ಶರಣರ ಸಂಘ ರಾಜ್ಯ ಘಟಕ ಉದ್ಘಾಟನೆ, ಸರ್ವ ಧರ್ಮ ಭಾವೈಕ್ಯ ದಿಂದ – ಸಮಾಜ ಕಟ್ಟೋಣ ಎಂದು ಕರೆ ನೀಡಿದರು.

ಮಾನ್ವಿ ಅ.06

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಶ್ರೀ ಸರ್ವ ಧರ್ಮ ಭಾವೈಕ್ಯತೆಯ ಸಮ್ಮಿಲನ ಹಾಗೂ ಶರಣರ ಸಂಘದ ರಾಜ್ಯ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸರ್ವ ಧರ್ಮ ಭಾವೈಕ್ಯತೆಯ ಸಮ್ಮಿಲನ, ಶರಣರ ಸಂಘ ರಾಜ್ಯ ಘಟಕದ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸುರಪುರ ಕ್ಷೇತ್ರ ದೇವಿಪುರದ ಶ್ರೀ ರವಿಮುತ್‌ತ್ಯಾ ಗುರುಗಳು ಮಾತನಾಡಿ, ಸಾಧು ಸಂತರು ಹಾಗೂ ಶರಣರ ಹಾದಿಯಲ್ಲಿ ಸೌಹಾರ್ದತೆಯಿಂದ ಮುನ್ನಡೆಯ ಬೇಕು. ಸರ್ವ ಧರ್ಮ ಭಾವೈಕ್ಯತೆಯ ಸಂದೇಶವನ್ನು ರಾಜ್ಯದಾದ್ಯಂತ ಪಸರಿಸಿ, ಸಂಘಟನೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಆಶೀರ್ವಚನ ನೀಡಿದರು.

ಕಕ್ಕೇರಾ ಕ್ಷೇತ್ರದ ಶ್ರೀ ಶರೀಫ್ ಶಿವಯೋಗಿಗಳು ಮಾತನಾಡಿ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳು ಸಮುದ್ರದಲ್ಲಿ ಒಂದಾದ ಬಳಿಕ ಯಾವ ನದಿಯ ನೀರು ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ. ಅದೇ ರೀತಿ ಸರ್ವ ಧರ್ಮ ಭಾವೈಕ್ಯತೆಯ ಸಮ್ಮಿಲನ ಶರಣರ ಸಂಘದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಸೌಹಾರ್ದತೆಯಿಂದ ಒಂದಾಗಿ ಮುನ್ನಡೆಯ ಬೇಕು ಎಂದರು.

ಚಿಕ್ಕಬಳ್ಳಾರಿಯ ಗುರುಗಳಾದ ಮಂಜುಪ್ಪ ತಾತನವರು ಉಪಸ್ಥಿತರಿದ್ದರು. ಸಂಘದ ರಾಜ್ಯಾಧ್ಯಕ್ಷ ಹಾಗೂ ಸಂಸ್ಥಾಪಕ ಹುಸೇನ್ ಭಾಷ ಮುದಗಲ್ ತಾತನವರು ಅಧ್ಯಕ್ಷತೆ ವಹಿಸಿದ್ದರು.

ಸಂಘದ ಉಪಾಧ್ಯಕ್ಷ ಬಸವರಾಜ ಹುಡಾ, ಪ್ರಧಾನ ಕಾರ್ಯದರ್ಶಿ ರಂಜಾನ್‌ ಅಮರಾವತಿ, ಖಜಾಂಚಿ ಈರಪ್ಪ ದದ್ದಲ್, ಸಂಘಟನಾ ಕಾರ್ಯದರ್ಶಿಗಳಾದ ತಾಜುದ್ದೀನ್ ಚಿಕಲಪರ್ವಿ ಹಾಗೂ ಚನ್ನಬಸವ ಚಾರ್ಲೆ ಹರವಿ, ಸಹ ಕಾರ್ಯದರ್ಶಿ ಶಮೀದ್ ವಲಿ, ರಜಾಸಾಬ್ ಉಮಾಳಿ ಹೊಸೂರು ಮೊದಲಾದವರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button