ಗ್ರಾಮದಲ್ಲಿ 23 ನೇಯ ವರ್ಷದ ಆದಿಯೋಗಿ ಶಿವಶಕ್ತಿ ಮಂಟಪದಲ್ಲಿ ಅದ್ದೂರಿಯಾಗಿ – ಗಣೇಶೋತ್ಸವ ಆಚರಣೆ ಕಾರ್ಯಕ್ರಮ ಜರಗಿತು.

ಕೋಡಿಹಳ್ಳಿ ಸೆ.21

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಶ್ರೀ ಯುವ ವಿನಾಯಕ ಸಂಘ ಇವರ ಸಹಯೋಗದೊಂದಿಗೆ ಈ ಬಾರಿ ಶಕ್ತಿ ದೇವತೆಯಾದ ಶ್ರೀ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಶ್ರೀ ಗೌರಿ ಹಾಗೂ ಶಿವನ ನಾಗಸ್ವರೂಪಿ ಗಣೇಶನನ್ನು ಪ್ರತಿಷ್ಟಾಪಿಸಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.‎‎

ಪ್ರತಿ ದಿನ ಸಂಜೆ ಯುವಕ ಯುವತಿಯರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು, ಅಲ್ಲದೆ ಪ್ರತಿ ದಿನವೂ ವಿವಿಧ ಕುಟುಂಬಗಳಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಇರುತಿತ್ತು.

ಕೊನೆಯ ದಿನ ಇಡೀ ಸಮುದಾಯದ ಎಲ್ಲ ಜನತೆಗೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು, ಸುಮಾರು 10 ಅಡಿ ಏಳುಹೆಡೆ ಸರ್ಪದ ಮೇಲೆ ಕುಳಿತಿರುವ ಶಿವಸ್ವರೂಪಿ ಶ್ರೀ ಗಣೇಶ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ವಿಸರ್ಜನೆಗೆ ಚಾಲನೆ ನೀಡಲಾಯಿತು.

‎‎ಗ್ರಾಮದ ಎಲ್ಲಾ ರಾಜ ಬೀದಿಗಳಲ್ಲಿ ಡಿ.ಜೆ ಸದ್ದಿಗೆ ಹೆಜ್ಜೆ ಹಾಕುತ್ತಾ ನೂರಾರು ಯುವಕ ಯುವತಿಯರು ಹಿರಿಯರು ಕುಣಿದು ಕುಪ್ಪಳಿಸಿದರು ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಕೂಡಿತ್ತು,ಗ್ರಾಮದ ಜನರು ಗಣಪನಿಗೆ ವಿಶೇಷ ಪೂಜೆಯನ್ನು ಮಾಡಿಸಿದರು, ಸಾವಿರಾರು ಭಕ್ತರು ಗಣೇಶನ ಕೃಪೆಗೆ ಪಾತ್ರರಾದರು.‎

ಯಾವುದೇ ಅಹಿತಕರ ಘಟನೆಗಳು ನಡೆಯದೆ ಸುರಕ್ಷಿತವಾಗಿ ಗಣಪತಿಯನ್ನು ಪೂಜಾ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿ ನಮ್ಮ ಗ್ರಾಮದ ಕೆರೆಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.‎‎

ಈ ಗೌರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಸಣ್ಣ ನಾಗಯ್ಯ, ಎಂ.ಏಚ್ ತಿಪ್ಪೇಸ್ವಾಮಿ, ಮಲ್ಲಯ್ಯ, ಹನುಮಂತಪ್ಪ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ದುರುಗಣ್ಣ, ನಿಂಗಣ್ಣ, ಲಿಂಗರಾಜು. ಡಿ, ಮಲ್ಲಿಕಾರ್ಜುನಯ್ಯ. ಟಿ, ವಿನಯ್ ಕುಮಾರ್.ಬಿ.ಎಂ, ಮಂಜುನಾಥ್, ರುದ್ರಮುನಿ.ಏಚ್, ವಿಜಯ್ ಕುಮಾರ್.ಡಿ, ತಿಪ್ಪೇಸ್ವಾಮಿ.ಯು, ವಿಜಯ್ ಕುಮಾರ್.ಎಸ್ ಮೋಹನ್ ಡಿ ನಂದೀಶ್. ಓ ಶ್ರೀಧರ್. ಏಚ್ ನಿಂಗರಾಜು.ಟಿ,  ರಾಜು.ಡಿ ರಮೇಶ್.ಎಂ,ಗುರುಮೂರ್ತಿ, ಚಿದಾನಂದ್, ಉಪೇಂದ್ರ, ರವೀಶ್, ಮಲ್ಲಿಕಾರ್ಜುನ್.ಜಿ, ಅರುಣ್ ಕುಮಾರ್.ಟಿ, ದಯಾನಂದ. ಟಿ, ಡ್ಯಾನ್ಸ್ ಮಾಸ್ಟರ್ ವೆಂಕಟೇಶ್, ತಿಪ್ಪೇಶ್ , ಮನೋಜ್ ಕುಮಾರ್.ಟಿ, ಜಯಂತ್, ನಾಗೇಶ್, ಮಂಜು, ಕಿರಣ್, ಸ್ವಾಮಿ.ಆರ್, ಕೋಟೆಶ್, ಗೋಪಿನಾಥ್, ಮೈಲಾರಿ, ದುರುಗೇಶ್, ಅಭಿಷೇಕ್, ಮಾರಣ್ಣ, ಶಿವಪ್ಪ, ಭವೇಶ್, ಪರಶುರಾಮ್, ಕಣುಮೇಶ್, ಮಹೇಶ್, ಕೊಲ್ಲಾರಿ, ಗಣೇಶ್, ಹಾಗೂ ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.

ಮತ್ತು ಸಮುದಾಯದ ಎಲ್ಲ ಮುಖಂಡರು, ಯಜಮಾನರು ಸಮಸ್ತ ಯುವಕ ಯುವತಿಯರು, ಸರ್ವ ಸದಸ್ಯರ ಸಹಕಾರದೊಂದಿಗೆ ಈ ಬಾರಿಯ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಗೊಳಿಸಿದರು.

ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ‎

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button