ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ – ಪ್ಲೈವುಡ್ ಮತ್ತು ಲೇಖನ ಸಾಮಗ್ರಿಗಳ ವಿತರಣೆ.
ಚಳ್ಳಕೆರೆ ಸೆ.12

ನಗರದ ಹೊರ ವಲಯದ ನರಹರಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತು ಜನ ವಿದ್ಯಾರ್ಥಿಗಳಿಗೆ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಪ್ಲೈವುಡ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ , ಕಾರ್ಯದರ್ಶಿ ಡಾ, ವಿದ್ಯಾ ಐತಾಳ್, ಖಜಾಂಚಿ ಡಾ.ಕವಿತಾ ನಾಗೇಶ್, ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಮೀರಾ ರಮೇಶ್, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ, ಬೆಳಗೆರೆ ಸುರೇಶ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸದಸ್ಯರಾದ ಸುಜಾತಾ, ಯಮುನಾ, ಸುಮ, ವಿಶಾಲಾಕ್ಷಿ ಪುಟ್ಟಣ್ಣ, ನಳಿನಬಾಬು, ಮಂಗಳಾ, ದೀಪಾ ರಾಘವೇಂದ್ರ, ಅಡಿಗೆ ಸಿಬ್ಬಂದಿ ಗೀತಮ್ಮ,ಮನು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
