ಸರಳ ಭಕ್ತಿಗೆ ಗೌರಿ-ಗಣೇಶರು ಒಲಿಯುತ್ತಾರೆ – ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಸೆ.20

ಗೌರಿ ಮತ್ತು ಗಣೇಶ ದೇವರು ಸರಳ ಮತ್ತು ಮುಗ್ಧ ಭಕ್ತಿಗೆ ಒಲಿಯುತ್ತಾರೆಂದು ಚಳ್ಳಕೆರೆಯ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ ಪಟ್ಟರು.
ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ವಿಜಯಲಕ್ಷ್ಮೀ ಕಾಂತರೆಡ್ಡಿ ಅವರ ಶ್ರೀಗುರು ತಿಪ್ಪೇರುದ್ರಸ್ವಾಮಿ ನಿವಾಸದಲ್ಲಿ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ “ಗೌರಿ-ಗಣೇಶ ಹಬ್ಬ” ದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸತ್ಸಂಗದ ಪ್ರಯುಕ್ತ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ವನಜಾಕ್ಷಿ ಮೋಹನ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಎಂ ಗೀತಾ ನಾಗರಾಜ್, ಪ್ರಮೀಳಾ ಜಗದೀಶ್, ಪ್ರೇಮಲೀಲಾ ರಾಮಣ್ಣ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ ನಾಮಾವಳಿ, “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಆರತಿ ಹಾಗೂ ಅನ್ನಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗದಲ್ಲಿ ವಿಜಯಲಕ್ಷ್ಮೀ, ಕಾಂತರೆಡ್ಡಿ, ವರಲಕ್ಷ್ಮೀ, ವಿಜಯ ನಿರ್ಮಲಾ, ಕೃತಿ, ದಿಶೀತಾ, ನಿದೀಪಾ, ಸುಚಿತ್ರಾ, ಸರೋಜಾ, ರೇಖಾ, ಹೆಚ್ ಲಕ್ಷ್ಮೀದೇವಮ್ಮ, ಪ್ರೇಮಾ, ಅಂಬುಜಾ, ವಿಜಯಲಕ್ಷ್ಮೀ, ಕವಿತಾ, ಅಂಬಿಕಾ, ಪರಮೇಶ್ವರ್, ಪುಷ್ಪಲತಾ ವಿಜಯ್, ಚಂದ್ರಕಲಾ, ದಾಕ್ಷಾಯಣಿ, ಸಂಗೀತ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ, ಪಂಕಜಾ, ನಾಗರತ್ನಮ್ಮ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

