ಸಾಂತ್ವನ ಮೂರ್ತಿ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಜಿ ಯಶೋಧಾ ಪ್ರಕಾಶ್.
ಚಳ್ಳಕೆರೆ ಅ.08


ಶ್ರೀಮಾತೆ ಶಾರದಾದೇವಿಯವರು ತಮ್ಮ ಬಳಿಗೆ ಬರುತ್ತಿದ್ದ ಶಿಷ್ಯರು ಮತ್ತು ಭಕ್ತರ ಪಾಲಿಗೆ ಸಾಂತ್ವನ ನೀಡುವ ಮಹಾನ್ ತಾಯಿಯಾಗಿದ್ದರು ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.

ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಮಾತೆಯ ಮಡಿಲು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ, ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ವಿಶೇಷ ಭಜನೆ, ಶ್ರೀಮದ್ ಭಗವದ್ಗೀತೆಯ ಜ್ಞಾನಯೋಗದ ಶ್ಲೋಕಗಳ ಪಠಣ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಬಿ.ಸುಮನಾ ಕೋಟೇಶ್ವರ, ಗೀತಾಲಕ್ಷ್ಮೀ, ಶಾಂತಮ್ಮ, ಭ್ರಮರಂಬಾ, ಕೃಷ್ಣವೇಣಿ, ಸಂಗೀತ, ಶೈಲಜಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಭಾಗ್ಯಲಕ್ಷ್ಮೀ, ನಾಗರತ್ನಮ್ಮ, ಕವಿತಾ, ವೀರಮ್ಮ, ದಾಕ್ಷಾಯಣಿ ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

