ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಬನಶಂಕರಿ ಭಜನಾ – ಮಂಡಳಿಯಿಂದ ವಿಶೇಷ ಭಜನೆ.

ಚಳ್ಳಕೆರೆ ಅ.06

ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಶ್ರೀಬನಶಂಕರಿ ಭಜನಾ ಮಂಡಳಿಯ ಮುಖ್ಯಸ್ಥರಾದ ಶ್ರೀಮತಿ ಸರ್ವಮಂಗಳಾ ಮತ್ತು ಸುಧಾಪ್ರಭು ನೇತೃತ್ವದಲ್ಲಿ ವಿಶೇಷ ಭಜನೆ, ವೇದಮಂತ್ರ ಪಠಣ, ಶ್ರೀಮದ್ ಭಗವದ್ಗೀತೆಯ ಭಕ್ತಿಯೋಗದ ಶ್ಲೋಕಗಳ ಪಠಣ ನಡೆಯಿತು.

ಭಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀನರಹರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ, ವೈ ರಾಜಾರಾಮ್ ಗುರುಗಳು ಆಶೀರ್ವಚನ ನೀಡಿದರು‌.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀನರಹರೇಶ್ವರ ದೇವರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ಭಜನಾ ಸತ್ಸಂಗದಲ್ಲಿ ಮಾತೃಶ್ರೀ ರಾಜೇಶ್ವರಿ, ನಿರ್ಮಲಾ, ವಿಜಯಾ, ಗೀತಾ, ಗೀತಾ ಪ್ರಸನ್ನ, ಶಾಂತಾ, ನಂದಿನಿ, ಗೀತಾ ಪ್ರಕಾಶ್, ಚೇತನಾ, ಲತಾ, ಸುನಂದಾ, ಸುನೀತಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಸರಸ್ವತಿ ಗೋವಿಂದರಾಜು, ಸುಶೀಲಮ್ಮ ಅಯ್ಯಪ್ಪ, ಟೈಲರ್ ಸರಸ್ವತಿ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ರಾಮಚಂದ್ರಪ್ಪ, ರೇವಣಸಿದ್ಧಯ್ಯ, ಧನಂಜಯ, ಅಶ್ವಿನಿ ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button