₹8.80 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಎನ್.ಎಸ್ ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ – ಅವರಿಂದ ಭೂಮಿ ಪೂಜೆ.

ಮಾನ್ವಿ ಸೆ.20

ಗ್ರಾಮೀಣ ಅಭಿವೃದ್ಧಿಗಾಗಿ ನಮ್ಮ ಅಧಿಕಾರಾವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇವೆ. ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಗ್ರಾಮಗಳ ಅಗತ್ಯಗಳನ್ನು ಗುರುತಿಸಿ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಜನರ ಜೀವನ ಮಟ್ಟ ಸುಧಾರಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು.

ಮಾನ್ವಿ ವಿಧಾನ ಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಒಟ್ಟು ₹8.80 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎನ್.ಎಸ್. ಬೋಸರಾಜು ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ್ ಅವರು ಜಂಟಿಯಾಗಿ ಭೂಮಿಪೂಜೆ ನೆರವೇರಿಸಿದರು. ಅಜಾದಿ ಅಮೃತ ಮಹೋತ್ಸವ ಶಾಲೆಯ ಅಭಿವೃದ್ಧಿಗೆ ₹5 ಲಕ್ಷ, ಹಿರೇಕೊಟ್ನೇಕಲ್ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹1.15 ಕೋಟಿ, ಮುದನೂರು ಗ್ರಾಮದಲ್ಲಿ ₹4.60 ಕೋಟಿ ಹಾಗೂ ಕಾತರಕಿ ಗ್ರಾಮದಲ್ಲಿ ₹3 ಕೋಟಿ ವೆಚ್ಚದ ಕಾಮಗಾರಿಗಳು ಸೇರಿದಂತೆ ಒಟ್ಟು ₹8.80 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಈ ಕಾಮಗಾರಿಗಳಲ್ಲಿ ಶಾಲಾ ಕೊಠಡಿ ನಿರ್ಮಾಣ, ಗ್ರಾಮೀಣ ರಸ್ತೆ ಅಭಿವೃದ್ಧಿ, ಸಿಸಿ ರಸ್ತೆ, ಚರಂಡಿ ಹಾಗೂ ವಿವಿಧ ಮೂಲಸೌಕರ್ಯ ಕಾಮಗಾರಿಗಳು ಒಳಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಲಾಗುತ್ತಿದೆ. ಪ್ರತಿಯೊಂದು ಗ್ರಾಮವೂ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಹಂತ ಹಂತವಾಗಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೋಸರಾಜು ತಿಳಿಸಿದರು.

ಮಂಜೂರಾದ ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಒಳಬಳ್ಳಾರಿಯ ಶ್ರೀಗಳು,ಅಡವಿ ಅಮರೇಶ್ವರ ಮಠದ ಶ್ರೀಗಳು, ಕಾಂಗ್ರೆಸ್ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಾಫುರ್ ಸಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿಕೆ ಅಮರೇಶಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ದೊಡ್ಡಬಸಪ್ಪಗೌಡ, ಸತ್ಯನಾರಾಯಣ ಅಮರೇಶ್ ವರ ಕ್ಯಾಂಪ್, ಮಾಲಿಗೌಡರು ಪ್ರಗತಿಪರ ರೈತರಾದ ರವಿ ಬಾಬು ,ಶರಣಯ್ಯ ನಾಯಕ್, ಸಿದ್ದಲಿಂಗಪ್ಪ ವಕೀಲರು,ಬಾಬು ರಡ್ಡಿ, ಸಂಗಮೇಶ, ಮಹಾದೇವಪ್ಪ ಗೌಡ ಕಟಾಲಿ, ಶಿವಾನಂದ ಸ್ವಾಮಿ, ಅಮರೇಗೌಡ ಉಮಾಳಿ ಹೊಸೂರು, ಅಲ್ಲಾ ಉದ್ದಿನ್, ಅಮರಪ್ಪ ಮ್ಯಾಕಲ್, ಶಿವರಾಜ್ ಉಮಳಿ ಹೊಸೂರ್, ನರಸಯ್ಯ ಮ್ಯಾಕಲ್, ಅಮರಯ್ಯ ನಾಯಕ್, ಮದಿರೆಡ್ಡಿ, ಬಾಲಯ್ಯ ನಾಯಕ್,ರಾಯಪ್ಪ ನಾಯಕ್, ಭೀಮಪ್ಪ ಮುಷ್ಟೂರ್, ಶಿವಲಿಂಗ ಮುಸ್ಟೂರು, ಬೀರಪ್ಪ, ವಿಶ್ವನಾಥ್, ಕಾತರಕಿ ನರಸಿಂಹ, ಅಯ್ಯನಗೌಡ ದದ್ದಲ್, ಸೈಯದ್ ನಜರದ್ದೀನ್ ಖಾದ್ರಿ, ವಸಂತ್ ಕೊಡ್ಲಿ, ಸೈಯದ್ ಖಾಲಿದ ಖಾದ್ರಿ, ಬಸವರಾಜ್ ಕೇಸರಿ, ಚಾಂದ್ ಪಾಷಾ ಗುತ್ತೇದಾರರು ಮಹೇಮದ, ಸತ್ತಾರ್ ಬಂಗ್ಲೆವಲೇ,ರಸೂಲ್ ಕುರಿಶಿ, ನಾನಿ,ಸ್ಥಳೀಯ ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button