ಶಿಕ್ಷಕ ಸಾಹಿತಿ ಮುತ್ತು ಯ. ವಡ್ಡರ ಅವರ – “ಮೌಲ್ಯದ ಮುತ್ತು” ಕೃತಿ ಬಿಡುಗಡೆ.

ಹಿರೇಮಾಗಿ ಸೆ.13

ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಮಳಗಾವಿಯ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಅವರು ರಚಿಸಿರುವ “ಮೌಲ್ಯದ ಮುತ್ತು” ಎಂಬ ನ್ಯಾನೋ ಕಥಾ ಸಂಕಲನವು ಇದೇ ದಿನಾಂಕ 13-9-2026 ರಂದು ರವಿವಾರ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಲಕಲ್ಲನಲ್ಲಿ ಪರಮ ಪೂಜ್ಯ ಶ್ರೀ ಡಾ, ಗುರು ಮಹಾಂತ ಮಹಾ ಸ್ವಾಮೀಜಿಗಳು ಬಿಡುಗಡೆ ಗೊಳಿಸಿದರು.

ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ 100 ಕ್ಕೂ ಹೆಚ್ಚು ನ್ಯಾನೋ ಕಥೆಗಳನ್ನು ಈ ಕೃತಿ ಒಳಗೊಂಡಿದೆ. ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ಮತ್ತು ಪೋಷಕರಿಗೆ ಮೌಲ್ಯ ಶಿಕ್ಷಣದ ಅಗತ್ಯವನ್ನು ಮನಗಂಡು ಈ ಕೃತಿಯನ್ನು ರಚಿಸಲಾಗಿದೆ.

ಈ ಕೃತಿಗೆ ಮುಳಗುಂದದ “ಶ್ರೀಮತಿ ಸಾವಿತ್ರಿ ಎಫ್. ಬಾತಾಖಾನಿ, ಮುಳಗುಂದ” ಅವರು ಮುನ್ನುಡಿ ಬರೆದಿದ್ದು, ಗಾಯಕರಾದ “ಶ್ರೀ ಮೆಹಬೂಬ್ ಸಾಬ್, ಧಾರವಾಡ” ಅವರು ಬೆನ್ನುಡಿ ಬರೆದಿದ್ದಾರೆ. ಯುವ ಕವಯತ್ರಿ “ಕು. ಜ್ಯೋತಿ ಆನಂದ ಚಂದುಕರ, ಬಾಗಲಕೋಟೆ” ಅವರು ಆಶಯ ನುಡಿ ಬರೆದಿದ್ದು, ಕರುನಾಡ ಕಲ್ಪವೃಕ್ಷ ಪ್ರಕಾಶನ ಚಿತ್ರದುರ್ಗದ “ಶ್ರೀ ಕನಕ ಪ್ರೀತೀಶ್” ಅವರು ಪ್ರಕಾಶಕರ ನುಡಿ ಬರೆದಿದ್ದಾರೆ.

ಕೃತಿಯ ಲೇಖಕರಾದ ಶ್ರೀ ಮುತ್ತು ಯ. ವಡ್ಡರ ಅವರು ಹಲವಾರು ಕಥೆ, ಕವನ, ಲೇಖನಗಳನ್ನು ರಚಿಸಿದ್ದು, ಜೊತೆಗೆ ಈ ಮೊದಲು ಅತಿ ಸರಳ ಗಣಿತ, ಎಲೆಮರೆ ಕಾಯಿಗಳು, ಸನ್ಮಾರ್ಗದ ದುಂಬಿ, ಬದಲಾಗು ನೀ ಬೆಳಕಾಗು ನೀ ಕೃತಿಗಳನ್ನು ಬರೆದು ಓದುಗರ ಮೆಚ್ಚುಗೆ ಗಳಿಸಿದ್ದಾರೆ. ಇದು ಅವರ 5 ನೇ. ಕೃತಿಯಾಗಿದೆ. ಇವರು ಮಕ್ಕಳ ಸಾಹಿತ್ಯದಲ್ಲಿ ಮತ್ತು ಸ್ಪೂರ್ತಿದಾಯಕ ಕಥೆ ಕವನ ಲೇಖನ ಬರೆಯುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಡಾ, ಬಸವಾನಂದ ಮಹಾ ಸ್ವಾಮೀಜಿಗಳು ಧಾರವಾಡ, ಸಾಹಿತಿ ಶಿಕ್ಷಕರಾದ ಶ್ರೀ ಹೆಚ್ ಎಸ್ ಗೌಡರ, ಶ್ರೀ ಮಹದೇವಪ್ಪ ಬಂಗಾರಿ, ಉಪನ್ಯಾಸಕರು ಹಾಗೂ ಶ್ರೀ ಮುತ್ತು ಯ. ವಡ್ಡರ, ಶ್ರೀಮತಿ ಗಂಗಾ ಮುತ್ತು ವಡ್ಡರ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button