ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ, ಮ – ಮಾನ್ಯ ತಹಶೀಲ್ದಾರ ಇವರ ಮೂಲಕ ಡಿ.ಎಸ್.ಎಸ್ ಸಂಘಟಕರಿಂದ ಮನವಿ ಸಲ್ಲಿಸಿದರು.

ಮುಂಡಗೋಡ ಸೆ.26

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕ ಶಾಖೆ ಮುಂಡಗೋಡ ಉತ್ತರ ಕನ್ನಡ ಜಿಲ್ಲೆ ವತಿಯಿಂದ ಮೊನ್ನೆ ದಿನಾಂಕ:-24-09-2026 ರಂದು ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ಮೆರವಣಿಗೆ ಮಾಡಿ ತಹಸೀಲ್ದಾರ ಮುಂಡಗೋಡ ರವರ ಮೂಲಕ ಭಾರತ ಸರ್ಕಾರಕ್ಕೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹೋರಾಟಗಾರರು ಮುಂಚೂಣಿ ನಾಯಕರಾದ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಂಘಟನಾ ಸಂಚಾಲಕರಾದ ಎಸ್.ಫಕೀರಪ್ಪ, ಜಿಲ್ಲಾ ಸಂಚಾಲಕರಾದ ಗೋಪಾಲ ನಡಕಿನಮನಿ, ಬಸವರಾಜ ಹಳ್ಳಮ್ಮನವರ ಜಿಲ್ಲಾ ಅಧ್ಯಕ್ಷರು ಡಿ.ವೈ.ಫ್, ಜೂಜೆ ಸಿದ್ದಿ ತಾಲೂಕ ಸಂಚಾಲಕರು ಮುಂಡಗೋಡ, ಸಂತೋಷ ಕಟ್ಟಿಮನಿ ಜಿಲ್ಲಾ ಅಧ್ಯಕ್ಷರು ವಿದ್ಯಾರ್ಥಿ ಒಕ್ಕೂಟ, ರಾಜು ಬುಟ್ಟಿಕೊರವರ ಅಧ್ಯಕ್ಷರು ಕೊರವರ ಸಮಾಜ ಮುಂಡಗೋಡ, ಹುಲಗಪ್ಪ ಭೋವಿವಡ್ಡರ ನಗರ ಸಂಚಾಲಕರು ಮುಂಡಗೋಡ, ನಾಗೇಂದ್ರ ಕರಗಸದವರ ಅಧ್ಯಕ್ಷರು ಚಲವಾದಿ ಸಮಾಜ ಮಳಗಿ, ನಾಗಪ್ಪ ಹರಿಜನ ಅಧ್ಯಕ್ಷರು ಮಾದರ ಸಮಾಜ ಮಳಗಿ, ಹನಮಂತ.ಫ ಹರಿಜನ ಕಾರ್ಯಾಧ್ಯಕ್ಷರು ಮಾದರ ಮಹಾ ಸಭಾ ಮಳಗಿ, ರತ್ನವ್ವ ವಾಲ್ಮೀಕಿ ಡಿ.ಎಸ್.ಎಸ್ ಸದಸ್ಯರು ಚವಡಿಳ್ಳಿ, ತನವೀರ ಮಿರ್ಜಾನಕರ ಅಧ್ಯಕ್ಷರು ಯುವ ರತ್ನ ವೇದಿಕೆ, ಪರಶುರಾಮ ಪೂಜಾರ ತಾಲೂಕ ಅಧ್ಯಕ್ಷರು ಮಾದರ ಮಹಾ ಸಭಾ, ಹನಮಂತ ಕಟ್ಟಿಮನಿ ಜಿಲ್ಲಾ ಸಂ, ಸಂಚಾಲಕರು ಕೆಂದಲಗೇರಿ, ನಾಗರಾಜ ಕಟ್ಟಿಮನಿ ಜಿಲ್ಲಾ ಅಧ್ಯಕ್ಷರು ಪ್ರಚಾರ ಸಮಿತಿ, ವೈ.ಬಿ ಲಕ್ಷ್ಮಣ್ಣ ಜಿಲ್ಲಾ ಸಂಘಟನಾ ಸಂಚಾಲಕರು ವರೂರು, ಭರಮಣ್ಣ ಮಾದರ ಜಿಲ್ಲಾ ಸಂ. ಸಂಚಾಲಕರು ರಂಗಾಪುರ, ಕಲ್ಲಪ್ಪ.ಎಂ ಹೋಳಿ ಜಿಲ್ಲಾ ಸಂ ಸಂಚಾಲಕರು ಕೀರವತ್ತಿ, ಸಂಗೀತಾ ಚಲವಾದಿ ಜಿಲ್ಲಾ ಅಧ್ಯಕ್ಷರು ದಲಿತ ಮಹಿಳಾ ಒಕ್ಕೂಟ ಹಳಿಯಾಳ, ದಲಿತ ಸಂಘಟನೆಯ ವಿವಿಧ ಹಂತದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ನಿಷ್ಠಾವಂತ ಕಾರ್ಯಕರ್ತರು ಪಾಲ್ಗೊಂಡು ಸನ್ಮಾನ್ಯ ಶ್ರೀ ಭಾರತ ಸರ್ಕಾರ ಪ್ರಧಾನ ಮಂತ್ರಿ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ ವಿಧಾನ ಸೌಧ ಇವರಿಗೆ ಮಾನ್ಯ ತಹಶೀಲ್ದಾರ ಮುಂಡಗೋಡ ಇವರ ಮೂಲಕ ಮನವಿ ಸಲ್ಲಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button