🚨ಬ್ರೇಕಿಂಗ್ ನ್ಯೂಸ್: ಸತ್ಯ ಶೋಧನಾ ವಿಶೇಷ ವರದಿ🚨🔥ಉಡುಪಿಯಲ್ಲಿ ಸಿಂಗಮ್‌ಗಳಂತಹ ದಕ್ಷ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳು ಇರುವಾಗ್ಯೂ ಲೋಕಾಯುಕ್ತ ‘ಸೆಲೆಕ್ಟಿವ್’ ದಾಳಿಗಳ ಮರ್ಮವೇನು? ಪಿಡಬ್ಲ್ಯೂಡಿ ಭ್ರಷ್ಟರ ರಕ್ಷಣೆಗೆ ನಿಂತವರಾರು? ಬಡವರ ಕಲ್ಯಾಣ ಇಲಾಖೆಗಳನ್ನೇ – ಬಲಿಪಶು ಮಾಡುತ್ತಿರುವ ವ್ಯವಸ್ಥಿತ ಸಂಚು ಬಯಲು..!
ಉಡುಪಿ ಸೆ.12

ರಾಜ್ಯಾದ್ಯಂತ ಭ್ರಷ್ಟಾಚಾರದ ಬೇರುಗಳನ್ನು ಅಗೆದು ತೆಗೆಯುವುದಾಗಿ ಬೀಗುವ ಲೋಕಾಯುಕ್ತ ಇಲಾಖೆಯ ಕಾರ್ಯಾಚರಣೆಯ ಶೈಲಿ ಈಗ ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಉಡುಪಿಯಲ್ಲಿ ಸಿಂಗಮ್‌ಗಳಂತಹ ದಕ್ಷ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ, ಪಿಡಬ್ಲ್ಯೂಡಿ ವಿಷಯದಲ್ಲಿ ಮಾತ್ರ ಇಂತಹ ಮೌನವೇಕೆ ಎಂಬ ಗಂಭೀರ ಪ್ರಶ್ನೆ ಈಗ ಸಾರ್ವಜನಿಕರನ್ನು ಕಾಡುತ್ತಿದೆ. ಕೋಟ್ಯಂತರ ರೂಪಾಯಿಗಳ ಕೊಳ್ಳೆ ಹೊಡೆಯುವ.
ದೊಡ್ಡ ದೊಡ್ಡ ತಿಮಿಂಗಿಲಗಳ ಅಡ್ಡೆಯಾಗಿರುವ ಲೋಕೋಪಯೋಗಿ ಇಲಾಖೆ (PWD) ಕಡೆಗೆ ಇದು ವರೆಗೂ ತನಿಖಾ ಸಂಸ್ಥೆಗಳು ಕಣ್ಣೆತ್ತಿಯೂ ನೋಡ ದಿರುವುದೇಕೆ? ಕೇವಲ ಕಂದಾಯ, ಪಂಚಾಯತ್ ರಾಜ್ ಮತ್ತು ದುರ್ಬಲ ವರ್ಗಗಳ ಕಲ್ಯಾಣ ಇಲಾಖೆಗಳ ಮೇಲಷ್ಟೇ ಮುನಿಸು ಕೊಂಡು ದಾಳಿ ನಡೆಸುತ್ತಿರುವುದರ ಹಿಂದಿನ “ಅಸಲಿ ಗುಟ್ಟು ಮತ್ತು ರಾಜಕೀಯ ಕುಮ್ಮಕ್ಕು” ಏನು ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ವ್ಯವಸ್ಥೆಯ ಮೇಲೆಯೇ ತೀವ್ರ ಆಕ್ರೋಶ ಭುಗಿಲೆದ್ದಿದೆ..!
⚠️ ಪಿಡಬ್ಲ್ಯೂಡಿ (PWD) ಮೇಲೆ ಲೋಕಾಯುಕ್ತ ‘ಮೌನ’ ದ ಹಿಂದೆ ಯಾರ ಕೃಪಾಕಟಾಕ್ಷ..?
ದೊಡ್ಡ ತಿಮಿಂಗಿಲಗಳಿಗೆ ಸುರಕ್ಷತಾ ಕವಚ?:-
ಪಿಡಬ್ಲ್ಯೂಡಿ ಇಲಾಖೆಯಲ್ಲಿ ನಡೆಯುವ ರಸ್ತೆ, ಸೇತುವೆ ಹಾಗೂ ಬೃಹತ್ ಕಟ್ಟಡಗಳ ಕಾಮಗಾರಿಗಳಲ್ಲಿ ಸಾವಿರಾರು ಕೋಟಿ ರೂ.ಗಳ ಕಮಿಷನ್ ದಂಧೆ ನಡೆಯುತ್ತಿದ್ದರೂ, ಇಲ್ಲಿಯ ವರೆಗೆ ಯಾವುದೇ ಪ್ರಮುಖ ಅಧಿಕಾರಿಯ ಮೇಲಾಗಲಿ ಅಥವಾ ಕಚೇರಿಯ ಮೇಲಾಗಲಿ ದಾಳಿ ನಡೆಯದಿರುವುದು ಆಶ್ಚರ್ಯಕರ ಹಾಗೂ ಅಚ್ಚರಿಯ ಸಂಗತಿ ಯಾಗಿದೆ.
ರಾಜಕೀಯ ನಾಯಕರ ದಲ್ಲಾಳಿಗಳ ಹಸ್ತಕ್ಷೇಪ..?:-
ಈ ಇಲಾಖೆಯ ಕಡತಗಳು ನೇರವಾಗಿ ಪ್ರಭಾವಿ ರಾಜಕಾರಣಿಗಳ ಮತ್ತು ಗುತ್ತಿಗೆದಾರರ ಹಿಡಿತದಲ್ಲಿರುವುದರಿಂದ, ತನಿಖಾ ಸಂಸ್ಥೆಗಳ ಕೈಗಳು ಇಲ್ಲಿ ಕಟ್ ಆಗಿವೆಯೋ ಅಥವಾ ಮೇಲ್ಮಟ್ಟದ ಒತ್ತಡದಿಂದ ಪಿಡಬ್ಲ್ಯೂಡಿಯನ್ನು ಮುಟ್ಟದಂತೆ ‘ಅಘೋಷಿತ ಆದೇಶ’ವಿದೆಯೋ ಎಂಬ ಸತ್ಯ ಸಾರ್ವಜನಿಕರನ್ನು ಕಾಡುತ್ತಿದೆ.
🔍 ಬಡವರ ಕಲ್ಯಾಣ ಮತ್ತು ಗಣಿ ಇಲಾಖೆಗಳನ್ನೇ ಟಾರ್ಗೆಟ್ ಮಾಡುವುದರ ‘ಮರ್ಮ’ ವೇನು..?
ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಇಲಾಖೆ, ಐಟಿಡಿಪಿ (ITDP), ಡಾ. ಬಿ.ಆರ್ ಅಂಬೇಡ್ಕರ್ ನಿಗಮ ಹಾಗೂ ಗಣಿ ಇಲಾಖೆಗಳ ಮೇಲೆ ಪದೇ ಪದೆ ದಾಳಿಗಳನ್ನು ನಡೆಸಿರುವುದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ “ಕಣ್ಣೊರೆಸುವ ತಂತ್ರ” ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ದೊಡ್ಡ ತಿಮಿಂಗಿಲಗಳನ್ನು ಬಿಟ್ಟು, ಸಣ್ಣಪುಟ್ಟ ನೌಕರರನ್ನು ಹಾಗೂ ಬಡವರಿಗಾಗಿ ಮೀಸಲಿರುವ ಇಲಾಖೆಗಳನ್ನು ಬಲಿಪಶು ಮಾಡುವ ಮೂಲಕ ಭ್ರಷ್ಟಾಚಾರದ ಅಸಲಿ ರೂವಾರಿಗಳನ್ನು ರಕ್ಷಿಸಲಾಗುತ್ತಿದೆಯೇ ಎಂಬ ಶಂಕೆ ಬಲವಾಗಿ ಮೂಡಿದೆ.
💸 ಈ ಇಲಾಖೆಗಳಲ್ಲಿ ಹಗರಣಗಳು ನಡೆಯುವ ‘ಕರಾಳ ಹಾದಿ’ (ಅವ್ಯವಹಾರದ ಹೆಜ್ಜೆ ಗುರುತುಗಳು)
ಸಮಾಜ ಕಲ್ಯಾಣ, ಐ.ಟಿ.ಡಿ.ಪಿ & ಅಂಬೇಡ್ಕರ್ ನಿಗಮ:-
ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ವಂಚಿಸುವುದು.
ಸ್ವಯಂ ಉದ್ಯೋಗ ಯೋಜನೆಗಳಡಿ ಸಾಲ ಮಂಜೂರು ಮಾಡಲು ಲಂಚಕ್ಕಾಗಿ ಹಪಾಹಪಿಸುವುದು ಹಾಗೂ ನಿಜವಾದ ಅರ್ಹ ಫಲಾನುಭವಿಗಳನ್ನು ಕಡೆಗಣಿಸಿ ಹಣ ಲಪಟಾಯಿಸುವುದು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:-
ಅಂಗನವಾಡಿ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಸರಬರಾಜು ಮಾಡ ಬೇಕಾದ ಪೌಷ್ಟಿಕ ಆಹಾರ ಹಾಗೂ ಪಡಿತರದಲ್ಲಿ ಕಳಪೆ ಗುಣಮಟ್ಟ ಬಳಸಿ, ಆಹಾರವನ್ನು ಕಳ್ಳ ಮಾರ್ಗದಲ್ಲಿ ಮಾರಾಟ ಮಾಡುವುದು.
ಮಾತೃ ವಂದನಾ ಹಾಗೂ ಇತರೆ ಪ್ರೋತ್ಸಾಹ ಧನಗಳ ಕಡತಗಳನ್ನು ವಿಲೇವಾರಿ ಮಾಡಲು ಮಧ್ಯವರ್ತಿಗಳ ಮೂಲಕ ದೊಡ್ಡ ಮಟ್ಟದ ಕಮಿಷನ್ ವಸೂಲಿ.
ಕಾರ್ಮಿಕ ಇಲಾಖೆ:-
ನೋಂದಾಯಿತ ಬಡ ಕಾರ್ಮಿಕರಿಗೆ ಸಿಗಬೇಕಾದ ಮದುವೆ, ಹೆರಿಗೆ ಮತ್ತು ವೈದ್ಯಕೀಯ ಸಹಾಯ ಧನಕ್ಕಾಗಿ ತಿಂಗಳು ಗಟ್ಟಲೆ ಕಚೇರಿಗೆ ಅಲೆಸಿ ಲಂಚಕ್ಕಾಗಿ ಪೀಡಿಸುವುದು.ನಕಲಿ ಕಾರ್ಮಿಕರ ಕಾರ್ಡ್‌ಗಳ ಬೃಹತ್ ಜಾಲವನ್ನೇ ಸೃಷ್ಟಿಸಿ, ಅಸಲಿ ಕಾರ್ಮಿಕರ ಹಕ್ಕನ್ನು ಕಸಿದು ಕೊಂಡು ಸರ್ಕಾರದ ಹಣವನ್ನು ದೋಚುವುದು.
ಗಣಿ ಮತ್ತು ಭೂವಿಜ್ಞಾನ ಇಲಾಖೆ:-
ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ಕೋಸ್ಕರ ಕಳ್ಳ ಸಾಗಾಣಿಕೆ ದಾರರೊಂದಿಗೆ ಕೈಜೋಡಿಸಿ, ಕೋಟ್ಯಂತರ ರೂಪಾಯಿಗಳ ಲಂಚದ ಹೊಳೆ ಹರಿಸುವುದು ಹಾಗೂ ಸರ್ಕಾರದ ಆದಾಯಕ್ಕೆ ಕನ್ನ ಕೊರೆಯುವುದು.
ಉಡುಪಿ ಜಿಲ್ಲೆಯಲ್ಲಿ ಭ್ರಷ್ಟಾಚಾರದ ಬೇರುಗಳನ್ನು ಬುಡಸಹಿತ ಕಿತ್ತಾಹಾಕುವುದೇ ಲೋಕಾಯುಕ್ತ ಗುರಿ ಯಾಗಿದ್ದರೆ, ಕೇವಲ ಬಡವರ ಕಲ್ಯಾಣ ಇಲಾಖೆಗಳನ್ನು ಮಾತ್ರ ಟಾರ್ಗೆಟ್ ಮಾಡುವುದನ್ನು ಬಿಟ್ಟು, ಸರ್ಕಾರದ ಬೊಕ್ಕಸವನ್ನು ಬರಿದು ಮಾಡುತ್ತಿರುವ ಲೋಕೋಪಯೋಗಿ (PWD) ಹಾಗೂ ಇತರ ಬೃಹತ್ ಇಲಾಖೆಗಳ ಮೇಲೂ ದಿಢೀರ್ ದಾಳಿಗಳು ನಡೆಯಬೇಕು.
ಇಲ್ಲವಾದರೆ, ಈ ತನಿಖೆಗಳ ಹಿಂದೆ ಯಾವುದೋ ಕಾಣದ ಕೈಗಳ ‘ಗಾಢವಾದ ಒಪ್ಪಂದ’ ವಿದೆ ಎಂಬ ಸಾರ್ವಜನಿಕರ ಸಂಶಯ ನಂಬಿಕೆಯಾಗಿ ಬದಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ..!
ವರದಿ:ಆರತಿ.ಗಿಳಿಯಾರು.ಉಡುಪಿ
