ಬರ ಪೀಡಿತ ಹೋರಾಟಕ್ಕೆ ನೈತಿಕ ಬೆಂಬಲ – ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ.
ಮುದ್ದೇಬಿಹಾಳ ಸೆ.13

ಮತ ಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಹಾಗೂ ಮಾಜಿ ಶಾಸಕ ಎ,ಎಸ್, ಪಾಟೀಲ್ ನಡಹಳ್ಳಿ ನೇತೃತ್ವದಲ್ಲಿ ಶನಿವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿ ಯಾಗಿದೆ.
ಬರ ಪೀಡಿತ ತಾಲೂಕ ಘೋಷಣೆಗೆ ಆಗ್ರಹಿಸಿ ನಿರ್ಮಿಸುತ್ತಿದ್ದ ಹೋರಾಟದ ಭಾಗವಾಗಿ 6 ನೇ. ದಿನದ ಪ್ರತಿಭಟನೆಯನ್ನು ಮುದ್ದೇಬಿಹಾಳ ಬಂದ ಕರೆ ನೀಡುವ ಮೂಲಕ ಮುಂದುವರಿಸಲಾಗಿತ್ತು,
ಬಂದ್ ಗೆ ವ್ಯಾಪಾರಸ್ಥರು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುದ್ದೇಬಿಹಾ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬೆಳಿಗ್ಗೆ ಆರು ಗಂಟೆಯಿಂದಲೇ ಬಂದ್ ಮಾಡಲಾಗಿತ್ತು, ಜನ ಸಂಚಾರ ಬೇಕೋ ಎಂದಿತು, ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಸ್ಥಗಿತ ಗೊಳಿಸಲಾಗಿತ್ತು,
ಬಂದ್ ಸಮಯದಲ್ಲಿ ಊರ ಹೊರಗಡೆ ಬಸ್ಸುಗಳು ಜನರನ್ನು ಹತ್ತಿರದ ತಾಲೂಕು ಕೇಂದ್ರಗಳನ್ನು ಸಂಪರ್ಕಿಸಲು ಒದಗಿಸುತ್ತಿದ್ದ ಬಸ್ಸುಗಳು ಕಂಡು ಬರಲಿಲ್ಲ, ದೂರದ ಊರುಗಳಿಗೆ ಹೋಗ ಬೇಕಿದ್ದ ಪ್ರಯಾಣಿಕರು ಆಟೋಗಳನ್ನು ಆಶ್ರಯಿಸಿದರು.
ಮುದ್ದೇಬಿಹಾಳ ಪಟ್ಟಣದ ಮಾಂಸ, ಮಧ್ಯ ಮಾರುಕಟ್ಟೆ, ಸರಾಫ ಬಜಾರ್, ಎಪಿಎಂಸಿ, ಕಿರಾಣಿ, ಅಡತ ಮರ್ಚೆಂಟ್, ತರಕಾರಿ ಹಣ್ಣು ಸೇರಿದಂತೆ ಎಲ್ಲವನ್ನು ಬಂದ್ ಮಾಡಲಾಗಿತ್ತು.
ಅನ್ನದಾತನ ಕೂಗಿಗೆ ಜನರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಸರ್ಕಾರದ ಮೇಲೆ ಒತ್ತಡ ಏರಿದ್ದು ಕಂಡು ಬಂದಿತ್ತು, ಇನ್ನುಳಿದಂತೆ ಗರ್ಭಿಣಿಯರು, ಪ್ರಯಾಣಿಕರು, ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವ ಕಾರ್ಮಿಕರು, ಶಿಕ್ಷಕರು,ಬಸ್ಸುಗಳ ಸಂಚಾರ ಅನುಭವಿಸಿದರು.
ಕೆಲವು ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಶಾಲೆಗಳಿಗೆ ರಜೆ ಘೋಷಿಸಿ ಮಕ್ಕಳನ್ನು ವಾಪಸ್ ತಮ್ಮ ಶಾಲಾ ವಾಹನಗಳಲ್ಲಿ ಮನೆಗಳಿಗೆ ಕಳಿಸಿ ಬಂದ್ ಗೆ ಬೆಂಬಲ ಸೂಚಿಸಿದ್ದು ಕಂಡು ಬಂದಿತ್ತು, ಆಟೋರಿಕ್ಷಾ ಚಾಲಕರು ಬಂದಗೆ ಬೆಂಬಲಿಸಿದರು.
ಕುಡಿಯುವುದಕ್ಕಾಗಲಿ ಎನ್ನುವುದಕ್ಕಾಗಲಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಏನು ಸಿಗಲಿಲ್ಲ. ಬನಶಂಕರಿ ದೇವಸ್ಥಾನದಿಂದ ಮುಖ್ಯ ರಸ್ತೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತದಿಂದ ವಾಪಸ್ ಹಳೆ ತಶಿಲ್ದಾರ್ ಕಚೇರಿ ಮುಂದೆ ಜಮಾಯಿಸಿ ಧರಣಿ ಆರಂಭಿಸಿದರು.
ಮಾಜಿ ಶಾಸಕ ಎ,ಎಸ್ ಪಾಟೀಲ್ ನಡಹಳ್ಳಿ ಮುಖಂಡರಾದ ಮಲಕೇಂದ್ರಗೌಡ ಪಾಟೀಲ್, ಎಂ, ಎಸ್, ಪಾಟೀಲ್, ಎಂ,ಬಿ ಅಂಗಡಿ, ಮಲ್ಲಯ್ಯ ಬಿರಾದಾರ್, ಗುರುನಾಥ್ ಗೌಡ ಬಿರಾದಾರ್, ಕೆಂಚಪ್ಪ ಬಿರಾದಾರ್, ಗಿರೀಶ್ ಗೌಡ ಪಾಟೀಲ್, ಸಂಗು ಹತ್ತಿ, ಲಕ್ಷ್ಮಣ ಬಿಜುರ್, ಸಂಗಮ ದೇವನಹಳ್ಳಿ, ಗೌರಮ್ಮ ಹುನಗುಂದ್, ಶಿವು ಕನ್ನೊಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪನವರ್, ಮಲ್ಲಿಕಾರ್ಜುನ್ ತಂಗಡಗಿ, ಗಿರೀಶ್ ನಾಟೇಕರ್, ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಜನರು ಬಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಿಪಿಐ ಮೊಮ್ಮದ್ ಪಸಿವು ದಿನ್, ಪಿಎಸ್.ಐ ವಿಜಯ್ ಕುಮಾರ್ ತಳವಾರ್, ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ
