ಪ್ರವಾಸಿ ಮಂದಿರದಲ್ಲಿ ಡಿ.ಎಸ್.ಎಸ್ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ – ರಾಜ್ಯ ಸಂಚಾಲಕರಾಗಿ ಬಿ.ಎನ್ ಗಂಗಾಧರಪ್ಪ ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯೆ ಜರುಗಿತು.

ಹೊಳಲ್ಕೆರೆ ಸೆ.24

ಮಾಜಿ ರಾಜ್ಯ ಸಂಚಾಲಕರು ಡಿ.ಆರ್ ಪಾಂಡುರಂಗಸ್ವಾಮಿ ಸಭೆಯನ್ನು ಉದ್ದೇಶಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತೀರುವ ಕ್ಷಣ…..

ನಿನ್ನೆ ದಿನಾಂಕ:-23/09/2026 ಬುಧವಾರ ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪ್ರವಾಸಿ ಮಂದಿರದಲ್ಲಿ ಡಿ.ಎಸ್.ಎಸ್ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ರಿ.ನಂ:386/ 2000/21 ರ ರಾಜ್ಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು.

ಹಿರಿಯ ಹೋರಾಟಗಾರರಾದ ಸತ್ಯ ಭದ್ರಾವತಿ ಸಭೆಯ ಅಧ್ಯಕ್ಷತೆ ವಹಿಸಿದ ಕ್ಷಣ…..

ಸಭೆಯ ಅಧ್ಯಕ್ಷತೆಯನ್ನು ಹಿರಿಯ ಹೋರಾಟಗಾರರಾದ ಸತ್ಯ ಭದ್ರಾವತಿ ವಹಿಸಿದ ಅವರು ಸರ್ವ ಸಮ್ಮತವಾಗಿ ರಾಜ್ಯ ಸಂಚಾಲಕರಾನ್ನಾಗಿ ಬಿ.ಎನ್ ಗಂಗಾಧರಪ್ಪ ಅವರನ್ನು ಸೂಚಿಸಿದರು ಸಭೆಯಲ್ಲಿದ್ದ ಸರ್ವರು ಸಮ್ಮತವಾಗಿ ಚಪ್ಪಾಳೆ ಮೂಲಕ ಅನುಮೋದಿಸಿದರು.

ರಾಜ್ಯ ಸಂಘಟನಾ ಸಂಚಾಲಕರನ್ನಾಗಿ ಈ ಕೆಳ ಕಂಡವರನ್ನು ಆಯ್ಕೆ ಮಾಡಲಾಯಿತು…..

ಪಾಂಡುರಂಗಸ್ವಾಮಿ ಮಾಜಿ ಸಂಚಾಲಕರು ಸಭೆಯನ್ನು ಉದ್ದೇಶಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಡಿ.ಎಸ್.ಎಸ್ ಎನ್ನುವ ಸಂಘ ಗೂಟ ಜಡಕೊಂಡು ಕೂರುವುದಲ್ಲ ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುವುದಾಗಿದೆ ಸಂಘ ಯುವ ಪೀಳಿಗೆಗಳನ್ನ ಹುಟ್ಟು ಹಾಕುವ ಯಂತ್ರ ಆಗಬೇಕು, ನಿಂತ ನಿರಾಗದೆ ಪ್ರಾಕೃತಿಕವಾಗಿ ಸರಾಗವಾಗಿ ಹರಿಯುವಂತ ನೀರಾಗಬೇಕು ಎಂದರು.

ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆ ಜಗದ ನಿಯಮ ತ್ಯಾಗ ಮನೋಭಾವ ಎಲ್ಲರಲ್ಲೂ ಬರಲ್ಲ ಅದು ಸಮತೋಲನ ಕಾಯ್ದು ಕೊಳ್ಳುವ ಯುವಕರ ಪ್ರೇರಣೆಯ ಅಸ್ತ್ರವಾದಗ ಮಾತ್ರ ಸಂಘ ಸ್ಥಿರತೆ ಕಾಯ್ದು ಕೊಳ್ಳುವುತ್ತದೆ ಎಂದು ರಾಜ್ಯ ಸಂಘಟನಾ ಸಂಚಾಲಕರಾದ ಶಿವಪ್ಪ ಜಾಲಹಳ್ಳಿ ರಾಯಚೂರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ಸಂಘಟನಾ ಸಂಚಾಲಕರಾದ ಉಡಚಪ್ಪ ಮಾಳಗಿ ಹಾವೇರಿ ವಂದನಾರ್ಪಣೆ ಮಾಡಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button