು ಪುಸ್ತಕವು ಪತ್ರಿಕೋದ್ಯಮ ವಿದ್ಯಾರ್ಥಿಗಳು ಸೇರಿದಂತೆ ಪತ್ರಕರ್ತರಿಗೂ ದಾರಿ ದೀಪವಾಗಲಿದೆ.

ಮಾಧ್ಯಮ ಶಾಸನ ಮತ್ತು ಆಡಳಿತ, ಸಂಸತ್ ಮತ್ತು ಶಾಸಕಾಂಗದ ಹಕ್ಕು ಬಾಧ್ಯತೆಗಳು ಹಾಗೂ ಮಾಧ್ಯಮ ಸೇರಿದಂತೆ ಪ್ರಸಕ್ತ ಪತ್ರಿಕೋದ್ಯಮಕ್ಕೆ ಬೇಕಾಗಿರುವ 24 ಅಂಶಗಳನ್ನು ಪುಸ್ತಕ ಒಳ ಗೊಂಡಿದೆ ಎಂದು ಹೇಳಿದರು.

ಯುವ ಜನತೆಯಲ್ಲಿ ಓದುವ ಸಂಸ್ಕೃತಿ ಕಡಿಮೆ ಯಾಗಿದೆ. ಈ ಪುಸ್ತಕವು ಪತ್ರಿಕೋದ್ಯಮದ ಶಾಸನ ಕಾನೂನುಗಳ ಕುರಿತು ತಿಳಿಯಲು ಸಹಕಾರಿ ಯಾಗಲಿದೆ. ಉದಾಹರಣೆ ಸಮೇತ ವಿವರಿಸಲಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾಗಿ ನಡೆಯಲು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾ ರಂಗವೂ ಮುಖ್ಯವಾಗಿದೆ. ಪತ್ರಕರ್ತರು ಪಾಲಿಸ ಬೇಕಾದ ಕಾನೂನು ಯಾವುವು ಎಂಬುದು ಈ ಪುಸ್ತಕದಲ್ಲಿದೆ ಎಂದರು.

ಅತಿಥಿಯಾಗಿ ಕೆಎಲ್‌ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಸಮಾಜಕ್ಕೆ ಉತ್ತಮ ಕೃತಿಗಳನ್ನು ನೀಡುತ್ತಿರುವ ಹಬ್ಬು ಅವರ ಕಾರ್ಯವನ್ನು ಮೆಚ್ಚಿದರು. ಪತ್ರಕರ್ತರಾದ ಬಂಡು ಕುಲಕರ್ಣಿ, ಶಣ್ಮುಖ ಕೋಳಿವಾಡ, ಮಲ್ಲಿಕಾರ್ಜುನ ಸಿದ್ದನ್ನವರ ವಿಠಲ ದಾಸ ಕಾಮತ್, ಪ್ರಕಾಶ್ ಶೇಟ್, ರಾಹುಲ್ ಬೆಳಗಲಿ ಪಾಲ್ಗೊಂಡು ಮಾತನಾಡಿದರು.

ಲೇಖಕ ಅರುಣ್ ಕುಮಾರ್ ಹಬ್ಬು ಅಭಿಪ್ರಾಯ ಹಂಚಿ ಕೊಂಡರು. ಹಿರಿಯ ಪತ್ರಕರ್ತ ಕನ್ನಡ ಧ್ವನಿ ಟ್ರಸ್ಟ್ ನ ಗಣಪತಿ ಗಂಗೊಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ಡಾ, ವೀರೇಶ ಹಂಡಿಗಿ ಪುಸ್ತಕ ಪರಿಚಯಿಸಿದರು. ವಿದುಷಿ ರೇಖಾ ಹೆಗಡೆ, ಮಲ್ಲಿಕಾರ್ಜುನ ಸಾಹುಕಾರ್, ರವೀಂದ್ರ ರಾಮದುರ್ಗಕರ್, ಗುರುನಾಥ ಗಬ್ಬುರ್ ಸೇರಿದಂತೆ ಗಣ್ಯರು ಇದ್ದರು.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button