ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿಸಿ ಟ್ರಸ್ಟ್ (ರಿ) ವತಿಯಿಂದ – ಜಿಲ್ಲಾ ಜನಜಾಗೃತಿ ವೇದಿಕೆಯ ಮಹಾಸಭೆ ಜರುಗಿತು.
ಬಾಗಲಕೋಟ ಸೆ.10

ದಿನಾಂಕ:-09/09/2026 ರಂದು ಬಾಗಲಕೋಟೆಯಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬಿಸಿ ಟ್ರಸ್ಟ್ (ರಿ) ಬಾಗಲಕೋಟೆ ಜಿಲ್ಲೆಯ ಇದರ ಎರಡನೇ ತ್ರೈಮಾಸಿಕದ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಭೆಯಲ್ಲಿ ಜನಜಾಗೃತಿ ವೇದಿಕೆಯ ಮೂಲಕ ಮಾಡ ಬೇಕಾದ ಕಾರ್ಯಕ್ರಮಗಳಾದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮಾದಕ ವಸ್ತು ವಿರುದ್ಧ ದಿನಾಚರಣೆ ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಮದ್ಯವರ್ಜನ ಶಿಬಿರಗಳು ಇವುಗಳ ಅನುಷ್ಠಾನ ಮತ್ತು ಫಲಿತಾಂಶಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ವೇದಿಕೆಗೆ ನೂತನ ಅಧ್ಯಕ್ಷರಾಗಿ ಮುಧೋಳ ತಾಲೂಕಿನ ಶ್ರೀಯುತ ಶ್ರೀಶೈಲ ಗೌಡ ಲಕ್ಷ್ಮಣಗೌಡ ಪಾಟೀಲ್ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮತ್ತು ರಾಜಶ್ರೀ ಅಜಿತ್ ಕುಮಾರ್ ಒಂಟಕುದುರೆ ಇವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಕಾಂತ್ ಸಂದಿಮನಿ ಉಪಾಧ್ಯಕ್ಷರಾದ ವೆಂಕಪ್ಪ ಮುಳ್ಳೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಚಂದ್ರಶೇಖರ್.ಜೆ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ನಿರ್ದೇಶಕರು ಚೆನ್ನಕೇಶವ, ಆರು ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಜಿಲ್ಲಾ ಜನ ಜಾಗೃತಿ ವೇದಿಕೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
