ಪೌರ ಕಾರ್ಮಿಕರನ್ನು ಸದಾ ಸ್ಮರಿಸಬೇಕು ಗೌರವ ನೀಡಬೇಕು – ವಸಂತಕುಮಾರ್.

ತರೀಕೆರೆ ಸೆ.26

ಸಮಾಜದ ಸಾರ್ವಜನಿಕರ ಆರೋಗ್ಯ ಕಾಪಾಡುವವರು ಪೌರ ಕಾರ್ಮಿಕರು ಅವರ ಸೇವೆಯನ್ನು ಸದಾ ಸ್ಮರಿಸಬೇಕು ಎಂದು ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಹೇಳಿದರು. ಅವರು ಗುರುವಾರ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೌರಕಾರ್ಮಿಕರನ್ನು ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಹೇಳಿದರು.

ಪುರಸಭಾ ಸದಸ್ಯರಾದ ಲೋಕೇಶ್ ಮಾತನಾಡಿ ಪೌರಕಾರ್ಮಿಕರಿಗೆ ವಿಶ್ರಾಂತಿಗೃಹ ನಿರ್ಮಾಣ ಮಾಡಬೇಕು ಅವರು ಸಮಾಜದ ಆರೋಗ್ಯ ರಕ್ಷಕರು ಅವರಿಗೆ ಸರ್ಕಾರಿ ಸವಲತ್ತುಗಳನ್ನು ಒದಗಿಸಿ ಕೊಡಬೇಕು ಎಂದು ಹೇಳಿದರು.

ದಾದಾಪೀರ್ ಮಾತನಾಡಿ ಪೌರಕಾರ್ಮಿಕರ ವೃತ್ತಿಯನ್ನು ಸ್ವಾಭಿಮಾನ ಗಣತೆಯಿಂದ ಬಾಳುವುದನ್ನು ಡಾ, ಬಿ.ಆರ್ ಅಂಬೇಡ್ಕರ್ ಅವರು ತಿಳಿಸಿದ್ದಾರೆ ಅವರು ನೀಡಿದ ಸಂವಿಧಾನ ಪೌರ ಕಾರ್ಮಿಕರಿಗೆ ಆಶಾದಾಯಕವಾಗಿದೆ, ಐಪಿಡಿ ಸಾಲಪ್ಪನವರ ವರದಿ ಜಾರಿಗೆ ತರಬೇಕು ದಲಿತ ವರ್ಗದವರು ಮಾತ್ರ ಪೌರ ಕಾರ್ಮಿಕರ ವೃತ್ತಿ ಮಾಡುತ್ತಿದ್ದಾರೆ.

ಕುವೆಂಪುರವರು ಪೌರ ಕಾರ್ಮಿಕರನ್ನು ಗೌರವದಿಂದ ವರ್ಣಿಸಿದ್ದಾರೆ , ಬಸವಣ್ಣನವರು ಕಾಯಕದಿಂದ ಕೈಲಾಸ, ಯಾವ ವೃತ್ತಿಯೂ ಕನಿಷ್ಠವಲ್ಲ ಯಾವ ವೃತ್ತಿಯೂ ಗರಿಷ್ಠವಲ್ಲ ಎಂದು ಹೇಳಿದ್ದಾರೆ ಎಂದು ಹೇಳಿದರು.

ಟಿ ಎಂ ಭೋಜರಾಜ ಮಾತನಾಡಿ ಪೌರಕಾರ್ಮಿಕರಿಗೆ ವಸತಿ ಯೋಜನೆ ಕಲ್ಪಿಸಿ ಕೊಡಬೇಕು ಬುದ್ಧ ಅಂಬೇಡ್ಕರ್ ಗಾಂಧಿ ಬಸವಣ್ಣನವರು ಹೇಳಿದಂತೆ ಸಮಾಜ ಕಟ್ಟೋಣ ಪೌರಕಾರ್ಮಿಕರ ಕಷ್ಟ ಸುಖ ನೋವುಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಗೌರವ ಅರ್ಪಿಸೋಣ ಎಂದು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು ಹಾಗೂ ಜಿಲ್ಲಾ ಸಪಾಯ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಪೌರ ಕಾರ್ಮಿಕರ ಮಕ್ಕಳು ಡಿಸಿ, ಎಸ್.ಪಿ, ಡಾಕ್ಟ್ರು, ಇಂಜಿನಿಯರ್ ಗಳಾಗಬೇಕು ಅವರಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಬೇಕು, ತರೀಕೆರೆ ಪುರ ಸಭೆಯಲ್ಲಿ 52 ಪೌರ ಕಾರ್ಮಿಕರ ಹುದ್ದೆಗಳು ಮಂಜೂರಾತಿ ಹುದ್ದೆಗಳಿದ್ದು ಕೇವಲ 26 ಜನ ಮಾತ್ರ ಖಾಯಂ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುತ್ತಾರೆ ಇನ್ನು ಉಳಿದ 26 ಹುದ್ದೆಗಳು ಭರ್ತಿ ಮಾಡಬೇಕು, ಎಲ್ಲಾ ಪೌರ ಕಾರ್ಮಿಕರು ಖಾಯಂ ಹಾಗೆ ಕೆಲಸ ನಿರ್ವಹಿಸಬೇಕು ಈ ಕುರಿತು ದೆಹಲಿಯಿಂದ ಆಗಮಿಸಿದ್ದ ಕೇಂದ್ರದ ಸಪಾಯಿ ಕರ್ಮಚಾರಿ ಆಯೋಗದ ನಿರ್ದೇಶಕರಾದ ಹರ್ದಿಪ್ ಸಿಂಗ್ ಗಿಲ್ ಮತ್ತು ಕರ್ನಾಟಕದ ಸಪಾಯ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ ರಘು ಮತ್ತು ಸಪಾಯ ಕರ್ಮಚಾರಿ ಅಭಿವೃದ್ಧಿ ನಿಗಮದ, ಅಶೋಕ ಸಾಲಪ್ಪ ರವರು ಜಿಲ್ಲೆಗೆ ಭೇಟಿ ನೀಡಿದಾಗ ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದರು.

ಉಪ ವಿಭಾಗ ಮಟ್ಟದ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯರಾದ ಜಿ ಟಿ ರಮೇಶ್ ಮಾತನಾಡಿ ಪೌರ ಕಾರ್ಮಿಕರ ಸಮಸ್ಯೆಗಳು ಹೆಚ್ಚಾಗಿದ್ದು ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲರೂ ಕೈಜೋಡಿಸ ಬೇಕು ಎಂದರು.

ಪುರಸಭಾ ಮಾಜಿ ಅಧ್ಯಕ್ಷರಾದ ಪ್ರಕಾಶ್ ವರ್ಮ ಮಾತನಾಡಿ 128 ಕೋಟಿ ಜನರ ಆರೋಗ್ಯವನ್ನು ಪೌರ ಕಾರ್ಮಿಕರು ಕಾಪಾಡುತ್ತಿದ್ದಾರೆ ಪೌರ ಕಾರ್ಮಿಕರ ನೇಮಕಾತಿಗೆ ಕನ್ನಡ ಭಾಷೆ ಮಾತನಾಡಲು ಸಾಕು ಅವರ ಸೇವೆಯನ್ನು ಪ್ರತಿಯೊಬ್ಬರು ಗೌರವಿಸಬೇಕು ಪೌರ ಕಾರ್ಮಿಕರ ಮಕ್ಕಳು ಐಎಎಸ್, ಐಪಿಎಸ್, ಅಧಿಕಾರಿಗಳಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ದಿವ್ಯ, ಯಶೋದಮ್ಮ, ಆಶಾ, ಆದಿಲ್ ಪಾಶ, ಮುಂತಾದವರು ಮಾತನಾಡಿದರು ಕಾರ್ಯಕ್ರಮವನ್ನು ಪುರಸಭಾ ಉಪಾಧ್ಯಕ್ಷರಾದ ಶಮಿಮ್ ಭಾನು ರವರು ಉದ್ಘಾಟಿಸಿದರು ನವಲೇ ಬ್ರದರ್ಸ್ ನ ಕಲ್ಯಾಣಕುಮಾರ್ ರವರು ಪೌರ ಕಾರ್ಮಿಕರ ಸೇವೆ ದೇಶದಲ್ಲಿ ತುಂಬಾ ಅಮೂಲ್ಯವಾದದ್ದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭಾ ಮುಖ್ಯ ಅಧಿಕಾರಿಯಾದ ತಹೇರಾ ತಸ್ನೆಮ್ ರವರು ಮಾತನಾಡಿ ಪೌರ ಕಾರ್ಮಿಕರು ಪ್ರತಿ ದಿನ ಮುಸುಕಲಿ ಎದ್ದು ನಿದ್ದೆ, ಮಳೆ, ಗಾಳಿ, ಬಿಸಿಲು, ಚಳಿ ಲೆಕ್ಕಿಸದೆ ಸ್ವಚ್ಛತೆಯನ್ನು ಮಾಡುತ್ತಾರೆ ಅವರಿಂದ ಪಟ್ಟಣ ಸುಂದರ ಸ್ವಚ್ಛವಾಗಿದೆ ಪುರಸಭಾ ಸಿಬ್ಬಂದಿ ವರ್ಗ, ಚುನಾಯಿತ ಪ್ರತಿನಿಧಿಗಳು ಎಲ್ಲರೂ ಅವರಿಗೆ ಸಹಕರಿಸಿದ್ದಾರೆ. ಪ್ರತಿ ಪೌರ ಕಾರ್ಮಿಕರಿಗೆ ಸರ್ಕಾರ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ತಲಾ ಏಳು ಸಾವಿರ ರೂಗಳು ವಿಶೇಷ ಭತ್ಯೆ ನೀಡಲಾಗಿದೆ ಪುರ ಸಭೆಯು ಸ್ವಚ್ಛತೆ ಜೊತೆಗೆ ಉತ್ತಮ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ಪುರಸಭಾ ಸದಸ್ಯರಾದ ಪಾರ್ವತಮ್ಮ, ಗೀತಾ ಗಿರಿರಾಜ್, ವಸಂತ, ಗಿರಿಜಾ ಪ್ರಕಾಶ್ ವರ್ಮ, ರಿಹಾನ ಪರ್ವೀನ್, ಪೌರ ಕಾರ್ಮಿಕರಾದ ಲಲಿತಮ್ಮ ಶಿವಲಿಂಗ ಉಪಸ್ಥಿತರಿದ್ದು ಇದೇ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ಜಯಗಳಿಸಿದ ಪೌರ ಕಾರ್ಮಿಕರಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಆಡಳಿತ ಚುನಾಯಿತ ಪ್ರತಿನಿಧಿಗಳಿಗೂ ಬಹುಮಾನ ವಿತರಿಸಲಾಯಿತು ಮತ್ತು ಪೌರ ಕಾರ್ಮಿಕರಿಗೆ ವಿಶೇಷ ಭತ್ಯೇಯ ಚೆಕ್ ವಿತರಣೆ ಮಾಡಿ ನೆನಪಿನ ಕಾಣಿಕೆಯನ್ನು ನೀಡಲಾಯಿತು.

ಉತ್ತಮ ಸೇವೆ ಸಲ್ಲಿಸಿದ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನಿತಾ ಮತ್ತು ತಂಡದವರು ನಾಡಗೀತೆ ಹಾಡಿದರು ಶ್ರೀನಿವಾಸ್ ಪ್ರಾರ್ಥಿಸಿ ಆರೋಗ್ಯ ನಿರೀಕ್ಷಕರಾದ ಸಂಪತ್ ಕುಮಾರ್ ಅವರು ಸ್ವಾಗತಿಸಿ ನಿರೂಪಿಸಿ ಪರಮೇಶ್ ವಂದಿಸಿದರು.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್ ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button