ಪರದೋಷ ನೋಡದೆ ಸದ್ಗುಣಗಳನ್ನು ಗುರುತಿಸ ಬೇಕು – ಜಿ.ಯಶೋಧಾ ಪ್ರಕಾಶ್.

ಚಳ್ಳಕೆರೆ ಅ.02

ಶ್ರೀಮಾತೆ ಶಾರದಾದೇವಿಯವರು ತಿಳಿಸಿರುವಂತೆ ನಮಗೆ ಮನಃಶಾಂತಿ ಬೇಕಿದ್ದರೆ ಪರದೋಷ ನೋಡದೆ ಬೇರೆಯ ವರಲ್ಲಿರುವ ಸದ್ಗುಣಗಳನ್ನು ಗುರುತಿಸುವ ಅಭ್ಯಾಸವನ್ನು ಬೆಳೆಸಿ ಕೊಳ್ಳಬೇಕು ಎಂದು ಚಳ್ಳಕೆರೆಯ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.

ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ‘ಶ್ರೀಶಾರದಾದೇವಿ ಜೀವನಗಂಗಾ’ ಗ್ರಂಥ ಪಾರಾಯಣ ಮಾಡುತ್ತ “ಮಾತೆಯ ಮಡಿಲು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಸತ್ಸಂಗದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ವಿಶೇಷ ಭಜನೆ, ಶ್ರೀಮದ್ ಭಗವದ್ಗೀತೆಯ ಜ್ಞಾನಯೋಗದ ಶ್ಲೋಕಗಳ ಕಲಿಕಾ ತರಗತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ನಾಗರತ್ನಮ್ಮ, ಶಾಂತಮ್ಮ, ಗೀತಾಲಕ್ಷ್ಮೀ, ಭ್ರಮರಂಬಾ, ಸರಸ್ವತಿ, ಕೃಷ್ಣವೇಣಿ, ರಶ್ಮಿ, ವೀರಮ್ಮ,ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ,ಸುಧಾಮಣಿ, ಜಯಶೀಲಮ್ಮ, ಭಾಗ್ಯಲಕ್ಷ್ಮೀ, ದ್ರಾಕ್ಷಾಯಣಿ ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button