ಸರ್ವ ಧರ್ಮ ಸಾಮೂಹಿಕ ವಿಶೇಷ – ಪ್ರಾರ್ಥನಾ ಕಾರ್ಯಕ್ರಮ ಜರಗಿತು.
ಮಾನ್ವಿ ಅ.02


ಮಳೆ-ಬೆಳೆ ಸಮೃದ್ಧಿಗಾಗಿ ಪಟ್ಟಣದ ಸರ್ವ ಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಆವರಣದಲ್ಲಿ ಸರ್ವ ಧರ್ಮ ಸೇವಾ ವೆಲ್ಫೇರ್ ಟ್ರಸ್ಟ್, ಭಾರತೀಯ ಸೇವಾ ಸಮಿತಿ ಹಾಗೂ ಕನಸು ಫೌಂಡೇಶನ್‌ಗಳ ಸಂಯುಕ್ತಾಶ್ರಯದಲ್ಲಿ ಸರ್ವಧರ್ಮ ಸಾಮೂಹಿಕ ವಿಶೇಷ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಹವಾಮಾನ ವೈಪರೀತ್ಯದಿಂದಾಗಿ ಮಳೆ ಕೊರತೆಯಾಗಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಗಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿದರೆ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಜನರ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಆಶಿಸಿದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿ, ಈ ಬಾರಿ ಮಳೆಗಾಲದಲ್ಲಿಯೂ ಬೇಸಿಗೆಯಷ್ಟೇ ಬಿಸಿಲು ಕಾಣಿಸಿ ಕೊಂಡಿದೆ. ಹಿಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಎದುರಾದಾಗ ನಮ್ಮ ಹಿರಿಯರು ದೇವರ ಮೊರೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಹಲವು ಸಂದರ್ಭಗಳಲ್ಲಿ ಪ್ರಾರ್ಥನೆಯ ನಂತರ ಉತ್ತಮ ಮಳೆಯಾದ ಉದಾಹರಣೆಗಳಿವೆ.
ಸರ್ವ ಧರ್ಮ ಸೇವಾ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷ ಹನುಮಂತ ಕೋಟೆ ಅವರು ಹಲವು ವರ್ಷಗಳಿಂದ ಜನಪರ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿದ್ದು, ಈ ಬಾರಿ ಮಳೆಗಾಗಿ ಸರ್ವ ಧರ್ಮಗಳ ಗುರುಗಳನ್ನು ಒಂದೆಡೆ ಸೇರಿಸಿ ಸಾಮೂಹಿಕ ಪ್ರಾರ್ಥನೆ ಆಯೋಜಿಸಿರುವುದು ಶ್ಲಾಘನೀಯ ಎಂದರು.
ನಾಡಿಗೆ ಸಮೃದ್ಧ ಮಳೆ-ಬೆಳೆ ಕರುಣಿಸಿ, ಜನರ ಸಂಕಷ್ಟಗಳನ್ನು ನಿವಾರಿಸಲಿ ಎಂದು ಪ್ರಾರ್ಥಿಸಿದರು. ಸುವರ್ಣ ಗಿರಿ ಮಠದ ಶಂಕರಯ್ಯಸ್ವಾಮಿ, ಮುಸ್ಲಿಂ ಧರ್ಮ ಗುರುಗಳಾದ ಸೈಯದ್ ಖಮರುದ್ದೀನ್ ಖಾದ್ರಿ ಸಾಹೇಬ್, ದರ್ಗಾ ಸಜ್ಜಾದಾ ನಶೀನ್ ಹಜರತ್ ಸೈಯದ್ ಷಾ ಇರ್ಫಾನ್ ಖಾದ್ರಿ ಸಾಹೇಬ್ ಹಾಗೂ ಕವಿತಾಳ ಮೆಥೋಡಿಸ್ಟ್ ಚರ್ಚ್‌ನ ಸೂರ್ಯದಾಸ್ ಸೇರಿದಂತೆ ವಿವಿಧ ಧರ್ಮಗಳ ಗುರುಗಳು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸರ್ವ ಧರ್ಮ ಸೇವಾ ವೆಲ್ಫೇರ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಡಾ, ಹನುಮಂತ ಕೋಟೆ, ಬಾಲಸ್ವಾಮಿ ಕೊಡ್ಲಿ, ತಿಪ್ಪಣ್ಣ ಬಾಗಲವಾಡ, ಈರೇಶ ಹುಲುಗುಂಚಿ, ಸಾಹಿರಾಬಾನು, ಶರಣು ಮುದ್ದಿನ್ ಗುಡ್ಡಿ, ಕೃಷ್ಣ ಮೂರ್ತಿ ಕಲ್ಲೂರ್ (ಅಧ್ಯಕ್ಷರು, ಅರೆ ಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ ರಾಯಚೂರು), ಎಸ್. ಮಲ್ಲಯ್ಯ (ಗೌರವಾಧ್ಯಕ್ಷರು, ಸಿರಿವಾರ), ಜೆ. ಆಂಜನೇಯ್ಯ್ (ಜಿಲ್ಲಾ ಪ್ರಧಾನ್ ಕಾರ್ಯದರ್ಶಿ, ನೀರಮಾನ್ವಿ), ಬಸವರಾಜ್ ನಾಯಕ ಮುಸ್ಟೂರ್ (ತಾಲೂಕು ಅಧ್ಯಕ್ಷರು, ಮಾನ್ವಿ), ಯೋಗೇಶ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಟ್ಟಣದ ಸರ್ವ ಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಆವರಣದಲ್ಲಿ ವಿವಿಧ ಧರ್ಮಗಳ ಗುರುಗಳಿಂದ ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
