ಬಣ್ಣದ ಕನಸುಗಳು ಚಿತ್ರಕ್ಕೆ – ಡಬ್ಬಿಂಗ್‌ ಮುಕ್ತಾಯ.

ಬೆಂಗಳೂರು ಸೆ.09

ಮಹದೇಶ್ವರ ಎಂಟರ್‌ಪ್ರೈಸಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಬಣ್ಣದ ಕನಸುಗಳು ಚಿತ್ರಕ್ಕೆ ಓಂಪ್ರಕಾಶ್‌ ನಾಯಕ್‌ ನಿರ್ದೇಶಕರಾಗುವುದರ ಜೊತೆಗೆ ಇನ್ನೂ ಹಲವು ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.

ಈ ಚಿತ್ರದ ನಾಲ್ವರು ನಾಯಕರಲ್ಲಿ ಒಬ್ಬರಾಗಿರುವ ಓಂಪ್ರಕಾಶ್‌ ನಾಯಕ್‌ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಹಾಡುಗಳನ್ನು ಬರೆಯುವುದರ ಜೊತೆಗೆ ಸಂಗೀತವನ್ನೂ ನೀಡಿ ಪ್ರಥಮ ಬಾರಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿ ಕೊಂಡಿದ್ದಾರೆ. ಚಿತ್ರದಲ್ಲಿರುವ ಆರು ಹಾಡುಗಳು ಕೇಳುಗರನ್ನು ಸೆಳೆಯುವಂತಿರುವುದು ವಿಶೇಷ.

ಈ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಹೊತ್ತು ಕೊಂಡಿರುವ ಓಂಪ್ರಕಾಶ್‌ ನಾಯಕ್‌ ಚಿತ್ರದ ನಿರ್ಮಾಪಕರೂ ಹೌದು. ಚಿತ್ರವು ಟಾಕಿ ಪೊಷನ್‌ ಮತ್ತು ಹಾಡುಗಳ ಚಿತ್ರೀಕರಣ, ಸಂಕಲನ ಹಾಗೂ ಡಬ್ಬಿಂಗ್‌ ಮುಗಿಸಿದೆ. ಚಿತ್ರದ ರಿರೆಕಾರ್ಡಿಂಗ್‌ ಬಾಕಿಯಿದ್ದು ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್‌ ಮಂಡಳಿಗೆ ಕಳುಹಿಸಲಾಗುವುದು ಎಂದು ನಿರ್ದೇಶಕ ಓಂಪ್ರಕಾಶ್‌ ನಾಯಕ್‌ ತಿಳಿಸಿದ್ದಾರೆ.

ಚಿತ್ರದಲ್ಲಿ ಗ್ಯಾಂಗ್‌ ಗ್ಯಾಂಗ್‌ ನಮ್ದೊಂದು ಪೋಲಿ ಗ್ಯಾಂಕ್‌, ದುಡ್ಡು ದುಡ್ಡು ಇಲ್ಲಿ ಎಲ್ಲಾ ದುಡ್ಡು ಎನ್ನುವ ಎರಡು ಫ್ರೆಂಡ್‌ಶಿಪ್‌ ಹಾಡುಗಳಿವೆ. ಎರಡು ಡ್ಯೂಯೆಟ್‌ ಹಾಡುಗಳಿದ್ದು, ಒಂದು ಪ್ಯಾಥಾಸ್‌ ಸಾಂಗ್‌ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಛಾಯಾಗ್ರಹಣ ರವಿ, ಮೋಹಿತ್‌ ಸಹನಿರ್ದೇಶನ ಮೋಹಿತ್‌, ಮೇಕಪ್‌ ರುದ್ರೇಶ್‌, ಪತ್ರಿಕಾ ಸಂಪರ್ಕ – ವಿ.ಎಂ.ಎಸ್.ಗೋಪಿ ಮಾಡಿದ್ದಾರೆ.

ತಾರಾಂಗಣದಲ್ಲಿ ನಾಯಕರಾಗಿ ಓಂಪ್ರಕಾಶ್‌ ನಾಯಕ್‌, ಅಫ್ಜಲ್‌ ಸೂಪರ್‌ಸ್ಟಾರ್‌, ಗಣೇಶ ಹಾಗೂ ಭಾಸ್ಕರ್‌ ಜಿ ಇದ್ದಾರೆ. ಮಂಗಳ ನಾಯಕಿಯಾಗಿದ್ದಾರೆ. ಉಳಿದ ತಾರಾಂಗಣದಲ್ಲಿ ರಂಗ ಭೂಮಿಯ ರಾಜಣ್ಣ, ವೆಂಕಟೇಶ್‌, ರಾಮ್‌ಜಿ, ಚಂದ್ರಕಾಂತ್‌, ಮುತ್ತುರಾಜ್‌, ಅಭಿಸಾರಿಕ, ಲಲಿತಾ, ಮತ್ತು ಸಹ ಕಲಾವಿದರು ನಟಿಸಿದ್ದಾರೆ.

– ವಿ.ಎಂ.ಎಸ್.ಗೋಪಿ✍️

ಬೆಂಗಳೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button