CISF ಮತ್ತು DFI ಒಪ್ಪಂದದ – (MoU) ಸಾರಾಂಶ.

ರಾಯಚೂರು ಸೆ.09

ದೇಶದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಮೂಲ ಸೌಕರ್ಯಗಳಾದ ವಿಮಾನ ನಿಲ್ದಾಣಗಳು, ಪರಮಾಣು ವಿದ್ಯುತ್ ಕೇಂದ್ರಗಳು, ಬಾಹ್ಯಾಕಾಶ ಕೇಂದ್ರಗಳು ಮತ್ತು ತೈಲ ಸಂಸ್ಕರಣಾಗಾರಗಳು ಸೇರಿದಂತೆ 370 ಕ್ಕೂ ಹೆಚ್ಚು ಘಟಕಗಳಲ್ಲಿ ಎದುರಾಗುವ ಡ್ರೋನ್ ಬೆದರಿಕೆಗಳನ್ನು ತಡೆಯಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF) ಹಾಗೂ ಡ್ರೋನ್ ಫೆಡರೇಶನ್ ಆಫ್ ಇಂಡಿಯಾ (DFI) ನಡುವೆ ಸಾಮರಸ್ಯ ಒಪ್ಪಂದಕ್ಕೆ (MoU) ಸಹಿ ಮಾಡಲಾಗಿದೆ.

ಈ ಒಪ್ಪಂದಕ್ಕೆ ಸಂಬಂಧಿಸಿದಂತೆ “CISF Unit, Raichur Thermal Power Station (RTPS), Shaktinagar” ನಲ್ಲಿ ವಿಶೇಷ ಸಭೆಯನ್ನು (Meeting) ಆಯೋಜಿಸಲಾಗಿತ್ತು.

ಮುಖ್ಯ ಅಂಶಗಳು:-

Centre of Excellence:-

ರಾಜಸ್ಥಾನದ ಬೆಹ್ರೋರ್‌ನಲ್ಲಿರುವ CISF ನವ ನೇಮಕಾತಿ ತರಬೇತಿ ಕೇಂದ್ರವನ್ನು (RTC Behror) ಡ್ರೋನ್ ಮತ್ತು ಕೌಂಟರ್-ಡ್ರೋನ್ ವ್ಯವಸ್ಥೆಗಳಲ್ಲಿ ಅತ್ಯುತ್ತಮ ಕೇಂದ್ರವಾಗಿ (Centre of Excellence) ಅಭಿವೃದ್ಧಿ ಪಡಿಸಲಾಗುವುದು.

ತರಬೇತಿ ಮತ್ತು ಸಾಮರ್ಥ್ಯ:-

ಈಗಾಗಲೇ 3,000 ಕ್ಕೂ ಹೆಚ್ಚು CISF ಸಿಬ್ಬಂದಿಗೆ ಡ್ರೋನ್ ತಂತ್ರಜ್ಞಾನದಲ್ಲಿ ತರಬೇತಿ ನೀಡಲಾಗಿದೆ. ಸುಮಾರು 80 ಘಟಕಗಳಲ್ಲಿ ನಿರಂತರ ಕಾವಲು, ಬೆದರಿಕೆ ಪತ್ತೆ ಮತ್ತು ತರಬೇತಿಗಾಗಿ ಡ್ರೋನ್‌ಗಳನ್ನು ಸಕ್ರಿಯವಾಗಿ ಬಳಸಲಾಗುತ್ತಿದೆ.

ಮುಖ್ಯ ಸಹಕಾರ ಕ್ಷೇತ್ರಗಳು:-

ಕೌಂಟರ್-ಡ್ರೋನ್ ನಿಯಮಗಳು:-

ಡ್ರೋನ್ ನಿಯೋಜನೆ ಮತ್ತು ಅಪಾಯಕಾರಿ ಡ್ರೋನ್‌ ಗಳನ್ನು ತಡೆಯಲು ಅಗತ್ಯವಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳು (SOPs) ಹಾಗೂ ಕಾರ್ಯತಂತ್ರದ ಚೌಕಟ್ಟನ್ನು ಸಿದ್ಧ ಪಡಿಸುವುದು.

ಫೋರೆನ್ಸಿಕ್ಸ್ ಮತ್ತು ವಿಶ್ಲೇಷಣೆ:-

ಅನಧಿಕೃತ ಅಥವಾ ಅಪಾಯಕಾರಿ ಡ್ರೋನ್ ಚಟುವಟಿಕೆಗಳನ್ನು ವಿಶ್ಲೇಷಿಸಲು ಮತ್ತು ತನಿಖೆ ಮಾಡಲು ಸ್ವದೇಶಿ ಫೋರೆನ್ಸಿಕ್ ಉಪಕರಣಗಳನ್ನು ಅಭಿವೃದ್ಧಿ ಪಡಿಸುವುದು.

ಜಂಟಿ ಮಾಕ್ ಡ್ರಿಲ್ಸ್ (Red-Teaming):-

ಡ್ರೋನ್ ಬೆದರಿಕೆಗಳು, ಪ್ರತಿಕ್ರಿಯೆಗಳು ಮತ್ತು ಭದ್ರತಾ ಸಿದ್ಧತೆಯನ್ನು ಪ್ರತ್ಯಕ್ಷವಾಗಿ ಪರೀಕ್ಷಿಸಲು ಜಂಟಿ ಮಾಕ್ ಡ್ರಿಲ್‌ಗಳನ್ನು ಆಯೋಜಿಸುವುದು.

ಹ್ಯಾಕಥಾನ್‌ಗಳು ಮತ್ತು ತರಬೇತಿ:-

ವಿದ್ಯಾರ್ಥಿಗಳಿಗಾಗಿ ಹ್ಯಾಕಥಾನ್‌ಗಳು, ಸವಾಲುಗಳು ಮತ್ತು ಕಾರ್ಯಾಚರಣೆಯ ನಿಯಮಗಳ ಆಧಾರಿತ ಹೊಸ ತರಬೇತಿ ಮಾಡ್ಯೂಲ್‌ಗಳನ್ನು ರೂಪಿಸುವುದು.ಅಧಿಕಾರಿಗಳ ಹೇಳಿಕೆಗಳು:-

ಶ್ರೀ ಪ್ರವೀಣ್ ರಂಜನ್ (DG, CISF):-

ಗೃಹ ಸಚಿವಾಲಯದ ಮಾರ್ಗದರ್ಶನದಂತೆ ಬೆಹ್ರೋರ್ RTC ಯನ್ನು ಡ್ರೋನ್ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಿ ಬೆಳೆಸಲು ಮತ್ತು ಪ್ರಸ್ತುತ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಗುರುತಿಸಿ ಸರಿ ಪಡಿಸಲು ಈ ಸಹಕಾರ ಸಹಕಾರಿ ಯಾಗಲಿದೆ ಎಂದು ತಿಳಿಸಿದರು.

ಶ್ರೀ ಸ್ಮಿತ್ ಶಾ (President, DFI):-

ಭಾರತೀಯ ಡ್ರೋನ್ ಉದ್ಯಮವು ಸ್ವದೇಶಿ ತಂತ್ರಜ್ಞಾನದ ಆವಿಷ್ಕಾರಗಳ ಮೂಲಕ ದೇಶದ ನಿರ್ಣಾಯಕ ಮೂಲ ಸೌಕರ್ಯಗಳನ್ನು ರಕ್ಷಿಸಲು ಮತ್ತು ‘ಆತ್ಮ ನಿರ್ಭರ’ ಭದ್ರತಾ ವ್ಯವಸ್ಥೆಯನ್ನು ಬಲ ಪಡಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button