ಮಾದರಿಯಾದ ಗಣೇಶ ಉತ್ಸವದ ಉಳಿದ – ಹಣದಿಂದ ಸಮಾಜ ಸೇವೆ..!
ಮಾನ್ವಿ ಅ.06


ಎನ್.ಜಿ.ಜಿ ಬಾಯ್ಸ್ ಗಜಾನನ ಸೇವಾ ಸಮಿತಿ ವತಿಯಿಂದ ಯಂಕಪ್ಪ ತಾತನ ಮಠ, ನಮಾಜ್‌ಗೇರಿ ಗುಡ್ಡದಲ್ಲಿ ಯುವಕರ ನೇತೃತ್ವದಲ್ಲಿ ಗಣೇಶನ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಕಾರ್ಯಕ್ರಮವನ್ನು ಭಕ್ತಿ. ಭಾವದಿಂದ ನಡೆಸಲಾಯಿತು.

ಗಣೇಶೋತ್ಸವದ ಅಂಗವಾಗಿ ಸಂಗ್ರಹವಾದ ಹಣದಲ್ಲಿ ಕಾರ್ಯಕ್ರಮದ ಖರ್ಚುಗಳನ್ನು ನಿರ್ವಹಿಸಿದ ಬಳಿಕ ಉಳಿದ ಹಣವನ್ನು ಸಮಾಜ ಮುಖಿ ಕಾರ್ಯಗಳಿಗೆ ಬಳಸುವ ಮೂಲಕ ಸಮಿತಿಯ ಯುವಕರು ಮಾದರಿ ಕಾರ್ಯ ಮಾಡಿದ್ದಾರೆ.ಎನ್.ಜಿ.ಜಿ

ಉಳಿದ ಹಣದಿಂದ ನೆರಳು ಅನಾಥಾಶ್ರಮ ಹಾಗೂ ಶ್ರೀ ಚನ್ನಬಸವೇಶ್ವರ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಹಣ್ಣು-ಹಂಪಲು, ಸಿಹಿ. ತಿಂಡಿ ಹಾಗೂ ಒಂದು ತಿಂಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಅದೇ ರೀತಿ ಶ್ರೀ ಉದ್ಭವ ಆಂಜನೇಯ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ₹5,000 ದೇಣಿಗೆ ನೀಡಲಾಯಿತು. ಶ್ರೀ ವೆಂಕಪ್ಪ ತಾತನ ಮಠಕ್ಕೂ ₹5,000 ದೇಣಿಗೆಯನ್ನು ಸಮಿತಿಯ ವತಿಯಿಂದ ನೀಡಲಾಯಿತು.
ಗಣೇಶೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಅನಾಥರು ಹಾಗೂ ವಿಶೇಷ ಮಕ್ಕಳಿಗೆ ನೆರವು ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆದ ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಶಿವಾನಂದ ನಾಯಕ, ಸಂಜೀವ ನಾಯಕ್, ಸುದರ್ಶನ್ ಪೂಜಾರಿ, ವಿನಾಯಕ ಪೂಜಾರಿ, ಹನುಮಂತ ನಾಯಕ್, ಮುದಿರಂಗಪ್ಪ ಇರಬಗೇರಿ, ಸಾಬಣ್ಣ ನಾಯಕ್, ರಮೇಶ್, ಸೂರ್ಯ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಯುವಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

