ಪಿ.ಕೆ.ಪಿಎಸ್ ಅಭಿವೃದ್ಧಿಗೆ ರೈತರ ಸಹಕಾರ ಅಗತ್ಯ – ರವೀಂದ್ರ ಕಲಶೆಟ್ಟಿ.
ದೇವಣಗಾಂವ ಸೆ.21

ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ (ಪಿಕೆಪಿಎಸ್) ವತಿಯಿಂದ ಸನ್ 2025–26 ನೇ. ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಸಂಘದ ಆವರಣದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ರವೀಂದ್ರ ಈ. ಕಲಶೆಟ್ಟಿ ಅವರು ವಹಿಸಿದ್ದರು. ಉಪಾಧ್ಯಕ್ಷರಾದ ಬಸವರಾಜ ನಾ. ಪೂಜಾರಿ, ಕಾರ್ಯದರ್ಶಿಯಾದ ಯಲ್ಲಪ್ಪ ತಳವಾರ, ಆಡಳಿತ ಮಂಡಳಿಯ ಸದಸ್ಯರು, ಸಂಘದ ಸಿಬ್ಬಂದಿ, ರೈತ ಬಾಂಧವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಭೆಯಲ್ಲಿ ಅಧ್ಯಕ್ಷರಾದ ರವೀಂದ್ರ ಈ. ಕಲಶೆಟ್ಟಿ, ಉಪಾಧ್ಯಕ್ಷರಾದ ಬಸವರಾಜ ನಾ. ಪೂಜಾರಿ, ಕಾರ್ಯದರ್ಶಿಯಾದ ಯಲ್ಲಪ್ಪ ತಳವಾರ, ಆಡಳಿತ ಮಂಡಳಿ ಸದಸ್ಯರು ಹಾಗೂ ವೇದಿಕೆಯ ಮೇಲಿದ್ದ ಗಣ್ಯರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಉತ್ತಮ ವ್ಯವಹಾರ ನಡೆಸಿದ ರೈತರಿಗೆ ಗೌರವ:-
ದೇವಣಗಾಂವ, ಶಂಭೇವಾಡ, ಕಡ್ಲೇವಾಡ ಹಾಗೂ ಬ್ಯಾಡಗಿಹಾಳ ಗ್ರಾಮದ ಪಿ.ಕೆ.ಪಿ.ಎಸ್ ನೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿ ಕೊಂಡು ಬರುತ್ತಿರುವ ರೈತ ಬಾಂಧವರನ್ನು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ರವೀಂದ್ರ ಈ. ಕಲಶೆಟ್ಟಿ, ರೈತರು ಸಂಘದೊಂದಿಗೆ ನಿರಂತರವಾಗಿ ಉತ್ತಮ ವ್ಯವಹಾರ ನಡೆಸಿ ಕೊಂಡು ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯವಾಗಿದೆ. ರೈತರ ಸಹಕಾರವೇ ಸಂಘದ ಬಲವಾಗಿದ್ದು, ಪ್ರತಿಯೊಬ್ಬ ರೈತರೂ ಸಂಘದೊಂದಿಗೆ ಉತ್ತಮ ಮತ್ತು ನಿಯಮಬದ್ಧ ವ್ಯವಹಾರ ನಡೆಸಬೇಕು ಎಂದು ಹೇಳಿದರು.
ಸಂಘದ ವಿವಿಧ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿ ಕೊಂಡು, ಸಂಸ್ಥೆಯ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಶೇರು ಸದಸ್ಯರಾಗುವುದರಿಂದ ಸಂಘದ ಬಂಡವಾಳ ಹಾಗೂ ವ್ಯವಹಾರ ಬಲವರ್ಧನೆ ಯಾಗಲಿದೆ ಎಂದು ಅವರು ತಿಳಿಸಿದರು.
ರೈತರ ಆರ್ಥಿಕ ಚಟುವಟಿಕೆಗಳಿಗೆ ಪಿ.ಕೆ.ಪಿ.ಎಸ್ ಗಳ ಕೊಡುಗೆ:-

ಗ್ರಾಮೀಣ ಭಾಗದ ರೈತರ ಆರ್ಥಿಕ ಚಟುವಟಿಕೆಗಳಿಗೆ ಪಿ.ಕೆ.ಪಿ.ಎಸ್ ಗಳು ಪ್ರಮುಖ ಸಹಕಾರ ನೀಡುತ್ತಿವೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಾಲ ಸೌಲಭ್ಯ, ಉಳಿತಾಯ, ಠೇವಣಿ ಸೇರಿದಂತೆ ವಿವಿಧ ಸೇವೆಗಳನ್ನು ರೈತರು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಶೇರು ಸದಸ್ಯರಾಗುವುದರ ಜೊತೆಗೆ ಸಂಘದೊಂದಿಗೆ ನಿರಂತರವಾಗಿ ವ್ಯವಹಾರ ನಡೆಸಿದರೆ ಸಂಸ್ಥೆಯ ವ್ಯವಹಾರ ವಿಸ್ತಾರ ಗೊಂಡು, ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ:-
ಪಿ.ಕೆ.ಪಿ.ಎಸ್ ಉಪಾಧ್ಯಕ್ಷರಾದ ಬಸವರಾಜ ನಾ. ಪೂಜಾರಿ ಮಾತನಾಡಿ, ಸಂಘದ ಅಭಿವೃದ್ಧಿಗೆ ರೈತರ ಸಹಕಾರ ಅತ್ಯಂತ ಮುಖ್ಯವಾಗಿದೆ. ಪ್ರತಿಯೊಬ್ಬ ರೈತರೂ ಸಂಘದೊಂದಿಗೆ ನಿರಂತರವಾಗಿ ವ್ಯವಹಾರ ನಡೆಸಿ, ಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸ ಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಶೇರು ಸದಸ್ಯರನ್ನು ಸೇರ್ಪಡೆ ಗೊಳಿಸುವ ಮೂಲಕ ಸಂಘದ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಎಲ್ಲರೂ ಸಹಕರಿಸ ಬೇಕು ಎಂದು ಕರೆ ನೀಡಿದರು.
ಕಾರ್ಯದರ್ಶಿಯಾದ ಶ್ರೀ ಯಲ್ಲಪ್ಪ ತಳವಾರ ಅವರು ಸಂಘದ ವ್ಯವಹಾರ, ಸದಸ್ಯರ ಸಹಕಾರ ಹಾಗೂ ರೈತರಿಗೆ ಸಂಘದ ಮೂಲಕ ದೊರೆಯುತ್ತಿರುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ರೈತರು ಸಂಘದೊಂದಿಗೆ ಉತ್ತಮ ಸಂಬಂಧ ಹೊಂದಿ ನಿಯಮ ಬದ್ಧವಾಗಿ ವ್ಯವಹಾರ ನಡೆಸಿದರೆ ಸಂಸ್ಥೆಯು ಇನ್ನಷ್ಟು ಸದೃಢವಾಗಲಿದೆ ಎಂದು ತಿಳಿಸಿದರು.
ಅಚ್ಚುಕಟ್ಟಾಗಿ ನಿರೂಪಿಸಿದ ರಮೇಶ ಗಂಗನಳ್ಳಿ:-

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಪರಮಾನಂದ ಭೋಗಲಿಂಗೇಶ್ವರ ಸಂಯುಕ್ತ ಪದ ವಿಪೂರ್ವ ಕಾಲೇಜು, ಕಡಣಿಯ ಪ್ರಾಚಾರ್ಯರಾದ ರಮೇಶ ಎಸ್. ಗಂಗನಳ್ಳಿ ಅವರು ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು. ರೈತರನ್ನು ವೇದಿಕೆಗೆ ಆಹ್ವಾನಿಸಿ, ಅವರ ಸಹಕಾರವನ್ನು ಸ್ಮರಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಮನ ಮುಟ್ಟುವ ರೀತಿಯಲ್ಲಿ ನಿರೂಪಿಸಿದರು.
ಅಧ್ಯಕ್ಷರಾದ ರವೀಂದ್ರ ಈ. ಕಲಶೆಟ್ಟಿ, ಉಪಾಧ್ಯಕ್ಷರಾದ ಬಸವರಾಜ ನಾ. ಪೂಜಾರಿ, ಕಾರ್ಯದರ್ಶಿಯಾದ ಯಲ್ಲಪ್ಪ ತಳವಾರ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ ಸಮನ್ವಯದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಂಸ್ಥಾಪಕರನ್ನು ಸ್ಮರಿಸಿ ವಂದನಾರ್ಪಣೆ:-
ಕಾರ್ಯಕ್ರಮದ ಕೊನೆಯಲ್ಲಿ ಗದಗ್ ಜಿಲ್ಲೆಯ ಗಣಗನಾಳ ಗ್ರಾಮದಲ್ಲಿ 1905 ನೇ. ಇಸ್ವಿಯಲ್ಲಿ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಯಿತು. ಸಹಕಾರ ಕ್ಷೇತ್ರದಲ್ಲಿ ಅವರು ಬಿತ್ತಿದ ಸೇವಾ ಮನೋಭಾವ ಮತ್ತು ರೈತಪರ ಚಿಂತನೆಗಳನ್ನು ಸ್ಮರಿಸಿ, ಅವರ ಕೊಡುಗೆಗೆ ಕೃತಜ್ಞತಾ ಪೂರ್ವಕ ವಂದನೆ ಸಲ್ಲಿಸಲಾಯಿತು.
ಅವರ ಆಶಯದಂತೆ ಸಹಕಾರ ತತ್ವಗಳನ್ನು ಅಳವಡಿಸಿ ಕೊಂಡು, ರೈತರ ಹಿತಾಸಕ್ತಿಗೆ ಆದ್ಯತೆ ನೀಡಿ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ರೈತರ ಸಹಕಾರದಿಂದ ದೇವಣಗಾಂವ ಪಿ.ಕೆ.ಪಿ.ಎಸ್ ಮತ್ತಷ್ಟು ಬಲಿಷ್ಠವಾಗಿ ಬೆಳೆದು, ಹೆಚ್ಚಿನ ರೈತರಿಗೆ ಉತ್ತಮ ಸೇವೆ ನೀಡುವ ಸಂಸ್ಥೆಯಾಗಲಿ ಎಂಬ ಆಶಯದೊಂದಿಗೆ ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.
ದೇವಣಗಾಂವ, ಶಂಭೇವಾಡ, ಕಡ್ಲೇವಾಡ ಹಾಗೂ ಬ್ಯಾಡಗಿಹಾಳ ಗ್ರಾಮದ ರೈತರು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
