ಸೆನ್ಸಾರ್ ಗೆ ಹೊರಟ ‘‘ಮುತ್ತುರತ್ನ’ – ಚಲನ ಚಿತ್ರ ಮುಕ್ತಾಯವಾಗಿದೆ.

ಬೆಂಗಳೂರು ಸೆ.10

ಜೈ ಹನುಮಾನ್ ಪ್ರೊಡಕ್ಷನ್ ಅವರ ‘ಮುತ್ತುರತ್ನ’ ಎಂಬ ಕನ್ನಡ ಚಲನ ಚಿತ್ರ ಉಪಶೀರ್ಷಿಕೆ ‘ಒಂದು ಪ್ರೇಮ ಗ್ರಂಥ’ ಎಂಬ ಹೆಸರನ್ನು ಹೊಂದಿರುವ ಚಲನ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಕ್ತಾಯವಾಗಿ ಇದೀಗ ಸೆನ್ಸಾರಗೆ ಹೊರಟಿದೆ. ಚಿತ್ರದುರ್ಗ ಹಾಗೂ ಹಿರಿಯೂರು ಸುತ್ತಮುತ್ತಲು 40 ದಿನಗಳ ಕಾಚಿತ್ರೀಕರಣವನ್ನು ನಡೆಸಲಾಗಿದೆ.

ನಾಯಕ ನಟ ಅಶ್ವ ನಾಯಕ ನಟಿ ಸಹನಾ ಪ್ರಕಾಶ್, ತಿಪ್ಪೇಶ್ ಮುದ್ದಾಪುರ, ದೇವು ,ಮಲ್ಲಿಕಾ, ರಕ್ಷಿತಾ, ಗೋವಿಂದೇಗೌಡ, ಸಂಜು ಬಸಯ್ಯ, ಗಿರೀಶ್ ಜೊತೆ ಅಪೂರ್ವ ಪವನ್ ಮಜಾ ಟಾಕೀಸ್, ಹುಲುಗಪ್ಪ ಟಿ, ಕೇಶವಮೂರ್ತಿ ಜಿಎಚ್ ಬಿಜಿಕೆರೆ ಮೊದಲಾದ ಕಲಾವಿದರಿದ್ದಾರೆ.

ತಾಂತ್ರಿಕ ವರ್ಗ ಛಾಯಾಗ್ರಹಣ ಗೋಪಿನಾಥ ಎಂ, ಸಂಕಲನ ಶಿವರಾಜ್ ಮೇಹು, ಸಾಹಸ ಚಂದ್ರು ಬಂಡೆ, ನೃತ್ಯ ಬಾಲು ರೆಕ್ಸ್ ರಾಜು, ಸಾಹಿತ್ಯ ಎಸ್ ವಿ ಶಿವಕುಮಾರ್, ಡಿವಿಜಿ, ತಿಪ್ಪೇಶ್ ಹಾಲವರ್ತಿ ರಚಿಸಿದ್ದು.

ಸಂಗೀತ ಪ್ರಸನ್ನ ಭೋಜಶೆಟ್ಟರ್, ಬಾಳು ಬೆಳಗುಂದಿ, ಐಶ್ವರ್ಯ ರಂಗರಾಜನ್, ಅನಿರುದ್ಧ ಶಾಸ್ತ್ರಿ, ಲಹರಿ ಮಹೇಶ್, ರವೀಂದ್ರ ಸೊರವಾವಿ, ಅನುರಾಮ್, ಪ್ರಸನ್ನ ಭೋಜ ಶೆಟ್ಟರ್ ಮಧುರವಾಗಿ ಹಾಡಿದ್ದಾರೆ.

ಉತ್ತರ ಕರ್ನಾಟಕದ ನಾ ಡ್ರೈವರ್ ಪೂಜಾ ಡಿಕೆಡಿ ಒಂದು ಹಾಡಿನಲ್ಲಿ ನೃತ್ಯ ಮಾಡಿದ್ದು ಉತ್ತರ ಕರ್ನಾಟಕದ ಮಂದಿಗೆ ಕಿಕ್ ಕೊಡುವುದರಲ್ಲಿ ಎರಡು ಮಾತಿಲ್ಲ. ಪ್ರಸಾಧನ ಚಂದ್ರು ತಿರುಪತಿ, ಎಂ.ಜಿ.ಕಲ್ಲೇಶ್, ಡಾ, ಪ್ರಭು ಗಂಜಿಹಾಳ ಡಾ, ವೀರೇಶ್ ಹಂಡಿಗಿ ಅವರ ಪತ್ರಿಕಾ ಸಂಪರ್ಕ, ಸಹ ನಿರ್ದೇಶನ ಮಹೇಶ್ ಜಗತಾಪ್, ಸತೀಶ್ ಚೆಕ್ಕಂದವಾಡಿ, ನಿರ್ದೇಶನ ತಂಡ ರಂಜಿತ್, ಕುಶಾಲ್, ಅನೂಪ್, ಸ್ಟಿಲ್ ರಘು, ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಜೊತೆಗೆ ಸಾಹಿತ್ಯ ರಚಿಸಿ ನಿರ್ದೇಶನ ಹೊಣೆ ತಿಪ್ಪೇಶ್ ಹಾಲುವರ್ತಿ ಹೊತ್ತಿದ್ದಾರೆ.

ಹುಲುಗಪ್ಪ ಟಿ, ರುದ್ರಪ್ಪ ಪಿಎಚ್ ಬಂಡವಾಳ ಹಾಕಿದ್ದು ಇವರ ಜೊತೆಗೆ ಕೇಶವಮೂರ್ತಿ ಜಿ.ಎಚ್ ಬಿಜಿಕೆರೆ ಯಶೋದ ಬಾಯಿ ಸಹ ನಿರ್ಮಾಪಕ ರಾಗಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು ಸೆನ್ಸಾರದಿಂದ ಬಂದ ತಕ್ಷಣ ಚಿತ್ರ ಬಿಡುಗಡೆ ಮಾಡುವದಾಗಿ ಚಿತ್ರತಂಡ ತಿಳಿಸಿದೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button